This page has not been fully proofread.

ಅಗೆಯಲು ಹೇಳಿ ಅಗೆಯತೊಡಗಿದ ಈಶ್ವರದೇವ
"ಮಧ್ವಮುನಿಗಳು ಒಮ್ಮೆ ಪಯಣದ ಹಾದಿಯಲಿ
ಶಿವದೇವನೆಂಬೊಬ್ಬ ರಾಜನನು ಕಂಡರು
ಆ ರಾಜ ಪಥಿಕರಿಗೆ ಆದೇಶ ವೀಯುತ್ತ
ಈ ನೆಲವ ನೀವೆಲ್ಲ ಅಗೆಯಿರೆನ್ನುತಲಿದ್ದ "
ಮಧ್ವರಿಗೂ ಇಂತೆಯೇ ಆದೇಶವೀಯಲು
"ಅಗೆವ ಶೈಲಿಯನೊಮ್ಮೆ ತಿಳಿಸು ನೀನೆಂದರು"
 
ದುರುಳ ಈಶ್ವರ ದೇವ ಮಧ್ವಮಹಿಮೆಯನರಿಯ
ಅವರೊಬ್ಬ ಸಾಮಾನ್ಯ ಮನುಜರೆಂದರಿತಾತ
ಅಗೆಯತೊಡಗಿದ ನೆಲವ ಶೂರತ್ವದಿಂದ
ರಾಜನ ದರ್ಪವನು ಇಳಿಸಲೋಸುಗ ಅವರು
ಮಹಿಮೆಯನು ತೋರಿದರು ರಾಜನಲ್ಲಿ
ಇದರಿಂದ ಅಗೆತವನವ ನಿಲ್ಲಿಸಲೇ ಇಲ್ಲ
 
ಆನಂದ ತೀರ್ಥರು ವಾಯುದೇವರ ರೂಪ
ಸರ್ವ ಜೀವೋತ್ತಮರು, ಸಕಲ ದೋಷವಿಮುಕ್ತರು
ಸಕಲ ಚೇತನಕೆಲ್ಲ ಇವರು ಪ್ರೇರೇಪಕರು
ಬ್ರಹ್ಮಾದಿಗಳು ಸಕಲ ಚೇತನಕೆ ಒಡೆಯರು
ಇವರೊಳಗೆ ನೆಲೆಸಿರುವ ಲಕುಮಿಪತಿ ಮಾತ್ರ
ವಾಯುವಿನ ಪ್ರೇರಣೆಗೆ ನಿಲುಕದವನು
 
ಯಮ ಶೇಷ ಭವರನ್ನು ಸ್ಮರಿಸುವ ಮಂದಿಗೆ
ಭವದೊಳಗೆ ಉದ್ಭವಿಪ ದುಃಖಾಬಿಯೆಂಬುದು
ಕ್ಷಣದಲ್ಲಿ ಕಣ್ಮರೆ ಅವರ ಕೃಪೆಯಿಂದ
ಯಮ ಶೇಷ ಭವರಂಥ ಜಗದ ಪಾಲಕರೆಲ್ಲ
ವಾಯುದೇವರ ಸ್ತುತಿಸಿ, ಪಾಡಿ ನಲಿದಾಡುವರು
ಮಧ್ವಮುನಿ ಮಾರುತನ ಅವತಾರವಲ್ಲವೆ ?
 
158 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7