This page has not been fully proofread.

"ಅಗಣ್ಯಗುಣದಿಂದ ಪರಿಪೂರ್ಣ ಕಾಯ
ಅನಂತವಾಗಿಹುದು ಪ್ರತ್ಯೇಕವಾಗಿ
ಸಕಲ ಸದ್ಗುಣದಿಂದ ಸಂಪನ್ನವಾಗಿಹುದು
ಸಕಲ ದೋಷಗಳಿಂದ ದೂರವಾಗಿಹುದು
 
ಆನಂದ, ಪರಿಪೂರ್ಣ ಜ್ಞಾನಯುಕ್ತವಾಗಿಹ ದೇಹ
ಮಂಗಳಾತ್ಮಕರಿವರು, ಸುಸ್ವರೂಪರು ಇವರು
 
"ಕಮಲಾಕಮಲಾಸನರು, ಅನಿಲ, ಗರುಡರು, ಶೇಷರು
 
ರುದ್ರೇಂದ್ರ ಮೊದಲಾದ ದೇವತೆಗಳೆಲ್ಲ
ಪದಪದ್ಮರಜವನ್ನು ಶಿರದಲ್ಲಿ ಧರಿಸುವರು
ಇಂಥ ಮಹಿಮರು ನಮ್ಮ ಶ್ರೀ ನಿಗಮ ವ್ಯಾಸರು
ಇವರ ಅಡಿದಾವರೆಯ ದಿವ್ಯ ಧೂಳಿಗಳನ್ನು
ಅನವರತ ಮುಡಿಯುವೆನು ಎನ್ನ ಶಿರದಲ್ಲಿ"
 
"ಚರಣಗಳಿಗೆರಗುವೆನು ಪರಮ ಭಕುತಿಯಲಿ
ತನ್ನ ಭಕುತರ ಮನದ ರಾಗವನು ಮರ್ದಿಸಿದ
ಕಾರಣದಿ ಚರಣಗಳು ಅರುಣರಾಗವ ಹೊಂದಿ
 
ಪರಿಶೋಭಿಸುತ್ತಿವೆಯೋ
 
ಎಂಬ ಆಶಂಕೆ
 
ಧ್ವಜ, ವಜ್ರ, ಅಂಕುಶ, ಪದ್ಯಗಳ ಚಿಹ್ನೆಗಳು
 
ಕೂಡಿರುವ ಚರಣಗಳಿಗೆರಗುವೆನು ನಾನು
 
"ಇಂಥ ಮಹಿಮರ ಉಗುರುಗಳನೆಂತು ಬಣ್ಣಿಸಲಿ ?
ಸಾಕ್ಷಾತ್ತು ಶ್ರೀ ಹರಿಯ ಚರಣಗಳವಕಾಶ್ರಯವು
ಪ್ರಜ್ವಲಿಪ ಕಾಂತಿಯಲ್ಲಿ ಬೆಳಗುವಾ ಉಗುರುಗಳು !
ಉಭಯ ರೀತಿಯ ಇರುಳ ಓಡಿಸುವ ಉಗುರುಗಳು !
ಒಳಗು, ಹೊರಗಿನ ಇರುಳ ಅಟ್ಟುವ ಉಗುರುಗಳು !
ಉದಯ ರವಿ ಕಾಂತಿಯನ್ನು ನಾಚಿಸುವ ಉಗುರುಗಳು !
 
ಏಳನೆಯ ಸರ್ಗ / 113
 
24
 
25
 
26
 
27