This page has not been fully proofread.

ಭಕುತರಿಗೆ ಅಭಯವನು ನೀಡುವಾ ಹಸ್ತಗಳು !
ಈ ಹಸ್ತಗಳಲಿಹವು ದಿವ್ಯ ಮುದ್ರೆಗಳು
ಬಲಗೈಯ ತುದಿಯಲ್ಲಿ ಜ್ಞಾನಮುದ್ರೆಯು ಇಹುದು
ಭಜಿಸುವರ ಅಜ್ಞಾನ ಬಡಿದೋಡಿಸುವುದು
ಮೊಣಕಾಲ ಮೇಲಿರುವ ಎಡಗೈಯ ತುದಿಯು
ಭವದ ಭಯ ಪರಿಹರಿಸಿ ಮುಕ್ತಿಯನ್ನು ಕರುಣಿಪುದು
 
"ಗುರುಕಂಠದಲ್ಲಿರುವ ಮೂರು ವರರೇಖೆಗಳು
ಉತ್ತಮೋತ್ತಮವಾದ ಜ್ಞಾನ ಸಂಕೇತಗಳು
ಸರ್ವಕಾಲದಲೆಲ್ಲ ತಾವು ನಲಿದುಚ್ಚರಿಪ
ಮೂರು ವೇದಗಳ ಮಂತ್ರರಾಶಿಯೆಲ್ಲವೂ ಕೂಡಿ
ಸ್ಪುಟವಾದ ಅಂಕಿತವ ಪಡೆದಿವೆಯೋ ಎಂಬಂತೆ
ಕಂಗೊಳಿಸಿ ಮರೆದಿಹವು ಈ ಮೂರು ರೇಖೆಗಳು
 
"ದೇವ ವೃಂದಕೆ ಇವರು ಶಿಖೆಯ ಮಣಿಯಂತಿಹರು
ಆ ದಿವ್ಯ ವದನ, ಪ್ರಖರ ಕಾಂತಿಯ ಸದನ !
ಅಪರಿಮಿತ ಶೋಭೆಯಲಿ ಪರಿಶೋಭಿಸುತ್ತಿಹುದು
ಹದಿನಾರು ಅಕಲಂಕ ಕಲೆಗಳನ್ನು ಹೊಂದಿರುವ
ಶತಕೋಟಿ ಚಂದ್ರರಿಗೂ ಮಿಗಿಲಾದ ಕಾಂತಿ
ಎಂತು ಬಣ್ಣಿಪುದಿಂಥ ಅಪ್ರತಿಮ ತೇಜವನು ?
 
"ಚೆಲುವಾದ ಚೆಂದುಟಿಯು ನಯನ ಮೋಹಕ ಹುದು
 
ಅರುಣ ರಾಗದಿ ಮೆರೆವ ಆ ಅಧರ ಯುಗ್ಧಗಳು !
ಮಾಮರದ ಹೊಸ ಚಿಗುರ ಪರಿಯಲಿಹವು
ಪದ್ಮರಾಗದ ಮಣಿಯ ತುಣುಕುಗಳ ನಡುವೆ
 
ಹೊಳೆವ ಮುತ್ತುಗಳ ಮಾಲೆಯನ್ನು ಕೂಡ
ನಾಚಿಸುವ ತೆರವಿಹವು ದಂತಪಂಕ್ತಿಗಳು
 
116 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39