2023-02-21 18:39:31 by ambuda-bot
This page has not been fully proofread.
ಬ್ರಹ್ಮ ಸೂತ್ರ ಭಾಷ್ಯ ರಚನೆ : ಭಾಷ್ಯ ವರ್ಣನೆ
ವಾಸುದೇವನ ಸಕಲ ಕಲ್ಯಾಣ ಗುಣಗಳು
ವ್ಯಾಸಮುನಿ ಹೃದಯಕ್ಕೆ ಅತ್ಯಂತ ಸನಿಹ
ಇವುಗಳನ್ನು ಬಣ್ಣಿಸುವ ಪರಮಾತ್ಮ ಸೂತ್ರಗಳು
ಸಾರುವುವು ಪರಮಾತ್ಮ ದೋಷವರ್ಜಿತನೆಂದು
ಜ್ಞಾನ ಭಕ್ತಿಗಳನ್ನು ಸುಲಭದಲ್ಲಿ ಕರುಣಿಸುವು
ಚಿರಸುಖದ ನೆಲೆಯಾದ ಮುಕುತಿಯನು ನೀಡುವುವು
ಬ್ರಹ್ಮಸೂತ್ರದ ಭಾಷೆ ಅತಿ ಗೂಢವಹುದು
ವಿಬುಧ ಮುನಿವರ್ಗ ತಿಳಿಯದ ಪರಿಭಾಷೆ
ಇಂಥ ಶಾಸ್ತ್ರಕೆ ನಮ್ಮ ಆನಂದ ತೀರ್ಥರು
ವೇದ ವಾಕ್ಯವನೆಲ್ಲ ಉದಹರಿಸಿ ಹೇಳುತ್ತ
ಬಾರಿಬಾರಿಗೂ ಅರ್ಥ ವಿವರಣೆಯ ನೀಡುತ್ತ
ಪ್ರಪ್ರಥಮ ಭಾಷ್ಯವನ್ನು ರಚಿಸತೊಡಗಿದರು
ಬಾಲರು, ಬಾಲಿಶರು, ಪ್ರೌಢಾಪ್ರಬುದ್ಧರು
ಎಲ್ಲರಿಗೂ ಎಟಕುವ ವಿವರಣೆಯ ಕೌಶಲ್ಯ
ಅಲ್ಲಲ್ಲಿ ಕಬ್ಬಿಣದ ಕಡಲೆಯಂತಹ ವಾಕ್ಯ
ಸುಪ್ರಸನ್ನತೆಯನ್ನು ಪಸರಿಸುವ ಪದಪುಂಜ
ಸುಜನ ಸಜ್ಜನ ಮನಕೆ ಆಪ್ಯಾಯಮಾನ
ಭೀಷಣವು ದುರ್ವಾದಿ ಪ್ರತಿಪಕ್ಷ ಜನಕೆ
ವಾಕ್ಯ ರಚನೆಗಳೆಲ್ಲ ಅತ್ಯಂತ ಶುದ್ಧ
ವ್ಯಾಕರಣ ನಿಯಮಕ್ಕೆ ಸಂಪೂರ್ಣ ಬದ್ಧ
ಅರ್ಥ ಗರ್ಭಿತ ಮಾತು, ವ್ಯರ್ಥವೆನಿಸದ ವಚನ
ಸಕಲ ಸಲ್ಲಕ್ಷಣದಿ ಶೋಭಿಸುವ ವ್ಯಾಖ್ಯಾನ
ದೇವಗಣಕೂ ಕೂಡಿ ಮುದವ ನೀಡುವ ತೆರದಿ
ಮಧ್ವಮುನಿ ರಚಿಸಿದರು ಬ್ರಹ್ಮಸೂತ್ರಕೆ ಭಾಗ್ಯ
8
9
10
ವಾಸುದೇವನ ಸಕಲ ಕಲ್ಯಾಣ ಗುಣಗಳು
ವ್ಯಾಸಮುನಿ ಹೃದಯಕ್ಕೆ ಅತ್ಯಂತ ಸನಿಹ
ಇವುಗಳನ್ನು ಬಣ್ಣಿಸುವ ಪರಮಾತ್ಮ ಸೂತ್ರಗಳು
ಸಾರುವುವು ಪರಮಾತ್ಮ ದೋಷವರ್ಜಿತನೆಂದು
ಜ್ಞಾನ ಭಕ್ತಿಗಳನ್ನು ಸುಲಭದಲ್ಲಿ ಕರುಣಿಸುವು
ಚಿರಸುಖದ ನೆಲೆಯಾದ ಮುಕುತಿಯನು ನೀಡುವುವು
ಬ್ರಹ್ಮಸೂತ್ರದ ಭಾಷೆ ಅತಿ ಗೂಢವಹುದು
ವಿಬುಧ ಮುನಿವರ್ಗ ತಿಳಿಯದ ಪರಿಭಾಷೆ
ಇಂಥ ಶಾಸ್ತ್ರಕೆ ನಮ್ಮ ಆನಂದ ತೀರ್ಥರು
ವೇದ ವಾಕ್ಯವನೆಲ್ಲ ಉದಹರಿಸಿ ಹೇಳುತ್ತ
ಬಾರಿಬಾರಿಗೂ ಅರ್ಥ ವಿವರಣೆಯ ನೀಡುತ್ತ
ಪ್ರಪ್ರಥಮ ಭಾಷ್ಯವನ್ನು ರಚಿಸತೊಡಗಿದರು
ಬಾಲರು, ಬಾಲಿಶರು, ಪ್ರೌಢಾಪ್ರಬುದ್ಧರು
ಎಲ್ಲರಿಗೂ ಎಟಕುವ ವಿವರಣೆಯ ಕೌಶಲ್ಯ
ಅಲ್ಲಲ್ಲಿ ಕಬ್ಬಿಣದ ಕಡಲೆಯಂತಹ ವಾಕ್ಯ
ಸುಪ್ರಸನ್ನತೆಯನ್ನು ಪಸರಿಸುವ ಪದಪುಂಜ
ಸುಜನ ಸಜ್ಜನ ಮನಕೆ ಆಪ್ಯಾಯಮಾನ
ಭೀಷಣವು ದುರ್ವಾದಿ ಪ್ರತಿಪಕ್ಷ ಜನಕೆ
ವಾಕ್ಯ ರಚನೆಗಳೆಲ್ಲ ಅತ್ಯಂತ ಶುದ್ಧ
ವ್ಯಾಕರಣ ನಿಯಮಕ್ಕೆ ಸಂಪೂರ್ಣ ಬದ್ಧ
ಅರ್ಥ ಗರ್ಭಿತ ಮಾತು, ವ್ಯರ್ಥವೆನಿಸದ ವಚನ
ಸಕಲ ಸಲ್ಲಕ್ಷಣದಿ ಶೋಭಿಸುವ ವ್ಯಾಖ್ಯಾನ
ದೇವಗಣಕೂ ಕೂಡಿ ಮುದವ ನೀಡುವ ತೆರದಿ
ಮಧ್ವಮುನಿ ರಚಿಸಿದರು ಬ್ರಹ್ಮಸೂತ್ರಕೆ ಭಾಗ್ಯ
8
9
10