This page has not been fully proofread.

ಕಲಿಯುಗದ ಕಾಲದಲ್ಲಿ ಕಲಿಯ ಪ್ರಭಾವ
ಅದರಿಂದ ಮಾನವರು ದುರ್ಮಾರ್ಗ ನಿರತರು
 
ಸಜ್ಜನರು ಸಂಖ್ಯೆಯಲ್ಲಿ ಬಹು ಅಲ್ಪ ಮಂದಿ
ಇವರಿಂದ ದೌಪದಿಯು ನಿರ್ಲಕ್ಷ್ಯಳಾದವಳು
ಉಳಿದಿಷ್ಟು ಸಾತ್ವಿಕರು ಈ ಮಹಾಸತಿಯನ್ನು
ಕಂಡು ಮರುಗಿದರಲ್ಲಿ ನಿಸಹಾಯಕರಾಗಿ
 
ಶ್ರೀ ಹರಿಯು ಭಿನ್ನನು ಎಲ್ಲ ಜೀವಿಗಳಿಂದ
ಪೂರ್ಣ ಸದ್ಗುಣನಿವನು, ದೋಷ ದೂರನು, ಅಜನು
ಶ್ರೀ ಹರಿಯನನವರತ ಅತಿ ಭಕುತಿಯಿಂದ
ದೌಪದಿಯು ಧರಿಸಿಹಳು ಹೃದಯ ಮಂದಿರದಲ್ಲಿ
"ಅವನೀಧರ, ವಾಸುದೇವ, ಓ, ಸ್ವಾಮಿ, ನಾಥ!"
ಎಂದೆನುತ ಅಡಿಗಡಿಗೆ ಪ್ರಾರ್ಥಿಸಿದಳಾ ಸಾಧಿ
 
ಶ್ರೀ ಕೃಷ್ಣ ದ್ವಯರಿಂದ ದೌಪದಿಯು ರಕ್ಷಿತಳು
ಬೇರಾರಿಗೂ ಆಕೆ ಶರಣು ಎಂಬುವುದಿಲ್ಲ
ಎಂದೆಂದೂ ಶ್ರೀ ಹರಿಗೆ ಮೊರೆಯನಿಡುವಳು ಅವಳು
ಆಕೆಯಾ ಸಂಕಟದ ಕ್ಷಣ ಕಂಡ ಸಜ್ಜನರು
"ಹಾ, ಹಾ," ಎಂದೆನುತ "ಇದು ಧರ್ಮವಲ್ಲ"
ನಾವೆಲ್ಲ ಇದನೀಗ ಖಂಡಿಸುವೆವೆಂದರು
 
ವೇದಿ ಮಧ್ಯದಿ ಜನಿಸಿ ಅವತಾರ ತಾಳಿದ
ದೌಪದಿಯ ಬವಣೆಯನ್ನು ಕಂಡು ಕನಲಿದ ಭೀಮ.
 
ಅಂತೆಯೇ ಕರುಣಾಬ್ ಆನಂದ ತೀರ್ಥರು
ವೇದಗಳ ದುಃಸ್ಥಿತಿಯ ಕಂಡು ಕೆರಳುತ್ತ
 
ದುಷ್ಟ ಪಕ್ಷದ ಜನರ ಕಂಡು ಕನಲುತ್ತ
ದಮನ ಮಾಡುವೆನೆಂದು ನಿರ್ಧಾರ ಮಾಡಿದರು
 
96 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31