2023-06-30 05:07:59 by jayusudindra
This page has been fully proofread once and needs a second look.
ಸಮ್ಮೇಳನದಲ್ಲಿ ಕೀರ್ತನೆ ಮಾಡುತ್ತಾ ಆ ಆನಂದದಲ್ಲಿ ಅಂತರ್ಮುಖಿಗಳಾಗಿ
ಭಗವಂತನಲ್ಲಿ ಲೀನವಾದರು. ಎಷ್ಟೋ ಹೊತ್ತಿನಮೇಲೆ ಅವರು ಭಗವಂತನಲ್ಲಿ ಸೇರಿ
೭೨
ಆನಂದದಾಸರು ತಮ್ಮ ಕೀರ್ತನ ಗೀತೆ'ಯಲ್ಲಿ ಪ್ರತಿ ಅಧ್ಯಾಯಕ್ಕೂ ಎರಡು
ಪದಗಳು, ಕೆಲವು ಆರ್ಯಗಳು ಮತ್ತು ಷಟ್ಟದಿಗಳನ್ನು ಬರೆದಿದ್ದಾರೆ. ವಿಶ್ವರೂಪ
ದರ್ಶನದ ವರ್ಣನೆಯ ಕನ್ನಡ ದಂಡಕವು ಶ್ರೀ ರಾಮಾನುಜಾಚಾರ್ಯರ ವೈಕುಂಠ
ಗದ್ಯದಂತೆ ಬಹುಸುಂದರವಾಗಿದೆ. ಪುರಾಣದ ಕಥೆಗಳನ್ನು ಕೀರ್ತನಕ್ಕೆ ಹೊಂದಿಸಿ
ಪದ, ಪದ್ಯಗಳನ್ನಾಗಿ ಬರೆದಿಟ್ಟರು. ಭರತನಾಟ್ಯಕ್ಕೆ ಅನುಕೂಲವಾದ ನಾಯಕ-
ನಾಯಕೀ ಭಾವದಿಂದ ಕೂಡಿದ ಅನೇಕ ಜಾವಳಿಗಳನ್ನು ರಚಿಸಿದರು. ಇವರ ಪದ
ಗಳಲ್ಲಿ ಹಿಂದೂಸ್ಥಾನಿ ಮತ್ತು ಕರ್ಣಾಟಕ ಸಂಗೀತ ಪದ್ಧತಿಗಳ ಸಾಮರಸ್ಯವು ಬಹಳ
ಚೆನ್ನಾಗಿದೆ.
ಅಪರೂಪರಾಗಗಳಲ್ಲಿ ವರ್ಣಮಟು ಗಳನ್ನೆತ್ತುವುದು, ಅದರಲ್ಲಿ ಕಾಲ
ಭೇದ, ತಾಳಭೇದ ಮಾಡಿ ತೋರಿಸುವುದರಲ್ಲಿ ದಾಸರು ಅದ್ವಿತೀಯರಾಗಿದ್ದರು.
ಸಾಹಿತ್ಯದಲ್ಲಿ ಜೀವನದ ಸುಂದರ ಭಾವನೆಗಳು, ಅಶ್ಲೀಲವಲ್ಲದ ಶೃಂಗಾರ, ಕಟ್ಟಲೆ
ಗಳಿಲ್ಲದ ಭಕ್ತಿ, ಜಿಜ್ಞಾಸೆಗೆ ಅವಕಾಶವಿಲ್ಲದ ತತ್ವಗಳು ಪ್ರಮುಖವಾಗಿವೆ.
• ಕಮಲೇಶವಿಠಲ ' ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದರು.
ಅತ್ಯಂತ ಪ್ರಸಿದ್ಧವಾಗಿರುವುದು ( ಕಂಡು ಧನ್ಯನಾದೆನೋ ಉಡುಪಿ ಕೃಷ್ಣನ' ಎಂಬ
~
ಇವುಗಳಲ್ಲಿ
ಬೇಹಾಗ್ ರಾಗದ ಕೀರ್ತನೆ.
ಆನಂದ ಮುಖಿ
ಈ ರಾಗವು ೨೯ನೆಯ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
ಆ .
-
ಅ . ಸ ನಿ ದ ಪ ಮ ಗ ರಿ ಸ
ಆನಂದ ನಟನಿ
ಈ ರಾಗವು ೨ನೆಯ ಮೇಳಕರ್ತ ರತ್ನಾಂಗಿಯ ಒಂದು
ಜನ್ಯರಾಗ,
ಆ
ಅ :
ಆನಂದ ಲೀಲಾ
ಈ ರಾಗವು
ಭೂಷಣಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
೩೩ನೆಯ ಮೇಳಕರ್ತ ಗಾಂಗೇಯ
ಆನಂದ ವಾರಿಧಿ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ,