This page has not been fully proofread.

ರಮಣೀಯ ಪತ್ರಗಳು ವೃಕ್ಷಕ್ಕೆ ಆಭರಣ
ರಂಗು ರಂಗಿನ ಬಣ್ಣ ಪತ್ರಗಳ ಶೋಭೆ
ಸುರಪತಿಯ ಆಯುಧದ ಪರಿಯಲೀ ಪತ್ರಗಳು
ರವಿಕಿರಣದಾಕ್ರಮಣ ತಡೆಗಟ್ಟುತ್ತಿದ್ದವು
ಮುನಿಗಣಕೆ ಆನಂದವೀಯುತ್ತಲಾ ವೃಕ್ಷ
ಇಂದಿರಾಪತಿಯ ಪ್ರಿಯ ಖಗರಾಜನಂತಿತ್ತು
 
ಅಮರಲೋಕದ ಮರದ ಪರಿಯಲ್ಲಿ ಆ ಮರವು
ಅಮೃತದ ಪರಿಪಕ್ವ ಫಲಗಳನ್ನು ನೀಡಿತ್ತು
ಹರಿಭಕ್ತಿರಹಿತರಿಗೆ ದುರ್ಲಭವು ಆ ವೃಕ್ಷ
ನಿಗಮ ತತಿಗಳೇ ಮೂರ್ತಗೊಂಡಂತಿರುವ
ಭಾರತ, ಪುರಾಣಗಳು ಈ ಮರದ ಶಾಖೆಗಳು
ಈ ಭವ್ಯ ವೃಕ್ಷವನು ಮಧ್ವಮುನಿ ಕಂಡರು
 
ಮುನಿವರ್ಣನ
 
ವೃಕ್ಷದ ವಿಸ್ತಾರ, ಭವ್ಯ ಹರಹು !
 
ಆ ಮರದ ಸೊಂಪು ಅದರಡಿಯ ತಂಪು !
 
ರಮ್ಯ ರಮಣೀಯತೆಯೇ ಮೈವೆತ್ತಿ ನಿಂತಂತೆ
ಆ ಮರದ ಬುಡದಲ್ಲಿ ಹತ್ತಾರು ವೇದಿಕೆ
ಆಲ್ಲೆಲ್ಲ ತಾಪಸರು ಜಪತಪದಿ ಮಗ್ನರು
ಗಗನದಲಿ ಶೋಭಿಸುವ ದೇವತೆಗಳಂತೆ
 
ಅಧಿಕ ಸಂಖ್ಯೆಯಲಿಹರು ಆ ಯತೀಶ್ವರರು
ಜಟೆಯಿಂದ ಶೋಭಿತರು, ಸದ್ಗುಣಾರ್ಣವರು
ಕೋಪ, ಮದ, ದುರ್ಗುಣವ ತ್ಯಜಿಸಿದವರು
ಭೋಗ ಲಾಲಸೆಯಲ್ಲಿ ಆಸಕ್ತಿ ತೊರೆದವರು
ಗಾಳಿಯೇ ಅವರಿಗೆ ಅಶನಾದಿ ಭೋಜನವು
ಇಂಥ ಮುನಿಪುಂಗವರು ಮಧ್ವರಿಗೆ ಕಂಡರು
 
110 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15