2023-06-28 08:19:15 by jayusudindra
This page has been fully proofread once and needs a second look.
ತೋರಿಸುವ ವಿದ್ವತ್ತೂರ್ಣವಾದ ಗ್ರಂಥ. ಭಾರತ ಮತ್ತು ಇಂಡೋನೇಷ್ಯದ ಕಲೆಯ
ಇತಿಹಾಸ ಎಂಬುದು ಇವರ ಮತ್ತೊಂದು ಉದ್ಧಂಧ. ಇವರು ಭಾರತ ಹಾಗೂ
ಏಷ್ಯದ ಕಲೆಯ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮಹಾ
ವಿದ್ವಾಂಸರು.
ಆನಂದಗಜಪತಿ
ಇವರು ೧೯ನೆಯ ಶತಮಾನದಲ್ಲಿದ್ದ ವಿಜಯನಗರಂ
ಸಂಸ್ಥಾನದ ದೊರೆ. ವಿದ್ವಾಂಸರ ಮತ್ತು ಕಲೆಯ ಪೋಷಕರಾಗಿದ್ದು ಹಲವು ಕೃತಿ
ಗಳನ್ನು ರಚಿಸಿದ್ದಾರೆ.
ಸಂಗೀತದ ಗ್ರಂಥಗಳನ್ನು ಪ್ರಕಟಿಸಲು ಸಹಾಯ ಮಾಡಿದರು.
ಆನಂದಭೈರವಿ
ಈ ರಾಗವು ೨೦ನೆಯ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ
ಆ
ಅ : ಸ ನಿ ದ ಪ ಮ ಗ ರಿ ಸ
ತ್ರಿಸ್ವರ ಭಾಷಾಂಗರಾಗ ಆರೋಹಣದಲ್ಲಿ ವಕ್ರಸಂಪೂರ್ಣ. ಅವರೋಹಣದಲ್ಲಿ
ಕ್ರಮ ಸಂಪೂರ್ಣ. ಮೇಳದಲ್ಲಿ ಶುದ್ಧ ಧೈವತವಿದ್ದರೂ ಚತುಶ್ರುತಿ ದೈವತ
ಪ್ರಯೋಗವು ಸುಮಾರು ೨೦೦ ವರ್ಷಗಳಿಂದೀಚೆಗೆ ರೂಢಿಗೆ ಬಂದಿದೆ ಪ ದ ಪ ಮ
ಮ ದ ಪ ಮ ಎಂಬ ಪ್ರಯೋಗಗಳಲ್ಲಿ ಶುದ್ಧ ಧೈವತವು ಕಂಡುಬರುತ್ತದೆ.
ಸಾಧಾರಣ ಮತ್ತು ಅಂತರಗಾಂಧಾರಗಳು, ಶುದ್ಧ ಮತ್ತು ಚತುಶ್ರುತಿ ದೈವತಗಳು,
ಕೈಶಿಕಿ ಮತ್ತು ಕಾಕಲಿ ನಿಷಾದಗಳು ಸಮಯೋಚಿತವಾಗಿ ಬರುತ್ತವೆ. ಸಾ ಗ,
ಮಾ, ನೀ ಗಳು ಜೀವ ಸ್ವರಗಳು, ಜಾರುಗಮಕ, ತಿರುಪ, ರವೆ, ವಳಿ ಮತ್ತು
ಖಂಡಿಸುವ ಒತ್ತು ಗಮಕಗಳು ಬರುತ್ತವೆ. ಸಾರ್ವಕಾಲಿಕರಾಗ,
ಭಕ್ತಿ, ವೀರ
ಮತ್ತು ಶೃಂಗಾರಾದಿರಸಗಳಿಗೆ ಒಪ್ಪುವ ಸುಂದರರಾಗ, ಈ ರಾಗದಲ್ಲಿ ಶ್ಯಾಮಾಶಾಸ್ತ್ರಿ
ಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಗಳಲ್ಲಿ ಮತ್ತು ಶ್ಲೋಕ ಮತ್ತು ಪದ್ಯಗಳನ್ನು ಹಾಡಲು ಹೆಚ್ಚಾಗಿ ಈ ರಾಗದಲ್ಲಿ
ಹಾಡುತ್ತಾರೆ. ಈ ರಾಗದ ಕೆಲವು ಪ್ರಸಿದ್ಧ ರಚನೆಗಳು-
ಸ್ವರಜತಿ
ಕೃತಿ
ಗೇಯನಾಟ
ಅ
-
ನೀಕೇ ತಲಿಯಕ ಪೋತೇ
ಕಮಲಾಂಬಾ
ಮಾನಸ ಗುರುಗುಹ
ತ್ಯಾಗರಾಜಯೋಗ
ನೀ ಮದಿಚಲ್ಲಗ
-
ತ್ಯಾಗರಾಜ
ದೀಕ್ಷಿತರು
ರೂಪಕ ದೀಕ್ಷಿತರು
ಆದಿ
-
-