2023-02-21 18:39:27 by ambuda-bot
This page has not been fully proofread.
ಶ್ರೀ ಗುರುಭೋ ನಮಃ
ಏಳನೆಯ ಸರ್ಗ
ಉತ್ತರ ಬದರಿಯಲ್ಲಿ ಶ್ರೀ ಮಧ್ವಾಚಾರ್ಯರು
ಆಚಾರ್ಯ ಮಧ್ವರು ಪಯಣವನು ಮುಂದರಿಸಿ
ಹಿಮಗಿರಿಯ ಶೃಂಗದ ಮತ್ತೊಂದು ಬದಿ ಸೇರಿ
ಬದರಿಕಾ ಕಾನನದಿ ರಾರಾಜಿಸುತ್ತಿದ್ದ
ಭೂತಾಯ ಸೊಬಗಿನ ಐಸಿರಿಗೆ ನೆಲೆಯಾದ
ಜಗದ ಎಲ್ಲೆಡೆಯಲ್ಲೂ ಜನಜನಿತವಾಗಿದ್ದ
ವ್ಯಾಸಮುನಿಗಳ ಪುಣ್ಯ ಧಾಮವನು ಕಂಡರು
ಶ್ರೀ ವ್ಯಾಸಾಶ್ರಮ ವರ್ಣನೆ
ಚಳಿ, ಗಾಳಿ, ಮಳೆ, ಬಿಸಿಲು, ಎಲ್ಲವನೂ ಸಹಿಸುವ
ಯಜ್ಞಯಾಗಗಳಲ್ಲಿ ಎಡೆಬಿಡದೆ ತೊಡಗಿರುವ
ಭೂಸುರರಿಗೆಲ್ಲರಿಗೂ ಶಾಸ್ತ್ರವನ್ನು ಬೋಧಿಸುವ
ಮುನಿವರೇಣ್ಯರಿಗೆಲ್ಲ ಆಶ್ರಯವು ಆಶ್ರಮ
ಉತ್ತುಂಗ ವೃಕ್ಷಗಳ ವನಸಿರಿಯ ಬೆಡಗು !
ಪಶುಪಕ್ಷಿಗಳಿಗೆಲ್ಲ ಉತ್ತಮೋತ್ತಮ ಧಾಮ !
ಗಿಳಿವಿಂಡುಗಳ ಗಾನ ಮಧುರ ಅಮೃತ ಪಾನ !
ಜೇನ ಹನಿ ಸವಿದಂತೆ ಆಪ್ಯಾಯಮಾನ !
ಹಕ್ಕಿಗಳ ಚಿಲಿಪಿಲಿಯ ಇನಿದನಿಯ ಇಂಚರ !
ಶ್ರೀ ರಮಾರಮಣ ಶ್ರೀ ಹರಿಯ ಸ್ಮರಣೆಯಲ್ಲಿ
ಪರಿಶುದ್ಧ ಚಿತ್ತದಲಿ, ಜಪತಪಾದಿಗಳಲ್ಲಿ
ತೊಡಗಿರುವ ಭೂಸುರರು ನೆಲೆಸಿದ್ದರಲ್ಲಿ
2
3
1
ಏಳನೆಯ ಸರ್ಗ
ಉತ್ತರ ಬದರಿಯಲ್ಲಿ ಶ್ರೀ ಮಧ್ವಾಚಾರ್ಯರು
ಆಚಾರ್ಯ ಮಧ್ವರು ಪಯಣವನು ಮುಂದರಿಸಿ
ಹಿಮಗಿರಿಯ ಶೃಂಗದ ಮತ್ತೊಂದು ಬದಿ ಸೇರಿ
ಬದರಿಕಾ ಕಾನನದಿ ರಾರಾಜಿಸುತ್ತಿದ್ದ
ಭೂತಾಯ ಸೊಬಗಿನ ಐಸಿರಿಗೆ ನೆಲೆಯಾದ
ಜಗದ ಎಲ್ಲೆಡೆಯಲ್ಲೂ ಜನಜನಿತವಾಗಿದ್ದ
ವ್ಯಾಸಮುನಿಗಳ ಪುಣ್ಯ ಧಾಮವನು ಕಂಡರು
ಶ್ರೀ ವ್ಯಾಸಾಶ್ರಮ ವರ್ಣನೆ
ಚಳಿ, ಗಾಳಿ, ಮಳೆ, ಬಿಸಿಲು, ಎಲ್ಲವನೂ ಸಹಿಸುವ
ಯಜ್ಞಯಾಗಗಳಲ್ಲಿ ಎಡೆಬಿಡದೆ ತೊಡಗಿರುವ
ಭೂಸುರರಿಗೆಲ್ಲರಿಗೂ ಶಾಸ್ತ್ರವನ್ನು ಬೋಧಿಸುವ
ಮುನಿವರೇಣ್ಯರಿಗೆಲ್ಲ ಆಶ್ರಯವು ಆಶ್ರಮ
ಉತ್ತುಂಗ ವೃಕ್ಷಗಳ ವನಸಿರಿಯ ಬೆಡಗು !
ಪಶುಪಕ್ಷಿಗಳಿಗೆಲ್ಲ ಉತ್ತಮೋತ್ತಮ ಧಾಮ !
ಗಿಳಿವಿಂಡುಗಳ ಗಾನ ಮಧುರ ಅಮೃತ ಪಾನ !
ಜೇನ ಹನಿ ಸವಿದಂತೆ ಆಪ್ಯಾಯಮಾನ !
ಹಕ್ಕಿಗಳ ಚಿಲಿಪಿಲಿಯ ಇನಿದನಿಯ ಇಂಚರ !
ಶ್ರೀ ರಮಾರಮಣ ಶ್ರೀ ಹರಿಯ ಸ್ಮರಣೆಯಲ್ಲಿ
ಪರಿಶುದ್ಧ ಚಿತ್ತದಲಿ, ಜಪತಪಾದಿಗಳಲ್ಲಿ
ತೊಡಗಿರುವ ಭೂಸುರರು ನೆಲೆಸಿದ್ದರಲ್ಲಿ
2
3
1