This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಯಂತಿದೆ ಸುರಪುರದ ರಾಜನು ಇವರ ಕೀರ್ತನವನ್ನು ಕೇಳಿ ಕನಕಾಭಿಷೇಕ ಮಾಡಿ
ಗೌರವಿಸಿದನು ಇವರ ಕೀರ್ತಿಯು ಗದ್ವಾಲ, ವನಪರ್ತಿ, ದೋಮಕೊಂಟ
ಮುಂತಾದ ರಾಜರ ಆಸ್ಥಾನಗಳಲ್ಲಿ ದಾಸರ ಕೀರ್ತನಗಳಾದುವು.
ದಾಸರು ವೈಭವ
ದಿಂದ ಕೂಡಿದ ಜೀವನ ನಡೆಸುತ್ತಿದ್ದರು.
 
ಸಿದರು.
 
ಹೀಗಿರಲು ಆಗಿನ ಸುರಪುರದ ರಾಜನು ಮೃತನಾಗಿ ಅವನ ಉತ್ತರಾಧಿಕಾರಿ
ಯಾದವನು ವಿದ್ವಜ್ಜನರಿಗೆ ಆಶ್ರಯದಾತನಾಗಿರಲಿಲ್ಲ ದಾಸರ ಮಾಸಾಶನವು
ನಿಂತಿತು. ಊಟಕ್ಕೆ ಅಭಾವವಾಯಿತು. ಆಗ ದಾಸರು ಶ್ರೀ ಮಹಾಲಕ್ಷ್ಮಿಯ
ಉಪಾಸನೆ ಮಾಡಿ ಕೊಲ್ಲಾಪುರಕ್ಕೆ ಹೋಗಿ ದೇವಿಯದರ್ಶನ ಮಾಡಿ ಹಾಡಿ ಪ್ರಾರ್ಥಿ
ದಾಸರ ಗಾನವನ್ನು ಕೇಳಿದ ಶಿವಾಜಿ ಮಹಾರಾಜನು ಅವರನ್ನು ಆಹ್ವಾನಿಸಿ
ಗಾಯನ ಕೀರ್ತನ ಮಾಡಿಸಿ ಸನ್ಮಾನಿಸಿದನು. ದೇವಿಯ ಕರುಣೆಯಿಂದ ದಾರಿದ್ರವು
ದೂರವಾಯಿತು. ಅನಂತರ ದಾಸರು ಉಡುಪಿಗೆ ಪ್ರಯಾಣ ಮಾಡಿ ಅಲ್ಲಿ ಬೇಲೂರು
ಕೇಶವದಾಸರ ತಂದೆ ವೆಂಕಟೇಶದಾಸರ ಮನೆಯಲ್ಲಿ ಬಿಡಾರ ಮಾಡಿ ಭಾಗವತದ ದಶ
ಮಸ್ಕಂದವನ್ನು ಕನ್ನಡ ಕೀರ್ತನ ರೂಪಕ್ಕಿಳಿಸಿ ಶ್ರೀಕೃಷ್ಣನಿಗೆ ಸಮರ್ಪಿಸಿದರು. ತರು
ವಾಯ ಮೈಸೂರಿಗೆ ಬಂದರು ಎರಡು ವರ್ಷಗಳ ಕಾಲ ಬಿಡಾರ ಮಾಡಿದ್ದು
ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಕೀರ್ತನ ಮಾಡಲು ಅವಕಾಶ ದೊರೆ
ಯಲಿಲ್ಲ. ಆಗ ಶ್ರೀ ಕೃಷ್ಣ ದೇವಾಲಯದಲ್ಲಿ ಕೀರ್ತನ ಮಾಡಿದರು. ಇದನ್ನು
ಕೇಳಿಸಿಕೊಂಡ ದೊರೆಯಿಂದ ಆಹ್ವಾನ ಬಂದಿತು.
ನಲವತ್ತು ಕೀರ್ತನೆಗಳನ್ನು ಕೇಳಿದ ಕೃಷ್ಣರಾಜರು ದಾಸರಿಗೆ ಕನಕಾಭಿಷೇಕ ಮಾಡಿ
 
ನಂತರ ಅವರಿಂದ ರಚಿತವಾದ
 
ಗೌರವಿಸಿದರು.
 
20
 
ಸುರಪುರವು ಬ್ರಿಟಿಷರಿಗೆ ಸೇರಿದ ಮೇಲೆ ದಾಸರು ಮಂತ್ರಾಲಯದಲ್ಲಿ ಕೆಲವು
ಕಾಲ ವಾಸಿಸುತ್ತಿದ್ದರು ಅಲ್ಲಿ ಒಂದು ದಿನ ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನದ
ಸನ್ನಿಧಿಯಲ್ಲಿ ರುದ್ರ ವೀಣೆಯನ್ನು ನುಡಿಸುತ್ತಿದ್ದಾಗ ಅಂತರ್ಮುಖಿಗಳಾಗಿ ಗುರು
ರಾಜರ ಅನುಗ್ರಹವನ್ನು ಪಡೆದರು ಅಲ್ಲಿಂದ ಮುಂದೆ ಪಂಚಮುಖನ ಸನ್ನಿಧಿಗೆ
ಹೋಗಿ ಏಕಾಂತದಲ್ಲಿದ್ದು ತಮ್ಮ ಕುಲದೈವವಾದ ನೃಸಿಂಹ ಮಂತ್ರೋಪಾಸನೆ
ಮಾಡಿದರು. ಆರಾಧನಾ ಮಹೋತ್ಸವಕ್ಕೆಂದು ಮಂತ್ರಾಲಯಕ್ಕೆ ಬರುವಾಗ ತುಂಬಿ
ಹರಿಯುತ್ತಿದ್ದ ತುಂಗಭದ್ರೆಯನ್ನು ದೋಣಿಯಲ್ಲಿ ದಾಟುವಾಗ ಅಪಾಯ ಒದಗಿತು.
ಆಗ ಗುರು ರಾಘವೇಂದ್ರರು ಕಾಣಿಸಿಕೊಂಡು ಪಾರುಮಾಡಿ ಮಂಚಾಲೆಗೆ ಕರೆದು
ದಾಸರನ್ನು ಕ್ಷೇಮದಿಂದ ಸೇರಿಸಿದ ನಂತರ ಆಶೀರ್ವದಿಸಿ ಗುರು
ರಾಜರು ಅದೃಶ್ಯರಾದರು ಪುನಃ ಬೆಳಗ್ಗೆ ಪ್ರದಕ್ಷಿಣೆ ಮಾಡುತ್ತಿದ್ದಾಗ ಗುರು
ರಾಘವೇಂದ್ರರು ದರ್ಶನಕೊಟ್ಟು ಉದಯರಾಗದ ಹಾಡನ್ನು ಹಾಡಿಸಿದರು. ಆನಂದ
ದಾಸರು ಅಪರೋಕ್ಷ ಜ್ಞಾನಿಗಳಾದರು. ಯಾವಾಗಲೂ ಕೀರ್ತನ ಮಾಡುತ್ತ
ಹತ್ತು ವರ್ಷಗಳ ಕಾಲವಿದ್ದರು. ಅವರ ಅಂತಿಮ ಕಾಲವೂ ಆನಂದಮಯವಾಗಿತ್ತು.
 
ಕೊಂಡು ಹೋದರು