This page has not been fully proofread.

ಸಕಲ ಭುವನಕೆ ಒಡೆಯ, ನಮ್ಮ ಭಗವಂತ
ಆತನಿಗೆ ಅತಿ ಪ್ರಿಯನು, ಭುಜಗ ಪತಿಯು
ಧರೆಯೊಳವತರಿಸಿದ ಈತ ಲಕ್ಷ್ಮಣನ ಹೆಸರಿನಲಿ
ಕಾಮ, ಅನಿರುದ್ಧರು, ಭರತ, ಶತ್ರುಘ್ನರು
ಇವರ ಅಗ್ರಜನೀಗ ಶ್ರೀ ರಾಮಚಂದ್ರ
ಇವನ ಕಾಂತಿಗೆ ನಮ್ಮ ಚಂದ್ರಮನೂ ಸಮನಲ್ಲ
 
ಸಜ್ಜನಕೆ ಉಪಟಳವ ನೀಡುತ್ತ ರಕ್ಕಸರು
ಶ್ವೇಚ್ಛೆಯಲಿ ಕಾನನದಿ ವಿಹರಿಸುತಲಿದ್ದರು
ಪರಮಾತ್ಮ ತೆರಳಿದನು ಕಾನನಕೆ ಆಗ
ಧೂರ್ತ ದಾನವರನ್ನು ಸದೆಬಡಿಯಲೆಂದು
 
ಇಂತು ತೆರಳಿದ ಮಗನ ವಿರಹವನು ತಾಳದೆಯೆ
ಕಾತುರದಿ ನೋಡಿದನು ಪಿತನು ಸುತನೆಡೆಗೆ
 
ಕಟುಕೇಶಿ ರಕ್ಕಸರ ನಾಯಕತ್ವವ ವಹಿಸಿ
ತಾಪಸರ ಯಜ್ಞಕ್ಕೆ ವಿಘ್ನ, ಹಾನಿಯ ಮಾಡಿ
ಮುನಿಜನಕೆ ಎದುರಾಗಿ ಕಲಹವನು ಸಾರಿ
 
ಹಲವು ಪರಿಯಲಿ ದುಷ್ಟ ಚೇಷ್ಟೆಗಳನೆಸಗಿದ್ದ
ಬಲಶಾಲಿ ದಾನವನ ಸಂಹರಿಸಿ ಪರಮಾತ್ಮ
ಗಳಿಸಿದನು ಸಜ್ಜನರ, ಸುರರ ಒಲುಮೆಯನು
 
ಉತ್ತಮೋತ್ತಮರಾದ ಭೂಸುರರ ನಿವಹವು
ಬೆಳಗಿತ್ತು ಕಾನನದ ತೃಣ, ಕಾಷ್ಠ ಲತೆಗಳನು
ಮೊಳಗಿತ್ತು ಸುಸ್ವರದ, ಮಂತ್ರಘೋಷಗಳಲ್ಲಿ
ಮುನಿಜನರ ಯಜ್ಞಕ್ಕೆ ರಕ್ಷಣೆಯ ನೀಡುತ್ತ
ವಿಹರಿಸಿದ ವೇದಾದಿ ಸಚ್ಛಾಸ್ತ್ರ ಪ್ರತಿಪಾದ್ಯ
ಆಲಿಸುತ ರಮಣೀಯ ವಾಣಿ ಪುಂಖವನು
 
130 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23