2023-06-28 08:17:46 by jayusudindra
This page has been fully proofread once and needs a second look.
ಪೋಲೆಂಡ್, ಸ್ವಿಟ್ಟರ್‌ಲೆಂಡ್, ಜೆಕೊಸ್ಟೋವಾಕಿಯಾ ಮುಂತಾದ ದೇಶಗಳಿಗೆ ಭೇಟಿ
ಇತ್ತರು. ಪ್ರಸಿದ್ಧ ಗುರು ಕುಂಜು ಕುರುಪ್‌ರವರಲ್ಲಿ ಕಥಕಳಿ ನೃತ್ಯದ ಶಿಕ್ಷಣ
ಪಡೆದರು ಸಂಗೀತ ಮತ್ತು ನೃತ್ಯ ಕ್ಷೇತ್ರಗಳೆರಡರಲ್ಲೂ ತಮ್ಮ ಹಿರಿಯ ಸ್ಥಾನವನ್ನು
ಉಳಿಸಿಕೊಂಡು ಬಂದರು. ದೇವುಡು ನರಸಿಂಹಶಾಸ್ತ್ರಿಗಳ ಇಚ್ಛೆಯಂತೆ
ಭಕ್ತಮಾರ್ಕಂಡೇಯ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದುದಲ್ಲದೆ
ಸುಬ್ಬಯ್ಯನಾಯ್ಡುರವರ ಸಂಗೀತ ಸಾಮ್ರಾಜ್ಯ ನಾಟಕ ಮಂಡಲಿಯ ಹಲವು
ನಾಟಕಗಳಲ್ಲಿ ಪಾತ್ರ ವಹಿಸಿದರು. ೧೯೪೦ರಲ್ಲಿ ಲಲಿತಕಲಾ ಭಾರತಿ ಎಂಬ
ಶಿಕ್ಷಣ ಕೊಡಲಾಗುತ್ತಿದೆ. ನೃತ್ಯ ಪ್ರದರ್ಶನಗಳ ತಂಡಗಳೊಡನೆ ವಿದೇಶಗಳಿಗೆ
ಹೋದಾಗ ವೀಣೆ ಕಚೇರಿಗಳನ್ನು ಮಾಡಿದ್ದಾರೆ. ಪದಗಳನ್ನು ಹಾಡುವುದರಲ್ಲಿ
ಟೈಗರ್ ವರದಾಚಾರರಿಂದ ತಾವು ಕಲಿತುದನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಇತ್ತೀಚೆಗೆ
ಶ್ರೀ ಶಂಕರನಾರಾಯಣ ಶಾಸ್ತ್ರಿಗಳು ಸ್ಥಾಪಿಸಿರುವ ಶ್ರೀ ಲಲಿತಾ
ಪರಮೇಶ್ವರಿ ಸನ್ನಿಧಾನ ಎಂಬ ಜಪ ಮತ್ತು ಧ್ಯಾನ ಕೇಂದ್ರವನ್ನು ಸೇರಿ ಶಾಸ್ತ್ರಿಗಳ
ಶಿಷ್ಯರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿಯ
ನೆನಪಿಗಾಗಿ ತಮ್ಮ ಆರಾಧ್ಯ ದೇವಿಯಾದ ಲಲಿತಾ ಪರಮೇಶ್ವರಿಯನ್ನು ಕುರಿತು
೩೦ ಕೃತಿಗಳನ್ನೂ, ಹಲವು ವರ್ಣಗಳು, ಜಾವಳಿ ಮತ್ತು ತಿಲ್ಲಾನಗಳನ್ನೂ
ರಚಿಸಿದ್ದಾರೆ. ಪ್ರಭಾತ್ ಕಲಾವಿದರು ಎಂಬ ಕಲಾವೃಂದದ ಸಂಗೀತ ಮತ್ತು ನಾಟ್ಯ
ನಿರ್ದೇಶಕರೂ ಆಗಿ ಸೇವೆಸಲ್ಲಿಸಿದ್ದಾರೆ. ಇವರಿಗೆ ಗಾನ ವಿದ್ಯಾಧರ ಎಂಬ ಬಿರುದು
ಇದೆ. ಸೂರ್ಯನಾರಾಯಣರು ಗೀತ ಮತ್ತು ನೃತ್ಯದ ಮಧುರ ಸಂಗಮದ
ಪ್ರತೀಕವಾಗಿದ್ದಾರೆ.
೬೮
ಆನಂದ
ವಿವಾಹದ ಸಂದರ್ಭಗಳಲ್ಲಿ ಮಂಗಳಸೂತ್ರ ಧಾರಣೆಯಾದ ನಂತರ
ನಾಗಸ್ವರವಾದಕರು ನುಡಿಸುವ ಮಂಗಳಕರವಾದ ಹಾಡು. ಇದು ಭೈರವಿರಾಗದಲ್ಲಿದ್ದು
• .ಆನಂದಂ ಆನಂದ ಮಾಯೆನೆ " ಎಂದು ಆರಂಭವಾಗುತ್ತದೆ.
ಆನಂದಕ್ಕಲಿಪ್ಪ್
ತಮಿಳು ಜಾನಪದದಲ್ಲಿ ನಾದ ನಾಮಕ್ರಿಯ ರಾಗಕ್ಕೆ
ಈ ಹೆಸರಿದೆ ಇದು ಗೇಯನಾಟಕಗಳಲ್ಲಿ ಬರುತ್ತದೆ
-
ಇವರ ತಂದೆ ಸಿಂಹಳ ದೇಶದ ಹಿಂದು
ಆನಂದಕುಮಾರಸ್ವಾಮಿ (೧೮೭೭-೧೯೪೭)
ಸಂಗೀತ, ನಾಟ್ಯ ಮತ್ತು
ಕಲೆಯನ್ನು ಕುರಿತು ಹಲವು ಉದ್ಧಂಥಗಳು ಮತ್ತು ಪ್ರಬಂಧಗಳನ್ನು ಬರೆದಿರುವ
ಪ್ರಸಿದ್ಧ ವಿದ್ವಾಂಸ ಮತ್ತು ಕಲಾ ವಿಮರ್ಶಕ,
ಮತ್ತು ತಾಯಿ ಸ್ಕಾಟ್ಲಂಡಿನವಳು. ಭಾರತದ ಕಲೆ, ಪುರಾಣ, ದರ್ಶನ, ಸಾಹಿತ್ಯ,
ಶಿಲ್ಪ ಮತ್ತು ಧರ್ಮ ಇವುಗಳನ್ನು ಕುರಿತು ಕೂಲಂಕಷವಾಗಿ ಆಳವಾಗಿ ಅಧ್ಯಯನ
ಮಾಡಿ ಗ್ರಂಥಗಳನ್ನು ಬರೆದರು. ಡ್ಯಾನ್ಸ್ ಆಫ್ ಶಿವ ಎಂಬುದು ಇವರ ಒಂದು
.