This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಆಭರಣಗಳು, ಉಡುಗೆತೊಡುಗೆಗಳ ಸಿದ್ಧತೆ ಮುಂತಾದುವು ಅಲಂಕರಣವೆನಿಸಿಕೊಳ್ಳು
ಇವೆ. ಆಹಾರಾಭಿನಯ ಉದ್ದೇಶ, ನಾಟಕವು ಜೀವಂತ ಕಳೆಯಿಂದ ಕೂಡುವಂತೆ
ಮಾಡುವುದು ಎಂದು ಸ್ಪಷ್ಟವಾಗಿ ಭರತನು ಹೇಳಿದ್ದಾನೆ.
 
ನಾಟ್ಯ ಪ್ರಯೋಗದ ಯಶಸ್ಸಿಗೆ
ಒಡವೆ ವಸ್ತ್ರ ವರ್ಣಾದಿಗಳಿಂದೊಡಗೂಡಿದ,
ವ್ಯಕ್ತವಾಗುವುದೇ ಆಹಾರಾಭಿನಯ.
 
ಆಹಾರಾಭಿನಯವು ಮುಖ್ಯವಾದುದು.
ಅಂಗಾದ್ಯಭಿನಯ ಪ್ರಯುಕ್ತವಾಗಿ ಅಭಿ
ಆಭರಣಾದಿ ವೇಷಭೂಷಣಗಳಿಂದ ಭಾವ
 
ಪುಷ್ಟಿಯನ್ನು ಸೂಚಿಸುವಂತಹ ಈ ಆಹಾರಾಭಿನಯವನ್ನು ನೇಪಥ್ಯವಿಧಿ ಎಂದು
ಕರೆಯುತ್ತಾರೆ.
 
೮೨
 
ಆಹಿರಿ ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ ಒಂದು ಜನ್ಯರಾಗ,
ಸ ರಿ ಸ ಮ ಗ ಮ ಪ ದ ನಿ ಸ
 
ಆ .
 
ಅ .
 
ಸ ನಿ ದಾ ಪ ಮ ಗ ಮ ಗ ರೀ ಸ
 

 
ಯೆಂದು ಹೇಳಿದೆ
 
ರಾಗವು ಅತಿ ಪ್ರಾಚೀನವಾದುದು. ಮತಂಗನ ಬೃಹದ್ದೇಶಿ ಎಂಬ ಗ್ರಂಥ
ದಲ್ಲಿ ಈ ರಾಗವು ಗ್ರಾಮರಾಗಗಳಲ್ಲಿ ಒಂದಾದ ಮಾಳವ ಕೈಶಿಕಿ ರಾಗದ ಭಾಷೆ
ಇದು ಸಂಪೂರ್ಣ ಸಪ್ತ ಸ್ವರಗಳಲ್ಲದೆ ಇತರ ಸ್ವರಗಳನ್ನೂ
ಪ್ರಯೋಗದಲ್ಲಿ ಒಳಗೊಂಡಿದೆ. ರಾಮಾಮಾತ್ಯನ ದೃಷ್ಟಿಯಲ್ಲಿ ತೀವ್ರಋಷಭ,
ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಕೈಶಿಕಿ ನಿಷಾದ, ಶುದ್ಧ ಧೈವತ, ತೀವ್ರ
ನಿಷಾದ ಈ ರಾಗದ ಸ್ವರಸ್ಥಾನಗಳು. ಆದರೆ ವೆಂಕಟಮಖಿಯ ಸಂಪ್ರದಾಯದಲ್ಲಿ
ಇದು ನಾರಿ ರೀತಿಗೌಳರಾಗದಲ್ಲಿ (ನಠಭೈರವಿ) ಜನ್ಯವಾಗಿಯೂ, ಭಾಷಾಂಗ ರಾಗ
ವಾಗಿಯೂ, ಪ್ರತಿ ಮಧ್ಯಮ ಒಂದನ್ನು ಬಿಟ್ಟು ಮಿಕ್ಕೆಲ್ಲ ಸ್ವರಗಳೂ ಸಮಯಾನು
ಸಾರ ಬರುವುದೆಂದೂ ಹೇಳಿದ್ದಾರೆ.
 
೧೯೩೦ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಟಿ ವಿ. ಸುಬ್ಬರಾಯರ
ಅಧ್ಯಕ್ಷತೆಯಲ್ಲಿ ಈ ರಾಗವನ್ನು ಕುರಿತು ಚರ್ಚೆ ನಡೆಯಿತು ವಿದ್ವಾಂಸರಾದ
ಸಭೇಶ ಅಯ್ಯರ್, ಸುಬ್ರಹ್ಮಣ್ಯಶಾಸ್ತ್ರಿ, ಟಿ. ಎಲ್. ವೆಂಕಟರಾಮ ಅಯ್ಯರ್
ಇದರಲ್ಲಿ ಭಾಗವಹಿಸಿದ್ದರು
 
ಈ ರಾಗವು ೮ನೇ ಮೇಳ ಹನುಮತೋಡಿಯಲ್ಲಿ ಜನ್ಯವೆಂದು ಕೆಲವರೂ,
೧೪ನೆ ಮೇಳ ವಕುಳಾಭರಣದಲ್ಲಿ ಜನ್ಯವೆಂದು ಕೆಲವರೂ, ೧೫ನೆ ಮೇಳ ಮಾಯಾ
ಮಾಳವದಲ್ಲಿ ಜನ್ಯವೆಂದು ಕೆಲವರೂ ಹೇಳುತ್ತಾರೆ. ಅನೇಕ ವಿದ್ವಾಂಸರ ಅಭಿಪ್ರಾಯ
ದಲ್ಲಿ ಇಷ್ಟೆಲ್ಲಾ ವಾದವಿವಾದಗಳಿಗೆ ಆವಶ್ಯಕತೆಯೇ ಇಲ್ಲ ಪ್ರತಿ ಮಧ್ಯಮ ಒಂದನ್ನು
ಬಿಟ್ಟರೆ ಮಿಕ್ಕೆಲ್ಲಾ ೧೧ ಸ್ವರಗಳೂ ಈ ರಾಗದಲ್ಲಿ ಬರುತ್ತವೆ. ಎಂದ ಮೇಲೆ ೩೬
ಶುದ್ಧ ಮಧ್ಯಮ ಮೇಳಗಳಲ್ಲಿ ಯಾವುದರಲ್ಲಿ ಬೇಕಾದರೂ ಇದು ಜನ್ಯವಾಗಲು
ಸಾಧ್ಯ. ಕೆಲವು ರಚನೆಗಳಲ್ಲಿ ಸಾಧಾರಣ ಗಾಂಧಾರವು ಕಂಡುಬಂದರೂ ರಾಗವನ್ನು
ಹಾಡುವಾಗ ಅಂತರ ಗಾಂಧಾರದ ಪ್ರಯೋಗವು ಇದ್ದೇ ಇರುತ್ತದೆ. ಆದ್ದರಿಂದ ಇದು