This page has not been fully proofread.

ಶೋಭನ ಭಟ್ಟರಿಂದ ಮಧ್ವಮತ ಪ್ರಸಾರ
ಅಲ್ಲಲ್ಲಿ ಪ್ರವಚನವ ಆಗಾಗ್ಗೆ ನಡೆಸುತ್ತ
ದುರ್ಭಾಷ್ಯಗಳನೆಲ್ಲ ಎಲ್ಲೆಲ್ಲೂ ಖಂಡಿಸುತ
ಮಧ್ವ ಭಾಷ್ಯದಲುಕ್ತ ಉಕ್ತಿ ಉದ್ಧರಿಸುತ್ತ
ನಡೆದರಾ ಭಟ್ಟರು ದಿಗ್ವಿಜಯ ಸಾಧಿಸುತ
ಮಧ್ವಸಿದ್ಧಾಂತಗಳ ಶುದ್ಧ ಪ್ರತಿಪಾದಕರು
ಮಧ್ವ ಶಿಷ್ಯರ ನಿವಹದಗ್ರಗಾಮಿಗಳವರು
 
ಶಂಖ ಚೂರ್ಣಕನೊಬ್ಬ ಬಗೆಬಗೆಯ ಶಂಖಗಳ
ನುಚ್ಚು ನೂರಾಗಿಸುತ ಪುಡಿಗೈದನಂತೆ
ಶಂಖಗಳ ಜೊತೆಯಿದ್ದ ಬಲಮುರಿಯ ಬಗೆಯೊಂದು
ಚೂರ್ಣಕನ ಶಕ್ತಿಯನ್ನು ನಿಸ್ಸಾರಗೊಳಿಸಿತ್ತು
 
ಬಲಮುರಿಯ ಹಿರಿಮೆಯನ್ನು ಅರಿಯಲಾರದ ಆತ
ಅಪ್ರಯೋಜಕವೆಂದು ಅದ ಬಿಸುಟನಂತೆ
 
ಬಲಮುರಿಯ ಹಿರಿಮೆಯನು ಬಲ್ಲವರೆ ಬಲ್ಲರು
ಮೌಡ್ಯತೆ ಮುಸುಕಿನಲಿ ಮೌಲ್ಯ ಕಾಣುವುದೆ ?
ಮಧ್ವ ಶಾಸ್ತ್ರದ ಹಿರಿಮೆ ಬಲಮುರಿಗೆ ಸಮವಂತೆ
ಆ ಹಿರಿಮೆ ಅರಿಯದವ ಪುಣ್ಯ ಹೀನನೆ ಸರಿಯು
ಮಧ್ವ ಶಾಸ್ತ್ರವ ತೊರೆದು ಪುಣ್ಯ ತೊರೆವುದು ಸಲ್ಲ
ಮಧ್ವ ಶಾಸ್ತ್ರದ ಹಿರಿಮೆ ಸಾಮಾನ್ಯ ವಲ್ಲ
 
ಬಲಮುರಿಯ ಮೌಲ್ಯ ವನು ಬಲ್ಲ ಬಲ್ಲಿದನೊಬ್ಬ
ಮತ್ತೊಬ್ಬಗದ ಮಾರಿ ಲಾಭ ಗಳಿಸಿದನಂತೆ
ಪೂರ್ವದಲ್ಲಿ ಗಳಿಸಿದ್ದ ಪುಣ್ಯಗಳ ಫಲವಾಗಿ
ಬೆಲೆ ಇರದ ಬಲಮುರಿಯು ಅವಗೆ ಲಭಿಸಿತ್ತು
ಆದರದು ಆತನಿಗೆ ಲಭ್ಯವಿಲ್ಲದೆ ಹೋಯ್ತು
ಅವರವರ ಯೋಗ್ಯತೆಗೆ ಅವರವರ ಗಳಿಕೆ !
 
146 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23