This page has not been fully proofread.

ಗೋವಾದಲ್ಲಿ
 
ಮತ್ತೊಮ್ಮೆ ಪಡುವಣದ ಗೋವೆಯ ತೀರದಲ್ಲಿ
ಮಧ್ವಮುನಿ ಪರಿವಾರ ವಾಸ್ತವ್ಯ ಹೂಡಿತ್ತು
ಶಂಕರ ಎಂಬುವ ಬ್ರಾಹ್ಮಣೋತ್ತಮನೊಬ್ಬ
ಅರ್ಪಿಸಿದ ನಲವತ್ತು ನೂರು ಕದಲಿಗಳನ್ನು
ಮೂರು ದಶ ಹಾಲಿನ ಕೊಡಗಳನ್ನು
ಕ್ಷಣದಲ್ಲಿ ಭುಜಿಸಿದರು ಆನಂದ ತೀರ್ಥರು
 
ಪಶುಪೆಯಲ್ಲಿ ಸಂಗೀತ ಪ್ರೌಢಿಮ
 
ಅಲ್ಲಿಂದ ಪಯಣವನು ಮುಂದರಿಸಿ ಮಧ್ವರು
ಪಶುಪ ಎಂಬುವ ಸ್ಥಳವ ತ್ವರಿತದಲ್ಲಿ ಸೇರಿದರು
ಜನನಿವೇದನೆಗವರು ಶೀಘ್ರದಲ್ಲಿ ಓಗೊಟ್ಟು
ಮೈಮರೆಸುವಂತಹ ಗಾಯನವ ಪಾಡಿದರು
ಒಮ್ಮೆಲೇ ಫಲಪುಷ್ಪ ತುಂಬಿದುವು ಮರಗಳಲಿ
ಎಂತಹ ಮಹಿಮೆ ! ಏನು ವೈಚಿತ್ರ್ಯ!
 
ಶ್ರೀ ಮಧ್ವವರ್ಣನ
 
ನಿರಪೇಕ್ಷ, ಗುಣಪೂರ್ಣ, ದೈತ್ಯ ಹೃದಯಕೆ ಶಲ್ಯ
ನಾಗನ ಸಮರು, ದುಃಶಾಸ್ತ್ರವೈರಿಗಳು
ಪೂರ್ಣ ಚಂದ್ರನ ತೆರದಿ ಕಾಂತಿಯನ್ನು ಸೂಸುವರು
ಹೃದಯ ವೈಶಾಲ್ಯದ ಆನಂದ ತೀರ್ಥರು
ಸಂಪೂರ್ಣ ಭಕ್ತಿಯಲಿ ಶ್ರೀ ಹರಿಯ ಪೂಜಿಸುತ
ಜನಮನದ ಅನುರಾಗ ಎಲ್ಲೆಲ್ಲೂ ಪಡೆದರು
 
ಮೂರ್ಲೋಕ ಭೂಷಣರು ಆನಂದ ತೀರ್ಥರು
ಅವರ ಮಹಿಮೆಗಳೆಲ್ಲ ಅಗಣಿತವು ಅದ್ಭುತವು
ಇಂತಹ ಮಹಿಮರ ಉತ್ತಮೋತ್ತಮ ಚರಿತೆ
ಶ್ರವಣ, ಕೀರ್ತನ ಮತ್ತು ಮನನಗಳ ನೆರವಿಂದ
ಯೋಗ್ಯ ಜನರಿಗೆ ಅವರ ಎಲ್ಲ ಭೀಷ್ಟಗಳನ್ನು
ಸಫಲಗೊಳಿಪುವು ಎಂದು ಸುರರು ಕೊಂಡಾಡಿದರು
 
170 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55