2023-06-30 05:47:20 by jayusudindra
This page has been fully proofread once and needs a second look.
ಇ-
ಮೂರನೆಯ ಸ್ವರ, ಉದಾತ್ತ, ಅನುದಾತ್ತ, ಸ್ವರಿತ ಭೇದವಿದೆ. ಪರ
ಮಾನಂದ, ಸುಗಂಧಕುಸುಮ, ಪರಮೇಶ ಮುಂತಾದ ಅರ್ಧಗಳನ್ನು ಸೂಚಿಸುತ್ತದೆ.
ಇಡಾ
ಸ ಗ್ರಾಮಕ್ಕೆ ಸೇರಿದ ನಿ ದ ಮ ಗ ರಿ ಎಂಬ ಐದು ಸ್ವರಗಳುಳ್ಳ
ಒಂದು ತಾನ ವಿಶೇಷ.
ಇಡಕ್ಕ
ಇದು ಮಲಬಾರಿನಲ್ಲಿ ಬಳಕೆಯಲ್ಲಿರುವ ಒಂದು ವಾದ್ಯ. ಇದರಲ್ಲಿ
ಮರದ ಒಂದು ಅನುರಣನವಿದೆ. ಎರಡು ಮುಖಗಳಿಗೆ ಭದ್ರವಾಗಿ ತಗಲಿರುವಂತೆ
ಚರ್ಮವನ್ನು ಅಳವಡಿಸಲಾಗಿದೆ. ಮೈ ಮೇಲಿನ ಬಳೆಗಳಿಗೆ ದಾರಗಳನ್ನು ಕಟ್ಟಿದೆ.
ಈ ದಾರಗಳನ್ನು ಎಳೆದು ಈ ವಾದ್ಯವನ್ನು ನುಡಿಸುತ್ತಾರೆ. ಬೇರೆ ಬೇರೆ ಸ್ವರಗಳನ್ನು
ಎಲ್ಲಾ ಸ್ಥಾಯಿಗಳಲ್ಲಿ ಅತ್ಯಂತ ಸಮರ್ಪಕವಾಗಿ ಹಿತಕರವಾಗಿ ನುಡಿಸಲು ಸಾಧ್ಯವಿದೆ.
ದಾರಗಳನ್ನು ಎಳೆದು ಶ್ರುತಿಯ ವ್ಯತ್ಯಾಸವನ್ನು ಮಾಡಿ ವಾದ್ಯಗಾರನು ನುಡಿಸು
ತ್ತಾನೆ.
೮೫
ಇತರನಾ
ವಾಗ್ಗೇಯಕಾರನು ತನ್ನ ರಚನೆಗಳಲ್ಲಿ ತನ್ನ ಹೆಸರಿನ
ಅಂಕಿತವಿಡದೆ ಇತರ ಹೆಸರುಗಳನ್ನು ಅಂಕಿತವಾಗಿ ಬಳಸಿದರೆ ಅದು ಇತರನಾಮಮುದ್ರೆ
ಎನಿಸಿಕೊಳ್ಳುತ್ತದೆ. ಮುತ್ತು ಸ್ವಾಮಿ ದೀಕ್ಷಿತರು " ಗುರುಗುಹ " ಎಂದೂ, ಪಟ್ಟಂ
ಸುಬ್ರಹ್ಮಣ್ಯ ಅಯ್ಯರ್‌ರವರು ವೆಂಕಟೇಶ' ಎಂದೂ ಮೈಸೂರು ಮಹಾರಾಜ ಜಯ
ಚಾಮರಾಜ ಒಡೆಯರು - ಶ್ರೀವಿದ್ಯಾ ' ಎಂಬ ಅಂಕಿತಗಳನ್ನು ಬಳಸಿರುವುದು ಇದಕ್ಕೆ
ಇತರನಾಮ ಮುದ್ರಕಾರ
ತನ್ನ ಹೆಸರಿನ ಅಂಕಿತವನ್ನು ಬಳಸದೆ ಇತರ
ಹೆಸರನ್ನು ತನ್ನ ರಚನೆಗಳಲ್ಲಿ ಅಂಕಿತವಾಗಿ ಬಳಸಿರುವ ವಾಗ್ಗೇಯಕಾರ,
ಇನಕರಪ್ರಿಯ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಆ :
ಸ ನಿ ದ ಮ ಗ ರಿ ಸ
ಇನವರ್ಧಿನಿ
ಈ ರಾಗವು ೩೯ನೆಯ ಮೇಳಕರ್ತ ರುಲವರಾಳಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ಸ
ಅ : ಸ ನಿ ದ ಪ ಮ ಗ ಸ
ಇನಿರತಿರಾಗ
ತಮಿಳು ಸಂಗೀತಶಾಸ್ತ್ರವಾದ ಭರತನಾಟಿಯ ಶಾಸ್ತಿರಂ
ಎಂಬುದರಲ್ಲಿ ಉಕ್ತವಾಗಿರುವ ಒಂದು ರಾಗ,
ಇನುಕೊಂಡವಾರು
ತಮಿಳು ಪದಗಳನ್ನು ರಚಿಸಿರುವ ಒಬ್ಬ ವಾಗ್ಗೇಯ
•
ಇನುಕೊಂಡ ವಿಜಯರಾಮ ' ಎಂಬ ಅಂಕಿತದಲ್ಲಿ ಪದಗಳನ್ನು
ಕಾರ.
ರಚಿಸಿದ್ದಾರೆ.