This page has not been fully proofread.

ಹತ್ತಾರು ಪಂಡಿತರು ಹಲವಾರು ವಿಧದಲ್ಲಿ
ಸೂಕ್ಷ್ಮಾತಿ ಸೂಕ್ಷ್ಮದ ಸಂದೇಹ ಒಡ್ಡಿದರು
ಆಚಾರ್ಯ ಮುಖದಿಂದ ಎಲ್ಲದಕ್ಕೂ ವಿವರಣೆ !
ಸೋಲನೊಪ್ಪಿದರಾಗ ಆ ಎಲ್ಲ ಪಂಡಿತರು
"ಜ್ಞಾನಿಗಳ ಜಗದಲ್ಲಿ ನಿಮಗೆ ಸಮರಿಲ್ಲ"
ಇಂತೆಂದು ಮಧ್ವರನು ಪೊಗಳಿ ಸ್ತುತಿಸಿದರು
 
ಶೋಭನ ಭಟ್ಟರು ಮಧ್ವ ಶಿಷ್ಯರಾದರು
 
ಸಭೆಗೆ ಶೋಭಿತರೋರ್ವ ಶೋಭನ ಭಟ್ಟರು
ಜ್ಞಾನಿಗಳೊಳುತ್ತಮರು, ವೇದ ಪಾರಂಗತರು
ಎಲ್ಲದಕ್ಕೂ ಪರಿಹಾರ ಸೂಚಿಸುವ ಸಮರ್ಥರು
ಇಂಥ ವಿಬುಧೋತ್ತಮರು ಮಧ್ವರಿಗೆ ಶರಣು !
ಮಧ್ವರಿಗೆ ಸಮನಿಲ್ಲ ಜಗದ ಮೂಲೆಗಳಲ್ಲಿ
ಪಾಂಡಿತ್ಯ ಪ್ರಖರತೆಯು ಸೂರನಿಗೆ ಸಮವಹುದು
 
ಶೋಭನಾಚಾರ್ಯರು ವಿದ್ಯಾ ವಿಶೋಭಿತರು
ಶಾಸ್ತ್ರ ವಿಶ್ಲೇಷಣೆಗೆ ಮತ್ತೊಂದು ಹೆಸರವನ್ನು
ಅಂದು ಪ್ರಚಲಿತವಿದ್ದ ಎಲ್ಲ ಮತಗಳ ಜಯಿಸಿ
ಆಧ್ಯಾತ್ಮಲೋಕದ ಪ್ರಭುವೆಂದು ಖ್ಯಾತರು
ಮಧ್ವಮುನಿಗಳ ದಿವ್ಯ ಸಮ್ಮುಖದಿ ಕುಳಿತವರು
ಆಚಾರ್ಯ ಭಾಷ್ಯವನ್ನು ಶ್ರವಣ ಮಾಡಿದರು
 
ಅರವಿಂದ ಕುಸುಮದ ಮಕರಂದವನ್ನು
ಸವಿದು ಸಂತಸಗೊಂಡ ಹಂಸಪಕ್ಷಿಗೆ ಮತ್ತೆ
ಮತ್ತೊಂದು ಪುಷ್ಪದ ಮಧುವು ರುಚಿಯಹುದೆ ?
ಮಧ್ವ ಭಾಷ್ಯದ ಸವಿಯ ರುಚಿ ಕಂಡ ಭಟ್ಟರಿಗೆ
ಮತ್ತಾವ ಭಾಷ್ಯವೂ ರುಚಿಸದಂತಾಯ್ತು
ಎಂತಹ ಸವಿ ಇಹುದು ಆಚಾರ್ಯ ಭಾಷ್ಯದಲಿ ?
 
ಒಂಬತ್ತನೆಯ ಸರ್ಗ / 145
 
16
 
17
 
18
 
19