2023-06-30 05:31:07 by jayusudindra
This page has been fully proofread once and needs a second look.
ಅ : ಸ ನಿ ದ ಪ ಮ ಗ ರಿ ಸ
ಆಳ್ವಾರ್ ತಿರುನಗರಿ
ಇದು
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ
ಪ್ರಮುಖ ಆಳ್ವಾರರಾದ ನಮ್ಮಾಳ್ವಾರ್‌ರ
ಜನ್ಮಸ್ಥಳ. ಇಲ್ಲಿರುವ ದೇವಾಲಯದಲ್ಲಿ ಸುಂದರವಾದ ಸಂಗೀತ ಸ್ತಂಭಗಳಿವೆ. ಶಿಲೆ
ಯಿಂದ ಮಾಡಿದ ಅಪರೂಪವಾದ ನಾದಸ್ವರವನ್ನು ನುಡಿಸುತ್ತಾರೆ.
೭೯
ಆಲೋಲಿತ
ನಂದಿಕೇಶ್ವರನು ಹೇಳಿರುವಂತೆ ಭರತನಾಟ್ಯದಲ್ಲಿರುವ ಎಂಟು
ಮೂಲ ದೃಷ್ಟಿ ಭೇದಗಳಲ್ಲಿ ಒಂದು ವಿಧ ನಿರೀಕ್ಷಣೆ, ಚಕ್ರ, ತಿರುಗುವುದು, ಕ್ರೋಧ,
ರೌದ್ರಾದಿಗಳನ್ನು ಸೂಚಿಸಲು ಉಪಯೋಗಿಸುವ ಒಂದು ಕ್ರಿಯೆ. ಇದು ಸಮದೃಷ್ಟಿ
ಯನ್ನು ಸುತ್ತಲೂ ಚಕ್ರಾಕಾರವಾಗಿ ತಿರುಗಿಸುತ್ತಾ ಸ್ಪುಟವಾಗಿ ನೋಡುವ ಕ್ರಿಯೆ.
ನಾಟ್ಯಶಾಸ್ತ್ರದಲ್ಲಿ ಹೇಳಿರುವ ಒಂದು ಶಿರೋಭೇದ, ತಲೆಯನ್ನು ಚಕ್ರಾಕಾರವಾಗಿ
ತಿರುಗಿಸುವ ಕ್ರಿಯೆ.
ಆವಡೆ
ಆವಡೈಯಾರ್ ಕೋವಿಲ್
ತಮಿಳುನಾಡಿನ ಸಂತ ಮಾಣಿಕ್ಯ ವಾಚಕರ್
ಇದು ತಂಜಾವೂರು ಜಿಲ್ಲೆಯಲ್ಲಿದೆ. ಇಲ್ಲಿ ಸಂಗೀತ
ವಾದ್ಯಗಳು, ಸಂಗೀತಗಾರರು ಮತ್ತು ನಾಟ್ಯವಾಡುವವರ ಸುಂದರವಾದ ಶಿಲ್ಪಗಳಿವೆ.
ಆವಾಪ
ಇದು ತಾಳವನ್ನು ಲೆಕ್ಕ ಮಾಡುವ ಒಂದು ವಿಧಾನ. ಮಾರ್ಗ
ಕ್ರಿಯಾಷ್ಟಕಗಳಲ್ಲಿ ಇದೊಂದು ನಿಶ್ಯಬ್ದ ಕ್ರಿಯೆ. ಕೈಯನ್ನು ಮೇಲಕ್ಕೆತ್ತಿ ಬೆರಳು
ಗಳನ್ನು ಮಡಿಚಿಕೊಳ್ಳುವುದು
ಆವರ್ತ-
ಆವರ್ತ
ತಾಳದ ಅಂಗಗಳನ್ನು ಪೂರ್ತಿ ಲೆಕ್ಕಮಾಡಲು ಬೇಕಾಗುವ ಕಾಲ.
ತಾಳದ ಪೂರ್ತಿ ಕಾಲ, ಆದಿತಾಳಕ್ಕೆ ೮ ಅಕ್ಷರಗಳ ಕಾಲವನ್ನು ಎಣಿಸುವುದು ಒಂದು
ಆವರ್ತವಾಗುತ್ತದೆ.
ಉಪದೇಶ ಪಡೆದ ದೇವಾಲಯ,
ಆಲ
ಆಲತ್ತೂರ್ ಸಹೋದರರು
ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಆಲತ್ತೂರು
ಸಹೋದರರು ಪ್ರಮುಖ ವಿದ್ವಾಂಸರು. ಅವರು ಸಹೋದರರಲ್ಲದಿದ್ದರೂ ಸಂಗೀತದಲ್ಲಿ
ಸಹೋದರರು. ಶಿವಸುಬ್ರಹ್ಮಣ್ಯ ಅಯ್ಯರ್ ಆಂಧ್ರದವರು. ಶ್ರೀನಿವಾಸ ಅಯ್ಯರ್
ತಮಿಳರು. ಇಬ್ಬರೂ ಶಿವಸುಬ್ರಹ್ಮಣ್ಯ ಅಯ್ಯರ್‌ರವರ ತಂದೆ ಆಲತ್ತೂರ್ ವೆಂಕಟೇಶ
ಅಯ್ಯರ್‌ರವರಲ್ಲಿ ಸಂಗೀತ ಶಿಕ್ಷಣ ಪಡೆದರು. ಇಬ್ಬರೂ ತಿರುವಾಂಕೂರಿನ ಆಸ್ಥಾನ
ವಿದ್ವಾಂಸರಾಗಿದ್ದರು. ಇವರಲ್ಲಿ ಕಿರಿಯವರಾದ ಶಿವಸುಬ್ರಹ್ಮಣ್ಯ ಅಯ್ಯರ್ ೧೯೬೫
ರಲ್ಲಿ ತೀರಿಕೊಂಡರು.
ಆಲತ್ತೂರು ಶ್ರೀನಿವಾಸ ಅಯ್ಯರ್ (೧೯೧೨-೧೯೮೦)
ಕರ್ಣಾಟಕ
ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾದ ಆಲತ್ತೂರ್ ಸಹೋದರರಲ್ಲಿ ಹಿರಿಯರು ಶ್ರೀನಿವಾಸ
ಅಯ್ಯರ್ ಈ ಸಹೋದರರಲ್ಲಿ ಕಿರಿಯವರು ಕೀರ್ತಿಶೇಷರಾದ ಶಿವಸುಬ್ರಹ್ಮಣ್ಯ
ಅಯ್ಯರ್, ಇವರ ತಂದೆ ಆಲತ್ತೂರ್ ವೆಂಕಟೇಶ ಅಯ್ಯರ್ ತ್ಯಾಗರಾಜರ ಶಿಷ್ಯರಾದ