This page has not been fully proofread.

ಜರಾಘಟಿತನ ಪರಾಭವ
 
ಜರಾಘಟಿತ ಗೋತ್ರದ ದುರ್ಜನನು ಒಬ್ಬ
ಮೊರಡಿಕಾಯನೆಂಬುವುದು ಮತ್ತೊಂದು ಹೆಸರವಗೆ
ದುರುಳರಲಿ ದುರುಳನು; ಎಲ್ಲರನೂ ಕೆಣಕುವನು
ದೇವತಾ ವರದಾನ ಪಡೆದವನು ಆವನು
 
ಪ್ರತಿಭೆಯ ಪ್ರಭೆಯನ್ನು ಹೊಂದಿದ್ದನವನು
ಪ್ರಬಲರೆಲ್ಲರೂ ಅವನ ವಶದಲ್ಲಿ ಇದ್ದವರು
 
ಗುರುಪುತ್ರನಿಂದ ಅಪೂರ್ವ ಯಜ್ಞ
 
ಪ್ರಾಬಲ್ಯ ಮದದಿಂದ ಬೀಗುತ್ತಲಿದ್ದವನು
ಇಷ್ಟದೈವವು ತನಗೆ ಒಲಿದಿರುವುದೆಂದು
ಯಜ್ಞಯಾಗಾದಿಯಲಿ ಹಿರಿಮೆ ತನದೆಂದು
ಬೇರಾರಿಗೂ ಇದರ ಅರ್ಹತೆಯು ಇಲ್ಲವೆಂದು
ಇಂತೆಂದು ಹಲವಾರು ದುರ್ಯುಕ್ತಿಯಿಂದ
 
ಆ ಘಾತುಕನು ಜನತೆಯಲ್ಲಿ ಕಿರುಕುಳವ ಮೂಡಿಸಿದ
 
ಹೀಗಿರಲು, ಒಂದು ದಿನ ಆ ದುರುಳ ಮನುಜನು
 
ಆನಂದ ತೀರ್ಥರಿಗೆ ಅತ್ಯಂತ ಪ್ರಿಯರಾದ
ಪರಮಾಪ್ತ ಗುರುಪುತ್ರ ವಾಸುದೇವಾಚಾರ್ಯರಿಗೆ
ಹವನ ಹೋಮಾದಿಗಳಲಡ್ಡಿ ತಂದೊಡ್ಡಿದನು
ಆ ದುಷ್ಟನನು ನಿಗ್ರಹಿಸಿ ಶಿಷ್ಟರನು ರಕ್ಷಿಸಲು
ಆನಂದ ತೀರ್ಥರು ಸನ್ನದ್ಧರಾದರು
 
ಈ ಹಿಂದೆ ದ್ವಾಪರದಿ ಭೀಮಸೇನನು ಹೇಗೆ
ಧರ್ಮಸೂನುವಿನಿಂದ ಯಜ್ಞವನ್ನು ಮಾಡಿಸಿದ
ಅದರಂತೆ ಕಲಿಯುಗದಿ ಮಧ್ವಮುನಿ ನೆರವಿಂದ
ವಾಸುದೇವನ ಯಜ್ಞ ನಿರ್ವಿಘ್ನವಾಯ್ತು
ಮಧ್ವಮುನಿಗಳ ಕೀರ್ತಿ ಮುಗಿಲನ್ನು ಮುಟ್ಟಿತು
 
ಅಡಿಗಡಿಗೆ ಜನರವರ ಅಡಿಗಳಿಗೆ ನಮಿಸಿದರು
 
152 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47