This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದಕ್ಷಿಣದ ಭಾಷೆಗಳಲ್ಲಿ ಹೆಚ್ಚಾಗಿದ್ದಿತು ಕೆಲವು ಪ್ರಬಂಧಗಳು ಉತ್ತರ ಭಾರತದ

ಪ್ರಾದೇಶಿಕ ಭಾಷೆಗಳಲ್ಲಿದ್ದುವು
 
೮೧
 

 
ಆವರ್ತಿತ
ಇದು ಭರತನಾಟ್ಯದಲ್ಲಿ ಹೇಳಿರುವ ಐದು ಬಗೆಯ ಮೊಳಕಾಲು

ಭೇದಗಳಲ್ಲಿ ಒಂದು ವಿಧ. ಎಡಗಡೆಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ

ಪಾದಗಳನ್ನಿಟ್ಟು ನಡೆಯುವಾಗ ಉಂಟಾಗುವ ಮೊಳಕಾಲಿನ ನಡೆಯ ಭೇದವೇ

ಆವರ್ತಿತ ಅಥವಾ ಮೊಳಕಾಲುಗಳನ್ನು ಸ್ವಸ್ತಿ ಕಾಕಾರವಾಗಿ ನಡೆಯುವುದು ಆವರ್ತಿತ.

 
ಆಲಂಬನ
ವಿಭಾವ-
ರಸಗಳೂ ಸ್ಥಾಯಾಭಾವಗಳೂ ಯಾವುದನ್ನು
ಆಶ್ರಯಿಸಿರುತ್ತವೋ ಅವು ಆಲಂಬನ ವಿಭಾವ. ರಸಗಳೂ, ಸ್ಥಾಯಾಭಾವಗಳೂ

ನಾಯಕ-ನಾಯಕಿಯನ್ನು ಆಶ್ರಯಿಸಿರುತ್ತವೆ. ರಾಮ-ಸೀತೆ ಇಂತಹ ನಾಯಕ

ನಾಯಕಿಯರ ವ್ಯಕ್ತಿತ್ವದ ರೀತಿ, ಶೀಲ, ನೀತಿ, ಸತ್ಯದ ಸೂಕ್ಷ್ಮ ಸ್ವರೂಪ ದರ್ಶನವೇ
 
ಆಲಂಬನ
 
ಆಶ್ರಯಿಸಿರುತ್ತವೋ ಅವು
ಆಲಂಬನ ವಿಭಾವ.
 
ಆಲಂಬನ ವಿಭಾವ
 

 
ಆಶ್ರಿತರಂಜಿನಿ-
ಈ ರಾಗವು ೬೭ನೆಯ ಸುಚರಿತ್ರ ಮೇಳಕರ್ತದ ಒಂದು
 

ಜನ್ಯರಾಗ,
 

ಸ ರಿ ಗ ಮ ಪ ನಿ ಸ
 

ಸ ನಿ ದ ಪ ಮ ಗ ರಿ ಸ
 

 
ಆಹತ
(೧) ಗಾನೋತ್ಪತ್ತಿಕಾರಿಯಾದ ಶ್ರುತಿ ಸ್ವರ ಗ್ರಾಮಾದಿಗಳಿಂದ

ಜನರಿಗೆ ರಂಜನೆಯನ್ನುಂಟುಮಾಡುವ ಸಂಗೀತ. ಮಾನವನ ಪ್ರಯತ್ನದಿಂದ

ಉಂಟಾಗುವ ಸಂಗೀತ, ಇದು ಗೀತ, ವಾದ್ಯ, ನೃತ್ಯಗಳೆಂಬ ಮೂರು ಬಗೆಗಳನ್ನು
 

ಒಳಗೊಂಡಿದೆ.
 

(೨) ಇದೊಂದು ವಿಧವಾದ ಗಮಕ ವೀಣೆಗೆ ಸಂಬಂಧಿಸಿದೆ ಒಂದು ಸ್ವರ

ವನ್ನು ಮಾಟ ಇನ್ನೊಂದು ಸಲ ತಂತಿಯನ್ನು ಮಾಟದೆ ಮತ್ತೊಂದು ಸ್ವರವನ್ನು

ಉಂಟುಮಾಡುವುದು ಇದು ಗಾಯನದಲ್ಲಿ ಸರ್ವಸಾಮಾನ್ಯವಾಗಿ ಬಳಸುವ ಗಮಕ

ವಿಶೇಷ. ಇದು ದಶ ವಿಧ ಮತ್ತು ಪಂಚದಶ ಗಮಕಗಳಲ್ಲಿ ಒಂದಾಗಿದೆ.
 

 
ಆಹತಿ-
ಇದು ವೀಣೆಯ ತಂತಿಗಳನ್ನು ಮಾಟುವ ಒಂದು ವಿಧಾನ. · ರಾಗ

ವಿಬೋಧ 'ವೆಂಬ ಗ್ರಂಥದಲ್ಲಿ ಸೋಮನಾಥನ ಈ ಪದವನ್ನು ಬಳಸಿದ್ದಾನೆ.
 

 
ಆಹಾರ-ರ್ಯ
ಭರತನಾಟ್ಯದ ನಾಲ್ಕು ಬಗೆಯ ಅಭಿನಯಗಳಲ್ಲಿ ಒಂದು ವಿಧ

ನಾದ ಅಭಿನಯ. ನಾಟಕದ ಸಫಲ ಪ್ರಯೋಗಕ್ಕೆ ಅಲಂಕರಣವು ಇತರ ಭಾಗ

ಗಳಂತೆ ಬಹಳ ಅಗತ್ಯ. ಈ ಸಿದ್ಧತೆಗಳಿಗೆಲ್ಲ ಆಹಾರಾಭಿನಯವೆಂದು ಹೆಸರು.

ಮುಖ, ಮೈ, ಕೈಗಳಿಗೆ ಬಣ್ಣ ಬಳಿದುಕೊಳ್ಳುವುದು, ಪಾತ್ರಕ್ಕೆ ಸಲ್ಲುವ ಉಡುಗೆ,

ಆಭರಣಗಳ ನಿರ್ಮಾಣ, ಹಿನ್ನೆಲೆಯ ಚಿತ್ರಣ, ದೃಶ್ಯ ಜೋಡಣೆ, ರಂಗಸಜ್ಜಿಕೆ

ಮುಂತಾದುವೆಲ್ಲವೂ ಸೇರುತ್ತವೆ. ಹೂಮಾಲೆ, ಕೊರಳಿನ ಸರಗಳು ಮುಂತಾದ