2023-06-27 05:14:49 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
೨.ಶಿಸ್ತಿನಿಂದ ಕುಳಿತು ಅಭ್ಯಾಸ ಮಾಡಬೇಕು
೩.ಹಾಡುವಾಗ ವಿಕಾರವಾಗದ ರೀತಿಯಲ್ಲಿ ಅಂಗಚೇಷ್ಟೆಯಿಲ್ಲದೆ, ಅಕಾರ,
ಎಕಾರ, ಒಕಾರಗಳು ಮಿಶ್ರವಾಗದೆ ತುಂಬುನಾದ ಬರುವಂತೆ ಶ್ರುತಿಗೆ
ಗಮನವಿಟ್ಟಿರಬೇಕು.
೪.
ಕೊಳ್ಳುತ್ತಿದ್ದರೆ ಸಾಕು. ಈ ಘಾತಕ್ಕೆ ವಿಳಂಬ, ಮಧ್ಯಮಕಾಲ,
ತ್ರಿಕಾಲಗಳಲ್ಲಿ ಸ್ವರ ಅಥವಾ ಸಾಹಿತ್ಯದ ಭಾಗ ಹಾಡುತ್ತಿದ್ದರೆ
ಒಂದು ಸಮನಾದ ಗತಿ ನಮಗೆ ನಿಲ್ಲುತ್ತದೆ.
೧೯೪೦ಕ್ಕೆ ಹಿಂದೆ ಗುರುಕುಲವಾಸ ಕಠಿಣತರವಾಗಿತ್ತು. ರಾಗಗಳನ್ನು ಗಂಟೆಗಟ್ಟಲೆ
ಹಾಡಲು ಈ ಸಾಧಕವು ಕಾರಣವಾಗಿತ್ತು. ಹಿಂದೆ ಕಚೇರಿಗಳಲ್ಲಿ ೪-೫ ಕೀರ್ತನೆ
ಗಳನ್ನು ಮಾತ್ರ ಹಾಡುತ್ತಿದ್ದರು. ಈ ಬಗೆಯ ಸಾಧಕದಿಂದ ಶಾರೀರಕ್ಕೆ ಘನತೆ,
ಸ್ವರಸ್ಥಾನಗಳ ಶುದ್ಧತೆ ಒದಗಿ ಕಚೇರಿಗಳಲ್ಲಿ ೪-೫ ಗಂಟೆಗಳ ಕಾಲ ಶಾರೀರದ ದೋಷ
ಇಲ್ಲದೆ ಹಾಡಲು ಸಾಧ್ಯ.
ಶರಣೆ
ಅಕ್ಕ ಮಹಾದೇವಿ (೧೨ನೆ ಶ.)-ಅಕ್ಕ ಮಹಾದೇವಿ ಒಬ್ಬ ಪ್ರಖ್ಯಾತ ಶಿವ
ಕರ್ಣಾಟಕದ ಶಿವಮೊಗ್ಗ ಜಿಲ್ಲೆಯ ಉಡುತಡಿ ಎನ್ನುವ ಊರಲ್ಲಿ ಸುಮತಿ,
ನಿರ್ಮಲರೆಂಬ ಶೈವಭಕ್ತ ದಂಪತಿಯರ ಮಗಳಾಗಿ ಜನಿಸಿದಳು.
ರೂಪ ಗುಣ
ಸೌಂದರ್ಯವತಿಯಾದ ಹುಡುಗಿ ಬೆಳೆದು
ರೂಪ ಗುಣ
ಆ ಊರಿನ ದೊರೆ ಕೌಶಿಕನು ಇವಳನ್ನು ಆಕಸ್ಮಿಕವಾಗಿ ನೋಡಿ ಇವಳನ್ನು ವರಿಸುವ
ಆಲೋಚನೆ ಮಾಡಿ ಸಂಧಾನ ನಡೆಸಿದನು. ದುಷ್ಟ ದೊರೆಗೆ ಹೆದರಿದ ತಂದೆ ತಾಯಿ
ಅಕ್ಕನನ್ನು ಕೊಡಲು ಒಪ್ಪಿದರು. ಮದುವೆಯಾದಮೇಲೆ ಶಿವಪೂಜೆಯನ್ನೂ, ಗುರು
ಲಿಂಗಜಂಗಮ ಪೂಜೆಯನ್ನು ಮಾಡಬೇಕೆಂದೂ ಶಿವಶರಣರ ಕಥೆ ತತ್ರೋಪದೇಶವನ್ನು
ಕೇಳುವುದಕ್ಕೂ ಅಡ್ಡಿ ಬರಬಾರದೆಂದೂ ಹಾಗೆ ಅಡ್ಡಿ ಪಡಿಸಿ ಮೂರು ತಪ್ಪುಗಳನ್ನು
ಮಾಡಿದ್ದೇ ಆದರೆ ದೊರೆಯನ್ನು ತ್ಯಜಿಸಿಹೋಗುವುದಾಗಿಯೂ ನಿಬಂಧನೆಗಳನ್ನು
ಹಾಕಿದಳು. ಕೌಶಿಕನು ಒಪ್ಪಿದನು. ಅವನನ್ನು ಮದುವೆಯಾಗಿ ಅಕ್ಕನು ಅರಮನೆ
ಸೇರಿದಳು ಅಕ್ಕನ ಶಿವಾಚಾರಗಳು ಕೌಶಿಕನಿಗೆ ಸರಿಬೀಳಲಿಲ್ಲ. ಅಂತೆಯೇ ಮೂರು ಸಾರಿ
ತಪ್ಪುಗಳನ್ನು ಮಾಡಿದನು. ನಂತರ ಅರಮನೆಯನ್ನು ತ್ಯಜಿಸಿ, ಕಲ್ಯಾಣ ನಗರಕ್ಕೆ ಹೋಗಿ
ಅಲ್ಲಿ ಬಸವ, ಚನ್ನಬಸವ, ಅಲ್ಲಮ, ಸಿದ್ಧರಾಮಾದಿ ಶಿವಶರಣರ ಸಂಗಸಹವಾಸದಲ್ಲಿ
ಕೆಲಕಾಲವಿದ್ದು ಶ್ರೀಶೈಲಕ್ಕೆ ಹೋಗಿ ಭಗವಂತನಾದ ಚೆನ್ನಮಲ್ಲಿಕಾರ್ಜುನನ ಧ್ಯಾನದಲ್ಲಿ
ನಿರತಳಾಗಿ ಜಗಜ್ಯೋತಿಯಲ್ಲಿ ವಿಲೀನಳಾದಳು. ಅಕ್ಕನ ವಚನಗಳು ಬಹಳ ರಸ
ವತ್ತಾಗಿವೆ, ಕಾವ್ಯಮಯವಾಗಿವೆ. ಕುಮಾರ್ಯ, ಮಾಧುರ್ಯ, ಅರ್ಥಭಾವ,
ಪದಬಂಧ ಪ್ರೌಢಿಮೆಯನ್ನೊಳಗೊಂಡು ಶೋತೃಗಳ ಹೃದಯವನ್ನು ನಾದಮಯ