This page has not been fully proofread.

ಅವರ್ಣಮಾಲೆಯಲ್ಲಿ ಮೊದಲನೆಯ ಅಕ್ಷರ ಮತ್ತು ಓಂಕಾರದ ಮೊದಲ
ನೆಯ ಅಕ್ಷರ, ಅನುದಾತ್ತ, ಉದಾತ್ತ ಮತ್ತು ಸ್ವರಿತಗಳೆಂಬ ಮೂರು ಭೇದ
ಗಳುಳ್ಳ ಪ್ರಸ್ತಾಕ್ಷರ. ವಿಷ್ಣು, ಶ್ರೀಕಂಠ, ಸುರೇಶ, ಮಹಾಬ್ರಾಹ್ಮ, ವಾಸುದೇವ,
ಧನೇಶ, ಕೇಶವ, ಬ್ರಹ್ಮಾಣೀ, ವಿಶ್ವೇಶ, ವೈಶ್ವಾನರ, ವಾಯು, ಬ್ರಹ್ಮ ಇತ್ಯಾದಿ
ಹಲವು ಅರ್ಥಗಳಿವೆ.
 
(
 
ಅಕಳಂಕ-೧೮ನೇ ಶತಮಾನಕ್ಕೆ ಸೇರಿದ ಸಂಗ್ರಹ
ಹ ಚೂಡಾಮಣಿ
ಎಂಬ ಸಂಗೀತಶಾಸ್ತ್ರ ಗ್ರಂಥವನ್ನು ಬರೆದ ಗೋವಿಂದಾಚಾರ್ಯನ ಬಿರುದು.
ಗ್ರಂಧವು ಸಂಸ್ಕೃತ ಭಾಷೆಯಲ್ಲಿದೆ.
 
ಅಕಾರಸಾಧನ -ಆ, ಈ, ಊ, ಏ, ಓ, ಅಂ ಮುಂತಾದ ಸ್ವರಗಳ
ಸಾಧಕಮಾಡಿ ಶಾರೀರವನ್ನು ಕಸಿ ಮಾಡುವುದಕ್ಕೆ ಆಕಾರಸಾಧನವೆಂದು ಹೆಸರು.
ಇದರಿಂದ ಕಂಠ ಸಂಪತ್ತಿಗೆ ಸೊಬಗು, ಮೆರುಗು ಮತ್ತು ಸೌಂದರ್ಯ ಉಂಟಾಗುತ್ತದೆ.
ಗಮಕಗಳನ್ನು ಖಚಿತವಾಗಿ, ಗತಿಬದ್ಧವಾಗಿ, ಕಷ್ಟವಿಲ್ಲದೆ ಹಾಡಲು ಇದರಿಂದ ಸಾಧ್ಯ.
ಶೀಘ್ರಗತಿಯಲ್ಲಿ ಸ್ವರಗಳನ್ನು ಹಾಡಲು ಅನುಕೂಲವಾಗುತ್ತದೆ ಮತ್ತು ಹಾಡುವುದರಲ್ಲಿ
ಕಂರದ ಸಂಪೂರ್ಣ ಸ್ವಾಮಿತ್ವ ದೊರಕುತ್ತದೆ.
 
ಹಾಡು
 
ಅಕಾರಸಾಧನೆಯನ್ನು ಮಾಯಾಮಾಳವಗೌಳ ರಾಗದಲ್ಲಿ ಮೊದಲು ಹಾಡಿ
ಕೊಳ್ಳಬೇಕು. ಸರಳವರಿಸೆಗಳನ್ನು ೪ ಕಾಲಗಳಲ್ಲಿ, ಸ್ವರಗಳನ್ನು ೧, ೨, ೩ ೪ ಕಾಲ
ಗಳಲ್ಲಿ ಹಾಡಿ ನಂತರ ಅ, ಇ, ಉ, ಎ, ಓ, ಅಂ ಕಾರಗಳಲ್ಲಿ ಹಾಡಬೇಕು.
ವಾಗ ಸ್ವರಸ್ಥಾನಗಳ ಮೇಲೂ ಮತ್ತು ಶ್ರುತಿಯ ಮೇಲೂ ಬಹಳ ಗಮನವಿಟ್ಟಿರಬೇಕು.
ಜಂಟೀಸರಳೆಗಳನ್ನು ೩ ಕಾಲ ಸ್ವರವನ್ನು ಹಾಡಿ ನಂತರ ಅ, ಇ, ಉ, ಎ, ಬ, ಅಂ
ಕಾರಗಳಲ್ಲಿ ಸಾಧನೆ ಮಾಡತಕ್ಕದ್ದು. ತರುವಾಯ ಅಲಂಕಾರಗಳನ್ನು ಇದೇ ರೀತಿ
ಹಾಡಿಕೊಳ್ಳಬೇಕು. ಹೀಗೆ ಅಕಾರಸಾಧನೆ ಮಾಡಿದ ನಂತರ ಮುಂದೆ ಬರೆದಿರುವ
ಕೆಲವು ಮುಖ್ಯ ಸಾಧಕದ ಸ್ವರಗಳನ್ನು ಮೊದಲು ಎರಡು ಕಾಲಗಳಲ್ಲಿ ಸ್ವರವನ್ನು
ಅಭ್ಯಾಸ ಮಾಡಿ ನಂತರ ಆಕಾರಗಳಲ್ಲಿ ಹಾಡಿಕೊಳ್ಳಬೇಕು. ಬೆಳಗಿನ ಜಾವದ ವೇಳೆ
ಯಲ್ಲಿ ಸಾಧಕ ಮಾಡಿಕೊಂಡರೆ ಬಹಳ ಉತ್ತಮ. ಈ ಸಾಧನೆಯನ್ನು ಮಾಡಿದವರ
ಹಾಡಿಕೆಯಲ್ಲಿ ಘನತೆ, ಶ್ರುತಿಬದ್ಧತೆ, ತಾಳದ ಮೇಲೆ ಹತೋಟಿ ಇವೆಲ್ಲವೂ ಚೆನ್ನಾಗಿ
ಕಂಡು ಬರುತ್ತವೆ. ಬಾಲಪಾಠಗಳ ನಂತರ ಕೃತಿಗಳಿಗೆ ಸ್ವರವಿನ್ಯಾಸ, ಮಧ್ಯಮಕಾಲ,
ರಾಗಾಲಾಪನೆ ಇತ್ಯಾದಿಗಳನ್ನು ಅಭ್ಯಾಸ ಮಾಡುವಾಗ ಆಯಾ ರಾಗದ ಸ್ವರಸ್ಥಾನ
ಗಳನ್ನು ತಿಳಿದು ಸಾಧಕ ಮಾಡಿಕೊಂಡರೆ ಎಲ್ಲಾ ಬಗೆಯ ನುಡಿಕಾರಗಳೂ ಸ್ಪುಟವಾಗಿ
ಬರುತ್ತವೆ. ಸಾಧಕ ಮಾಡುವಾಗ ಅನುಸರಿಸಬೇಕಾದ ಕೆಲವು ನಿಯಮಗಳಿವೆ.