This page has not been fully proofread.

ಜುಳು ಜುಳು ಹರಿಯುವ ನದಿಯ ನೀರಿನ ತೆರದಿ
ಮಧ್ವಮುನಿಗಳ ವಾಣಿ ತಡೆಯಿರದೆ ಹರಿದಿತ್ತು
ನಿಮ್ಮ ಪಾತ್ರದ ಭೂಮಿ ನೀರುಂಡು ತಣಿವಂತೆ
ಸಜ್ಜನರ ಮನವೆಲ್ಲ ತಂಪಾಗಿ ತಣಿದಿತ್ತು
ದುರ್ಜನರ ಮನವೆಲ್ಲ ಬರಡಾಗಿ ಉಳಿದಿತ್ತು
ತುಂಗ ಪ್ರದೇಶಕ್ಕೆ ನೀರೆಂತು ಹರಿವುದು ?
 
ರಜತ ಪೀಠಕ್ಕೆ ಪುನರಾಗಮನ
 
ಪರಿಪರಿಯ ಕೌತುಕವ ದಾರಿಯಲ್ಲಿ ತೋರಿ
 
ವಿಧವಿಧದ ಜನರಿಂದ ಸನ್ಮಾನ ಸ್ವೀಕರಿಸಿ
ಮರಳಿದರು ಮಧ್ವಮುನಿ ರಾಜತಾಸನ ಪುರಕೆ
ರಜತಗಿರಿಯಿಂದವರು ರಜತಪುರಿ ಸೇರಿದರು
ಅನಂತಾಸನನನ್ನು ಅತಿಯಾಗಿ ಸ್ತುತಿಸಿದರು
ಶ್ರೀ ಹರಿಯ ಕೃಪೆಯನ್ನು ಸಂಭ್ರಮದಿ ಪಡೆದರು
 
ಅಚ್ಯುತ ಪ್ರೇಕ್ಷರಿಗೆ ಆದ ಆನಂದ
 
ಅಚ್ಯುತ ಪ್ರಿಯರಾದ ಆನಂದ ತೀರ್ಥರು
ಅಚ್ಯುತ ಪ್ರೇಕ್ಷರಿಗೆ ಸಾಷ್ಟಾಂಗ ನಮಿಸಿದರು
ಹಲವಾರು ದಿನದಿಂದ ಶಿಷ್ಯನನ್ನು ಕಾಣದಲೆ
ಪರಿತಪಿಸಿ ಕಂಗೆಟ್ಟ ಗುರುವರೇಣ್ಯರಿಗೆ
ಶಿಷ್ಯನನು ಕಾಣುತಲೆ ಆನಂದವತಿಯಾಯ್ತು
ಆತನನು ಸ್ವಾಗತಿಸಿ ಹರುಷಗೊಂಡರು ಅವರು
 
a
 
ಬ್ರಹ್ಮ ಸೂತ್ರಕೆ ಬರೆದ ಆಚಾರ್ಯ ಭಾಷ್ಯ
ಈ ಮುನ್ನವೇ ಗುರುವ ಕೈಯ ಸೇರಿತ್ತು
ಅದನೋದಿ ಗುರುವರ್ಯ ಪುಳಕಗೊಂಡಿದ್ದರು
ಸಾಕ್ಷಾತ್ತು ಶಿಷ್ಯನನು ಇಂದು ನೋಡಿದ ಬಳಿಕ
ಗುರುವಿನ ಸಂತಸವು ನೂರುಮಡಿಯಾಯ್ತು
ಗುರು-ಶಿಷ್ಯ ಮಿಲನವು ಸಂಭ್ರಮದಿ ಕೂಡಿತ್ತು
 
148 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
3