This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಗ ಮ ಪ ದ ನಿ ದ ಸ
ಸ ದ ನ ಪ ಮ ಗ ರಿ ಸ
ಇಂದುಶೀತಲಿ-ಇದೂ
 

 
ಅ :
 
ಸಹ ಮೇಲಿನ ರಾಗದಂತೆಯೇ.
 
ಇಂದುಶೇಖರ-ಇದೊಂದು ಬಗೆಯ ದೇಶೀತಾಳದ ಹೆಸರು,
ಇಂದ್ರ-ಇದು ಭರತನಾಟ್ಯದ ಕೆಲವು ವಿಶೇಷ ಹಸ್ತ ಮುದ್ರೆಗಳಲ್ಲಿ ಒಂದು ಮುದ್ರೆ,
ಎರಡು ತ್ರಿಪತಾಕ ಹಸ್ತಗಳ ಮಣಿಕಟ್ಟನ್ನು ಸೇರಿಸಿ ಹಿಡಿಯುವುದು ಈ ಹಸ್ತ ಮುದ್ರೆ.
ಇಂದ್ರಕಾಳಿಯಂ - ಯಾಮಳೇಂದ್ರನು ರಚಿಸಿದ ತಮಿಳಿನ ಒಂದು ಪುರಾತನ
ಸಂಗೀತಶಾಸ್ತ್ರ ಗ್ರಂಥ.
 
ಇಂದ್ರಕುಂಡಲಿ-ದಾಮೋದರನು ಹೇಳಿರುವ ಒಂದು ದೇಶೀತಾಳದ ಹೆಸರು.
ಇಂದ್ರ ಕೋದಂಡ-ಭಾವಭಟ್ಟನು ಹೇಳಿರುವ ಒಂದು ದೇಶೀತಾಳದ ಹೆಸರು.
ಇಂದ್ರ -ರಾಣಾಕುಂಭನು ಹೇಳಿರುವ ಒಂದು ಕ್ರಿಯಾಂಗರಾಗದ ಹೆಸರು.
ಇಂದ್ರ ಪ್ರಿಯ-ಇದೇ ಹೆಸರಿನ ಮೂರು ಬೇರೆ ಬೇರೆ ರಾಗಗಳಿವೆ.
(೧) ಇದು ಒಂದನೆಯ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಸ ಗ ಮ ದ ನಿ ಸ
 
ಸ ನಿ ದ ಮ ಗ ಸ
 
(೨) ಇದು ೨೪ನೆಯ ಮೇಳಕರ್ತ ವರುಣಪ್ರಿಯದ ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ಸ
 
(೩) ಈ ರಾಗವು ೫೪ನೆಯ ಮೇಳಕರ್ತ ವಿಶ್ವಂಬರಿಯ ಒಂದು ಜನ್ಯರಾಗ,
ಆ "ಸರಿ ಗ ಮ ಪ ದ ಸ
 
ಸ ದ ಪ ಮ ಗ ರಿ ಸ
 
ಇಂದ್ರಸಭಾ-ಪುರಾಣಗಳಲ್ಲಿ ವರ್ಣಿಸಿರುವ ನಾಟ್ಯ ಮತ್ತು ಸಂಗೀತಗಳಿಗೆ
ಪ್ರಸಿದ್ಧವಾದ ಇಂದ್ರನ ಆಸ್ಥಾನ.
 
ಇಂದ್ರಶಿಖಂಡಿ-ಇದೊಂದು ದೇಶೀತಾಳದ ಹೆಸರು.
ಇಂದ್ರವಂಶ-ಇದು ೨೯ನೆಯ ಮೇಳಕರ್ತ ಧೀರ ಶಂಕರಾಭರಣದ ಒಂದು
 
ಜನ್ಯರಾಗ,
 
ಸ ಗ ಮ ದ ನಿ ಸ
 
ಸ ನಿ ಪ ದ ಮ ಗ ರಿ ಸ
 
ಇಂದ್ರವರ್ಧನ-ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
 
ಒಂದು ಜನ್ಯರಾಗ
 

ಅ :
 
ಸ ರಿ ಗ ಮ ಪ ದ ನಿ ಸ
 
ಸ ದ ಮ ಗ ರಿ ಸ