This page has not been fully proofread.

ಶರಧಿಯನು ಲಂಘಿಸಿದ ಹನುಮರಿವರು
ಗಂಗೆಯಲಿ ವಿಹರಿಸಿದ ಭೀಮರೀ ಮಧ್ವರು
ಶಿಷ್ಯರಿಗೆ ಇವುಗಳ ಸ್ಮರಣೆಯೇ ಇಲವಾಯ್ತು
ಇಲ್ಲದಿರೆ ಅವರುಗಳು ಶಂಕೆಯನು ತಾಳುತ್ತ
ಗಂಗೆಯನು ದಾಟುವುದು ಗುರುಗಳಿಗೆ ಶಕ್ಯವೆ ?
ಎಂದೆಲ್ಲ ಚಿಂತಿಸುತ ಕೂಡುತ್ತಲಿದ್ದರೆ ?
 
ಕಿರಣಗಳ ನೆರವಿಂದ ಜಗವ ಬೆಳಗುವ ಸೂರ್ಯ
 
ಜ್ಞಾನ ಕಿರಣದಿ ಮನವ ಬೆಳಗಿಸುವ ಮಧ್ವಾರ್ಯ
ಪಡುವಣದ ಬಾನಿನಲಿ ಅಸ್ತಮಿಸಿದಾ ಸೂರ್ಯ
ನಯನಗಳಿಗತಿ ದೂರ ಈ ಮಧ್ವ ಸೂರ್ಯ
ಸೂರ್ಯಾಸ್ತಮಾನದಲ್ಲಿ ಕಳೆಯಳಿದ ನಳಿನದ ಹಾಗೆ
ಬಾಡಿದವು ಶಿಷ್ಯರ ನೇತ್ರ ಕಮಲಗಳು
 
ಪಶುಪದವ ವಿನತ ತಾ ದಾಟಿದಾ ತರದಲ್ಲಿ
ಮಧ್ವಮುನಿ ದಾಟಿದರು ತುಂಬು ಗಂಗೆಯನು
ಧರಿಸಿದ್ದ ವಸ್ತ್ರದಲ್ಲಿ ಆದ್ರ್ರತೆಯ ಸುಳಿವಿಲ್ಲ
ದೂರ ತೀರದೊಳಿದ್ದ ನರದೇವ ಭೂದೇವ
ಕೌತುಕದ ಈ ನೋಟ ಕಂಡು ಅಚ್ಚರಿಗೊಂಡು
ಆನಂದ ತೀರ್ಥರಿಗೆ ಉದ್ದಂಡ ನಮಿಸಿದನು
 
ಇನ್ನೊಂದು ತೀರದಲಿ ಉಳಿದಿದ್ದ ಶಿಷ್ಯರಿಗೆ
ಗಂಗೆಯನು ದಾಟುವುದು ಅತಿ ಕಠಿಣವಾಯ್ತು
ರಾಜನನು ಲೀಲೆಯಲಿ ಮರುಳುಗೊಳಿಸಿದ ಗುರುವು
 
ಶಿಷ್ಯರನು ಕರತರಲು ನಾವೆ ಕಳುಹೆಂದರು
 
ಆಚಾರ್ಯರಾಣತಿಗೆ ಮಣಿಯುತ್ತಆ ರಾಜ
ಶಿಷ್ಯರನು ಕರೆತಂದ ನಾವೆಗಳ ಕಳುಹಿ
 
164 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31