This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮಾನಂಬುಚಾವಡಿ ವೆಂಕಟಸುಬ್ಬಯ್ಯರ್‌ರವರ ಶಿಷ್ಯರು, ಶ್ರೀನಿವಾಸಅಯ್ಯರ್
ರವರ ತಂದೆಯ ಕೋರಿಕೆಯಂತೆ ವೆಂಕಟೇಶಯ್ಯರ್ ಸಂಗೀತ ಶಿಕ್ಷಣ ನೀಡಲು ಒಪ್ಪಿ
ಶಿಕ್ಷಣ ನೀಡಿದರು. ನಂತರ ಆಲತ್ತೂರ್ ಸಹೋದರರ ಕಚೇರಿಗಳು ಆರಂಭವಾದುವು.
೧೯೬೫ರಲ್ಲಿ ಶಿವಸುಬ್ರಹ್ಮಣ್ಯ ಅಯ್ಯರ್ ಹರಾತ್ತನೆ ತೀರಿಕೊಂಡಾಗ ಶ್ರೀನಿವಾಸ
ಅಯ್ಯರ್ ಹಾಡುವುದನ್ನು ನಿಲ್ಲಿಸಿ ಅಜ್ಞಾತವಾಸಿಗಳಾದರು. ಪಾಲಘಾಟ್ ಮಣಿ
ಅಯ್ಯರ್‌ರವರು ಇವರನ್ನು ಬಲವಂತ ಮಾಡಿ ಇವರ ಕಚೇರಿಗಳಿಗೆ ತಾವೇ ಮೃದಂಗ
ನುಡಿಸುವುದಾಗಿ ಹೇಳಿ ಒಪ್ಪಿಸಿದರು. ಅಲ್ಲಿಂದ ಶ್ರೀನಿವಾಸಅಯ್ಯರ್‌ರ ಜೀವನದಲ್ಲಿ
ಮತ್ತೊಂದು ಅಧ್ಯಾಯ ಆರಂಭವಾಯಿತು. ಅಲ್ಲಿಂದ ಮುಂದೆ ಇವರ ಸಂಗೀತ ಸೇವೆ
ಒಂದೇ ಸಮನಾಗಿ ಪುನಃ ಆರಂಭವಾಯಿತು. ೧೯೬೫ರಲ್ಲಿ ಮದ್ರಾಸಿನ ಮ್ಯೂಸಿಕ್
ಅಕಾಡೆಮಿಯ ಅಧ್ಯಕ್ಷರಾಗಿ * ಸಂಗೀತ ಕಲಾನಿಧಿ ' ಎಂಬ ಬಿರುದನ್ನು ಪಡೆದರು.
೧೯೬೯ರಲ್ಲಿ ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ದೊರಕಿತು
 
ಶ್ರೀನಿವಾಸ ಅಯ್ಯರ್‌ರವರ ಗಾಯನದಲ್ಲಿ ಕರ್ಣಾಟಕ ಸಂಗೀತದ ಸತ್ಸಂಪ್ರ
ದಾಯವು ಎದ್ದು ಕಾಣುತ್ತದೆ. ರಾಗವಿಸ್ತರಣೆಯ ವಿಧಾನ, ಕೃತಿಗಳ ಚಿಟ್ಟೆ, ನೆರವಲ್
ಕ್ರಮ, ಪ್ರತಿಭಾಪೂರ್ಣವಾದ ಸ್ವರಪ್ರಸಾರ ಮುಂತಾದುವು ಇವರ ಹಾಡುಗಾರಿಕೆಯ
ಪ್ರಮುಖ ಅಂಶಗಳು.
ಇವರು ಕ್ಲಿಷ್ಟವಾದ ಪಲ್ಲವಿಗಳನ್ನು ಹಾಡುವುದರಲ್ಲಿ ಪ್ರವೀಣ
ರಾಗಿದ್ದರು. ಕರ್ಣಾಟಕದ ಸಂಗೀತ ರಸಿಕರಿಗೆ ಇವರ ಗಾಯನವು ಚಿರಪರಿಚಿತ.
ಆಲವ-ಇದು ಹರಿಪಾಲದೇವನ ಸಂಗೀತ ಸುಧಾಕರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ಬಗೆಯ ವೀಣೆ
 
ಅ೦
 
ಆಲಿಂಗ-ವಾದ್ಯವನ್ನು ನುಡಿಸಲು ಇಟ್ಟುಕೊಳ್ಳುವ ರೀತಿಯನ್ನು ತಿಳಿಸುವ
ಮೃದಂಗವನ್ನು ಉದ್ದುದ್ದವಾಗಿ ಇಟ್ಟುಕೊಂಡು ನುಡಿಸುವುದು ಆಲಿಂಗ್ಯ,
ತಬಲವನ್ನು ನೆಟ್ಟಗೆ ಮೇಲ್ಮುಖವಾಗಿ ಇಟ್ಟುಕೊಳ್ಳುವುದು ಊರ್ಧ್ವಕ.
 
ಪದ.
 
ಆಲಾಪಿಕವಂಶ -ಋಗೈದದಲ್ಲಿ ಉಕ್ತವಾಗಿರುವ ಒಂದು ಬಗೆಯ ಕೊಳಲು,
ಆಲಾಪಿನಿ-(೧) ಭರತನ ಮತದಂತೆ ೨೨ ಶ್ರುತಿಗಳಲ್ಲಿ ಸ್ವರದ ನಾಲ್ಕನೆಯ
ಶ್ರುತಿಯ ಹೆಸರು.
 
(೨) ಬೊಂಬಿನಿಂದ ತಯಾರಿಸಿರುವ ದಂಡಿಯಿರುವ ತಂತೀವಾದ್ಯದ ಹೆಸರು.
ಆಲ-ಆಲಾಪನೆ ಇದರಲ್ಲಿ ಆಲಪ್ತಿ ಮತ್ತು ರೂಪಕ ಆಲ ಎಂಬ
ಎರಡು ವಿಧಗಳಿವೆ. ವಿಷಯವಿಲ್ಲದೆ ಆಲಾಪನೆ ಮಾಡಿದರೆ ಅದು ಆಲಸ್ತಿ.
ಆಧಾರಿತವಾದ ಆಲಾಪನೆಯು ರೂಪಕ ಆಲ. ಅಂದರೆ ಪಲ್ಲವಿಯ ಆಧಾರದ
 
ವಿಷಯದ
 
ಮೇಲೆ ಬೆಳೆಸುವ ಆಲಾಪನೆ.
 
ಆಲಿಕ್ರಮ ಪ್ರಬಂಧ-ಶಾರ್ಙ್ಗದೇವ ಮತ್ತು ಇತರ ಲಕ್ಷಣಕಾರರು ಪ್ರಬಂಧ
ಗಳನ್ನು ಮೂರು ವಿಧವಾಗಿ ವರ್ಗಿಕರಿಸಿದ್ದಾರೆ. ಅವು ಸೂಡಪ್ರಬಂಧ, ವಿಪ್ರಕೀರ್ಣ
ಪ್ರಬಂಧ ಮತ್ತು ಆಲಿಕ್ರಮ ಪ್ರಬಂಧ. ಆಲಿಕ್ರಮ ಪ್ರಬಂಧವು ಪ್ರಾಕೃತ ಮತ್ತು