This page has not been fully proofread.

ಮರುತುತನ ಮುಖದಿಂದ ವಾರ್ತೆಯೊಂದನು ಕೇಳಿ
ಸಂತೋಷ ಸಂಭ್ರಮದ ಸುದ್ದಿಯಿಂದಲಿ ಹಿಗ್ಗಿ
ಮಧುವೈರಿ ಪಯಣಿಸಿದ ಮುಂದಕ್ಕೆ ಸಾಗಿ
ಹರಿತಿಗ್ಧ ಚಕ್ರದಲ್ಲಿ ಶೋಭಿತನು ತಾನಾಗಿ
ಪುಣ್ಯಚರಿತರಿಂದೆಲ್ಲ ಸೇವಿತನು ತಾನಾಗಿ
ಕಡಲ ಮಧ್ಯದ ಪುರವ ವೈಭವದಿ ಸೇರಿದನು
 
ಮದಿಸಿದಾನೆಯ ತೆರದಿ ಗರ್ವವನು ತೋರಿದ್ದ
ಕುಂಭಕರ್ಣ ಎಂಬ ಸ್ಕೂಲ ದಾನವನನ್ನು
ಪ್ರಭುವು ಸಂಹರಿಸಿದನು ಸೋದರನ ಸಹಿತ
ಮೊನಚಾದ ಬಾಣಗಳ ದಿವ್ಯ ಪ್ರಯೋಗದಲ್ಲಿ
ಚಾಪವಿದ್ಯೆಯ ತನ್ನ ಕೌಶಲ್ಯ ತೋರುತ್ತ
ದಾನವರ ಸೈನ್ಯವನ್ನು ಸುಲಭದಲ್ಲಿ ಗೆಲಿದನು
 
ಅಗ್ನಿದೀಕ್ಷೆಯ ತೊಟ್ಟು ಪರಿಶುದ್ಧಳಾಗಿದ್ದ
ಪತ್ನಿಯಿಂದೊಡಗೂಡಿ ಸೋದರನ ಸಹಿತ
ಪರಮಾತ್ಮ ಹೊಕ್ಕನು ನಿಜಪುರಕೆ ಆಗ
ಬಹಳ ಕಾಲದವರೆಗೆ ಸಜ್ಜನರ ಪಾಲಿಸುತ
ಭಕ್ತರಾಭೀಷ್ಟವನ್ನು ಸರ್ವದಾ ನೀಡುತ್ತ
ಮೂಲರೂಪದೊಳಾತ ಐಕ್ಯವನ್ನು ಹೊಂದಿದನು
 
ಹರಿಕೀರ್ತಿ ಕಥನದಲ್ಲಿ ಪ್ರವೃತ್ತನಾಗಿ
ಪರಿಶುದ್ಧ ಮನವುಳ್ಳ ಬ್ರಾಹ್ಮಣನ ಪತ್ನಿಯಲಿ
ಹರಿಯು ಅವತರಿಸಿದನಲ್ಲಿ ಮತ್ತೊಂದು ಬಾರಿ
ಮಹಿದಾಸನೆಂಬುವ ಹೆಸರನ್ನು ಹೊತ್ತು
ಪೂಜ್ಯ ಚರಣನು ಎಂಬ ಖ್ಯಾತಿಯನ್ನು ಹೊತ್ತು
ಪರಿಪರಿಯ ಸಚ್ಛಾಸ್ತ್ರ ರಚಿಸಿದನು ಆತ
 
ಎಂಟನೆಯ ಸರ್ಗ । 133
 
32
 
33
 
34
 
35