This page has not been fully proofread.

ಸಂಶಯಕ್ಕೆಡೆಯಿಲ್ಲ ಅರ್ಥವಿವರಣೆಯಲ್ಲಿ
ಶಬ್ದ ಧಾರೆಯ ಸೋತ ಪುಂಖಾನು ಪುಂಖ
ಎಡೆಬಿಡದೆ ಆಚಾರ್ಯ, ಆನಂದ ತೀರ್ಥರು
ಹಲವು ಅರ್ಥಗಳ ಕ್ಷಣದಲ್ಲಿ ಬಿಡಿಸಿದರು
ಸಂಭ್ರಷ್ಟ ಅರ್ಥಗಳ ಗ್ರಹಿಸಲಾರದ ದ್ವಿಜರು
ವ್ಯಾಕುಲವ ತಳೆದರು ಮನದಾಳದಲ್ಲಿ
 
ಅಂತಿಂಥ ಸಾಮಾನ್ಯ ಪಂಡಿತರು ಅವರಲ್ಲ
ಸಾಂಗ ವೇದದ ಚತುರ, ಇತಿಹಾಸ ನಿಪುಣರು
ಧೈರ್ಯ ಸಾಹಸದಲ್ಲಿ ಹಿಮ್ಮೆಟ್ಟರವರು
ಅವರ ಸಂಖ್ಯೆಯು ಕೂಡ ಸಾಕಷ್ಟು ಅಧಿಕ
ಪ್ರಲಯ ಕಾಲದ ಜಲವ ತುಂಬಿಟ್ಟು ಕೊಳ್ಳಲು
 
ಬಾವಿ ಸಾವಿರವೆಲ್ಲ ಸಾಕಾಗಬಹುದೆ ?
 
"ನಿಮ್ಮ ಪ್ರತಿಭೆಗೆ ನಾವು ಮಣಿಯುವೆವು ಸ್ವಾಮಿ
ದೇವವೃಂದಗಳಲ್ಲೂ ಕಾಣಬರದೀ ಪ್ರತಿಭೆ
ಚಪಲ ಮಾನವರಲ್ಲಿ ಇದು ಹೇಗೆ ಸಾಧ್ಯ ?
ಸಕಲವನೂ ಬಲ್ಲವರೇ ! ಸೌಮ್ಯ ಸ್ವರೂಪರೇ !
ಕ್ಷಮಿಸಿರೆಮ್ಮನು ನೀವು ಆನಂದ ತೀರ್ಥರೇ !"
 
ಎಂದೆನುತ ನಮಿಸಿದರು ಆಚಾರ್ಯವರ್ಯರಿಗೆ
 
ಕೇರಳದ ಪಂಡಿತರ ಪರಾಜಯ
 
ಮತ್ತೊಮ್ಮೆ ಸಭೆಯಲ್ಲಿ ಪಾಲ್ಗೊಳ್ಳಲೆಂದು
ಕೇರಳ ಸುಮಂಡಲದಿ ಜನ್ಮವನು ತಾಳಿದ್ದ
ವೇದಾದಿ ಶಾಸ್ತ್ರದಲ್ಲಿ ಪರಿಣತಿಯ ಪಡೆದಿದ್ದ
ವಿದ್ಯೆ ನೀಡುವ ಧನಕೆ ಆಶೆಯನ್ನು ಹೊಂದಿದ್ದ
ಈ ಪರಿಯ ಜನರಿಂದ ತುಂಬಿ ತುಳುಕುತಲಿದ್ದ
ದೇವಮಂದಿರವೊಂದ ಹೊಕ್ಕರಾಚಾರ್ಯರು
 
ಆರನೆಯ ಸರ್ಗ / 91
 
8
 
9
 
10
 
11