2023-06-30 05:45:31 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಪುರಾತನ ಸಂಗೀತಶಾಸ್ತ್ರ ಗ್ರಂಧಗಳಲ್ಲಿ ಉಕ್ತವಾಗಿರುವ ಒಂದು
ರಾಗಾಂಗರಾಗ
ಆಂದಾಳಿ ಕುರಂಜಿ
ತೇವಾರಂ ಹಾಡುಗಳ ಸಂಗೀತದಲ್ಲಿ ಕಂಡುಬರುವ
ಒಂದು ಪಣ್, ಇದು ಈಗಿನ ಸಾಮರಾಗವನ್ನು ಹೋಲುತ್ತದೆ.
ಆಂದೋಳ
ನಾರದನ - ಸಂಗೀತ ಮಕರಂದ 'ವೆಂಬ ಗ್ರಂಥದಲ್ಲಿ ಹೇಳಿರುವ
ಸೂರ್ಯಾಂಶ ರಾಗಗಳಲ್ಲಿ ಒಂದು ರಾಗದ ಹೆಸರು.
ಆಂದೋಳಿ
ನಾರದನ - ಸಂಗೀತ ಮಕರಂದ 'ವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ಚಂದಾಂಶರಾಗ, ಇದು : ಭರತ ಸೇನಾಪತೀಯಂ' ಎಂಬ ಗ್ರಂಥ
ದಲ್ಲಿಯೂ ಉಕ್ತವಾಗಿವೆ.
ಆಂದೋಳಿಕಾ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಮ ಪ ನಿ ಸ
ಸ ನಿ ದ ಮ ರಿ ಸ
ಸ ರಿ ಮ ಪ ನಿ ಸ
ಸ ನಿ ದ ಮ ರಿ ಸ
ಇದು ಎಲ್ಲಾ ವೇಳೆಯಲ್ಲೂ ಹಾಡಬಹುದಾದ ರಾಗ, ಇದಕ್ಕೆ ಮಯೂರಧ್ವನಿ ಎಂಬ
ಇನ್ನೊಂದು ಹೆಸರಿದೆ.
ಇದೊಂದು ಉಪಾಂಗ ರಾಗ, ಆರೋಹಣದಲ್ಲಿ ಗಾಂಧಾರ
ಧೈವತಗಳೂ, ಅವರೋಹಣದಲ್ಲಿ ಗಾಂಧಾರ ಪಂಚಮಗಳು ವರ್ಜ್ಯ,
ನಿಷಾದಗಳು ಪರಸ್ಪರವಾದಿ ಸಂವಾದಿಗಳು, ಷಡ್ಡವು ಗ್ರಹ, ಅಂಶ ಮತ್ತು ನ್ಯಾಸಸ್ವರ,
ವಿಪ್ರಲಂಭ ಶೃಂಗಾರ ರಸಕ್ಕೆ ತಕ್ಕ ರಾಗ ಅವರೋಹಣದಲ್ಲಿ ನಿಷಾದ, ಮಧ್ಯಮ
ಮಧ್ಯಮ
ಮತ್ತು ರಿಷಭಗಳಿಗೆ ಜಾರುಗಮಕ ಪ್ರಯೋಗ ಮಾಡಿದರೆ ಇದರ ಸೊಬಗು ಹೆಚ್ಚು
ವುದು. ತ್ಯಾಗರಾಜರ 'ರಾಗ ಸುಧಾರಸ' ಎಂಬ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
ಆಂದೋಳಿಕ
ಇದೇ ಹೆಸರಿನ ಮೂರು ರಾಗಗಳಿವೆ. ಇವು ೨೮ನೆಯ
-
ಮೇಳಕರ್ತ ಹರಿಕಾಂಭೋಜಿಯ ಜನ್ಯ.
(೧) ಆ : ಸ ರಿ ಮ ಪ ನಿ ಸ
(೨) ಆ
:
ನಿ ದ ಮ ಗ ಮ
ಸ ರಿ ಮ ಪ ನಿ ಸ
ಸ ನಿ ಪ ಮ ಸ ರಿ ಗ ಮ ರಿ ಸ
ಸ ರಿ ಮ ಪ ನಿ ಸ
ಸ ನಿ ಪ ಮ ಸ ರಿ ಗ ಮ ರಿ ಸ
(೩) ಆ ಸ ರಿ ನ ಪ ನಿ ಸ
ಅ : ಸ ನಿ ದ ಮ ಗ ರಿ ಸ
ಆಂದೋಳಿತ
ಪಂಚದಶಗಮಕಗಳಲ್ಲಿ ಇದು ಒಂದು ಬಗೆಯ ಗಮಕ,
ಒಂದು ಸ್ವರವನ್ನು ಸ್ವಲ್ಪ ಕಾಲ ಹಿಡಿದು ನಂತರ ತಂತಿಯ ಜಾರುವಿಕೆಯನ್ನು
ಮಾಡಿದರೆ ಮೇಲಿನ ಗಮಕ ಉಂಟಾಗುತ್ತದೆ. ಸ್ವರವನ್ನು ಆಡಿಸಿದಂತಾ
ಗುತ್ತದೆ.