2023-06-30 06:25:56 by jayusudindra
This page has been fully proofread once and needs a second look.
ಧೈವತಗಳು ವರ್ಜ, ರಕ್ತಿರಾಗ ಮತ್ತು ಎಲ್ಲಾ ವೇಳೆಗಳಲ್ಲಿ ಹಾಡಬಹುದಾದ
ರಾಗ. ನಿಷಾದ, ಗಾಂಧಾರಗಳು ಜೀವ ಮತ್ತು ನ್ಯಾಸ ಸ್ವರಗಳು. ಇವುಗಳಿಗೆ
ಜಾರು ಗಮಕ ಪ್ರಯೋಗ ಮಾಡಿದರೆ ರಂಜಕತ್ವವು ಹೆಚ್ಚುತ್ತದೆ. ಈ ರಾಗದ ಕೆಲವು
ಪ್ರಸಿದ್ಧ ಕೃತಿಗಳು ತ್ಯಾಗರಾಜರ ಎಂಚನೇರ್ಚಿನಾ ಮತ್ತು ಮುತ್ತು ಸ್ವಾಮಿ ದೀಕ್ಷಿತರ
ಶ್ರೀ ಗುರುಗುಹಮೂರ್ತೇ ಎಂಬುವು.
(೩) ಇದೇ ಹೆಸರಿನ ಮತ್ತೊಂದು ರಾಗವು ೩೬ನೆಯ ಮೇಳಕರ್ತ ಚಲನಾಟದ
ಒಂದು ಜನ್ಯವಾಗಿದೆ.
ಸ ರಿ ಸ ಮ ರಿ ಮ ಪ ಸ ನಿ ಸ
ಸ ನಿ ಪ ಮ ರಿ ಸ
ಉದಯರಾಗಗಳು
ಮುಂಜಾನೆಯಲ್ಲಿ ಸಂಪ್ರದಾಯಸ್ಥ ಮತ್ತು ಆಚಾರ
ಶೀಲ ಕುಟುಂಬಗಳಲ್ಲಿ ಸ್ತ್ರೀಯರು ಸ್ನಾನ ಮಾಡುವ ವೇಳೆಗಳಲ್ಲಿ, ರಂಗವಲ್ಲಿ ಹಾಕು
ವಾಗ ಹಾಡುಗಳನ್ನು ಹೇಳಿಕೊಳ್ಳುತ್ತಾ ಕೆಲಸ ಮಾಡುವ ಪದ್ಧತಿಯಿದೆ. ಗಂಡಸರೂ
ಸಹ ಕೆಲವು ಸುಪ್ರಭಾತಗಳನ್ನು ಹೇಳುತ್ತಾ ತುಳಸೀದಳವನ್ನು ಸಂಗ್ರಹಿಸುವಾಗ
ಅಥವಾ ದೇವತಾರ್ಚನೆಗೆ ಸಿದ್ಧ ಮಾಡುತ್ತಾ ಹೇಳುತ್ತಾರೆ. ಉದಯರಾಗವೆಂದರೆ
ಭೂಪಾಲಿ ಅಥವಾ ರೇಗುಪ್ತಿ ರಾಗ ಉದಯಗೀತಗಳನ್ನು ಬಿಲಹರಿ, ದೇಶಾಕ್ಷಿ
ಮತ್ತು ಆನಂದಭೈರವಿ ರಾಗಗಳಲ್ಲಿ ಹಾಡುವುದುಂಟು. ರತ್ನಾಕರವರ್ಣಿ ಮುಂತಾದ
ಕವಿಗಳ ವೇಳಾವಳಿ, ಗುಂಡಕ್ಕಿಯ ಮುಂತಾದ ರಾಗಗಳನ್ನು ಉದಯಕಾಲದ ರಾಗ
ಗಳೆಂದು ಹೇಳಿದ್ದಾರೆ. ಈ ರಾಗದ ಹಾಡುಗಳು ಷಟ್ನದಿಯಲ್ಲಿದ್ದು ಪಲ್ಲವಿ, ಅನುಪಲ್ಲವಿ
ಮತ್ತು ಹಲವು ನುಡಿಗಳನ್ನು ಒಳಗೊಂಡಿವೆ. ಪ್ರತಿನುಡಿಯ ಅನಂತರ ಪಲ್ಲವಿಯ
ಅಂತ್ಯಾಕ್ಷರವು ದೀರ್ಘವಾಗುತ್ತದೆ. ಇವುಗಳಲ್ಲಿ ಸಾಹಿತ್ಯವು ಧಾತುವಿಗಿಂತ ಪ್ರಧಾನ
ವಾಗಿದೆ. ಪುರಂದರದಾಸರ ರಂಗನೊಲಿದ ಎಂಬ ೨೯ ನುಡಿಗಳ ಹಾಡು, ಕನಕದಾಸರ
ವಾಸುದೇವಾಯ ನಮೋ ಎಂಬ ಕೃತಿ, ಏಳುನಾರಾಯಣ ಏಳುಲಕ್ಷ್ಮೀರಮಣ,
ಏಳಯ್ಯ ಶ್ರೀಹರಿ, ಉದಯಕಾಲದೊಳೆದ್ದು, ರಂಗನಾಯಕಸ್ವಾಮಿ, ಉಪ್ಪವಡಿಸಯ್ಯ
ಹರಿಯೇ ಮುಂತಾದುವು ಉದಯರಾಗದ ಹಾಡುಗಳು.
ಉದಯಶಂಕರ್
ಇವರು ೧೯೦೨ರಲ್ಲಿ ಉದಯಪುರದಲ್ಲಿ ಜನಿಸಿದರು.
ಇವರ ತಂದೆ ರಾಜಾಸ್ಥಾನದಲ್ಲಿ ಶಿಕ್ಷಣಾಧಿಕಾರಿಯಾಗಿದ್ದರು.
ವಾರಾಣಸಿ ಮತ್ತು
ಬೊಂಬಾಯಿನ ಆರ್ಟ್ಸ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದರು. ಆ ಕಾಲದಲ್ಲಿ ನೃತ್ಯ
ಕಲೆಗೆ ಕಳಂಕವಿತ್ತು. ಇವರ ದುಡಿಮೆ ಮತ್ತು ಪ್ರಯತ್ನಗಳಿಂದ ಇದು ಒಂದು ಶ್ರೇಷ್ಠ
ಕಲೆ ಎನಿಸಿ ಪುನರುತ್ಥಾನಗೊಂಡಿತು. ಕಥಕ್ಕಳಿ ಮತ್ತು ಮಣಿಪುರಿ ನೃತ್ಯ ಸಂಪ್ರ
ದಾಯಗಳನ್ನು ಅಭ್ಯಾಸ ಮಾಡಿ, ಅವುಗಳಿಂದ ಪಾದವಿನ್ಯಾಸ ಮತ್ತು ಮುದ್ರೆಗಳನ್ನು
ಆಯ್ತು ಅಪೂರ್ವ ಕಲ್ಪನಾಶಕ್ತಿಯಿಂದ ತನ್ನದೇ ಆದ ಹಲವು ಹೃದಯಂಗಮ ನೃತ್ಯ