This page has not been fully proofread.

ಶೃತಿಪತಿಗಳಾಗಿಹರು, ಶ್ರೀ ವೇದವ್ಯಾಸರು
ಅವರ ಮನವೆಂಬುದದು ಅಮೃತದ ಕಲಶ
ವಾತ್ಸಲ್ಯದಮೃತವು ತುಂಬಿಹುದು ಅದರಲ್ಲಿ
 
ಮಂದಹಾಸದ ಮೊಗದಿ, ಬೊಗಸೆಗಂಗಳ ಹೊಳಪು !
 
ಆನಂದ ತೀರ್ಥರನು ಆನಂದದಿಂದ
 
ಬರಸೆಳೆದು ಅಪ್ಪಿದರು ಶ್ರೀ ವ್ಯಾಸಮುನಿಗಳು
 
ಆನಂದ ತೀರ್ಥರದು ಬಲು ಭವ್ಯ ಕಾಯ !
ಸ್ವರ್ಣವರ್ಣದ ಕಾಯ, ಬಲು ರಂಜನೀಯ !
ವ್ಯಾಸಮುನಿ ಮಧ್ವರಾ ದಿವ್ಯ ಆಲಿಂಗನವು
 
ಭವ್ಯ ಸಂಗಮವಾಯ್ತು, ಮಧುರ ಮಿಲನವದಾಯ್ತು
ಹೊನ್ನ ನೀರಿನ ಧಾರೆ, ಯಮುನೆಯ ಜೊತೆಗೂಡಿ
 
ಹರಿಯುವಾ ನೋಟವನ್ನು ಹೋಲುವಂತಿತು
 
ಭೂಸುರ ಶ್ರೇಷ್ಠರ ವಂಶಜರು ಈರ್ವರೂ
ಹರಿ-ವಾಯುಗಳ ದಿವ್ಯ ಆವತಾರ ತಳೆದಿಹರು
ರಾಜ ಭೂಷಣದಿಂದ ಶೋಭಿತರು ಆದಲ್ಲಿ
ರಾಜ ಕುವರರ ತೆರದಿ ಬೆಳಗ ಬಲ್ಲರು ಇವರು
ದ್ವಾಪರದ ಶ್ರೀ ಕೃಷ್ಣ ಭೀಮಸೇನರ ತೆರದಿ
ಕಂಗೊಳಿಸಿ ಮೆರೆದರಾ ಶ್ರೀ ವ್ಯಾಸ ಮಧ್ವರು
 
P
 
ವ್ಯಾಸ ಮಧ್ವರ ಮಿಲನ ತುಂಬ ಅತಿಶಯವಾಯ್ತು
ಮೂಕ ವಿಸ್ಮಿತರಾದ ಆಶ್ರಮದ ದ್ವಿಜಗಣವು
ಕೊಂಡಾಡಿತಿಂತೆಂದು ಆದ್ಭುತದ ನೋಟವನು
ವಿಶ್ವಪತಿ ವ್ಯಾಸರು ಶುಕಮುನಿಯ ತಂದೆ
ಅವರಿಗೂ ಲಭಿಸದ ಇಂಥ ಲಾಲನೆಯನ್ನು
ಪಡೆದ ಈ ಮಧ್ವರು, ಅತ್ಯಂತ ಧನ್ಯರು
 
120 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55