This page has not been fully proofread.

"ಸಿರಿರಮಣ, ಭೂರಮಣ, ನಾರಾಯಣ!
ಸಕಲ ಸದ್ಗುಣಕೆಲ್ಲ ಆಶ್ರಯವು ನೀನು
ನಿನ್ನ ಸೇವೆಯೆ ಎನಗೆ ಅಮೃತದ ಜಲಧಿ
ಆ ಜಲಧಿಯಲಿ ಮುಳುಗಲು ಅವಕಾಶ ನೀಡು
ನಿನ್ನ ಸನ್ನಿಧಿಯಲ್ಲಿ ನೆಲೆಯನ್ನು ನೀಡು
ಲಭಿಸದೀ ಸುಖವು ಮೂರ್ಲೋಕದಲ್ಲೂ
 
"ಕಲಿಗಾಲವೆಂಬುದಿದು ಮಲಿನವಾಗಿಹ ಕಾಲ
 
ಧರೆಯೊಳಗೆ ನಶಿಸಿಹವು ಸದ್ಗುಣಗಳೆಲ್ಲ
ತತ್ವಜ್ಞಾನವ ಪಡೆದ ಯೋಗ್ಯರೇ ಇಲ್ಲಿಲ್ಲ
ಶುದ್ಧ ಚೇತನರಾದ ಮಂದಿಯೂ ಇಲ್ಲಿಲ್ಲ
ಯೋಗ್ಯರಲ್ಲದ ಜನಕೆ ತತ್ವ ಬೋಧನೆಯೆ ?
ಶುನಕಕ್ಕೆ ನೀಡುವುದೆ ಹವ್ಯ ದಾನವನು ?"
 
ಮಧ್ವರಾಡಿದ ನುಡಿಯ ಆಲಿಸಿದ ಭಗವಂತ
ಸಂತೈಸಿದನು ಅವರ, ಇಂತೆಂದು ನುಡಿಯುತ್ತ
"ಸಜ್ಜನರು ಧರಯೊಳಗೆ ಇಂದಿಗೂ ಇಹರು
ಸೂತ್ರದಿಂ ಕಳಚಿರುವ ಮಣಿಗಳಂತಿಹರು
ದಯೆಯಿಂದ, ಪರಿಶುದ್ಧ ಶಾಸ್ತ್ರವಚನಗಳೆಂಬ
ಪರಿಶುದ್ಧ ಜಲದಿಂದ ಶುದ್ಧಿಗೊಳಿಸಿರಿ ಅವರ
 
"ಸೂರ ಕಿರಣದ ಪ್ರಖರ ಜಾಜ್ವಲ್ಯ ಪ್ರಭೆಯು
ಕೌಶಿಕಾ ನಿವಹವನು ವ್ಯಥೆಪಡಿಸುವಂತೆ
ದುಷ್ಟರಿಗೆ ಕಷ್ಟವನ್ನು ನೀಡುವಿರಿ ನೀವು
 
ತಾವರೆಯ ಸೂರ್ಯನಾ ಬೆಳಕು ಅರಳಿಸುವಂತೆ
 
ನಿಮ್ಮ ಕೀರ್ತಿಯ ಪ್ರಭೆಯು ನನ್ನ ಆಣತಿಯಂತೆ
ಅರಳಿಪುದು ಸಜ್ಜನರ ಹೃತ್ಕಮಲವ"
 
ಎಂಟನೆಯ ಸರ್ಗ / 137
 
48
 
49
 
50
 
51