This page has not been fully proofread.

"ಓ, ಮಧ್ವರಾಯರೇ ! ಮಾತೊಂದನಾಲಿಸಿರಿ
ನಿಮ್ಮ ಧೈರ್ಯಕೆ ನಾವು ಮಾರು ಹೋಗಿಹೆವು
ನಾವು ಹೇಳುವ ಮಾತು ವ್ಯಾಸರಿಗೂ ಸಮ್ಮತವು
ನಿರ್ಣಯವ ಮಾಡಿಹೆವು ದೇವಕಾರ್ಯದ ಬಗೆಗೆ
ಈ ಕಾರ್ಯಸಾಧನೆಯು ನಿಮ್ಮಿಂದಲೇ ಸಾಧ್ಯ
ಆಗಲೇ ಫಲಿಸುವುದು ನಿಮ್ಮ ಅವತಾರ
 
"ಅಸುರ, ದುರ್ಜನರೀಗ ದುರ್ಮಾರ್ಗದಲ್ಲಿ ನಡೆದು
 
ವೇದಾದಿ ಶಾಸ್ತ್ರಗಳ ಅರ್ಥವನ್ನು ಪಲ್ಲಟಿಸಿ
ಸ್ಟೇಚ್ಛೆಯಿಂದಲಿ ಅವಕೆ ಭಾಷ್ಯವನ್ನು ರಚಿಸಿಹರು
ಸಜ್ಜನಕೆ ಪ್ರಿಯವಾದ ಬ್ರಹ್ಮಸೂತ್ರಗಳೆಲ್ಲ
ಮರೆಯಾಗಿ ಹೋಗಿಹವು ಸಂಪೂರ್ಣವಾಗಿ
ತತ್ವಶಾಸ್ತ್ರದ ತಿರುಳು ನಾಶವಾಗಿದೆ ಇಂದು
 
"ದುರ್ಜನರು ಎಸಗಿರುವ ಇಂಥ ದುಷ್ಕೃತ್ಯಗಳು
ಧರ್ಮ ವಾಹಿನಿಗಿಂದು ಅಡಚಣೆಯ ನೀಡಿಹವು
 
ಅದಕಾಗಿ ನೀವೀಗ, ಓ ಪೂರ್ಣಪ್ರಜ್ಞರೇ !
ಬ್ರಹ್ಮ ಸೂತ್ರಕೆ ಭಾಷ್ಯ ತ್ವರಿತದಲ್ಲಿ ರಚಿಸಿರಿ
ನಮ್ಮ ಭಕ್ತರಿಗೆಲ್ಲ ಶುಭವನ್ನು ನೀಡಿರಿ
ಅದಕಾಗಿ ಶೀಘ್ರವೇ ಇಲ್ಲಿಂದ ಮರಳಿರಿ'
 
ಪರಮಾತ್ಮನಾ ವಾಣಿ ಸಂಕ್ಷಿಪ್ತವಾಗಿತ್ತು
ಆದರೂ ಅರ್ಥದಲ್ಲಿ ವಿಸ್ತಾರವಾಗಿತ್ತು
ಜಗದೊಡೆಯ ಭಗವಂತನಾ ನುಡಿಯ ಕೇಳಿ
ಪರಮ ಜ್ಞಾನಿಗಳಾದ ಶ್ರೀ ಮಧ್ವಮುನಿಗಳು
ಪರಮಾತ್ಮ ರೂಪಗಳ ವಿರಹವನು ತಾಳದೆಯೆ
ಇಂತೆಂದು ನುಡಿದರು ದೇವಸನ್ನಿಧಿಯಲ್ಲಿ
 
136 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47