This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅತಿಕ್ರಾಂತ, ಅಪಕ್ರಾಂತ, ಪಾರ್ಶಕ್ರಾಂತ, ಊರ್ಧ ಜಾನು, ಸೂಚಿ, ನೂಪುರ
ಪಾದಿತ, ಡೋಲಾಪಾದ, ಆಕ್ಷಿಪ್ತ ಅವಿದ್ಧ, ಊರ್ಧ್ವ, ವಿದ್ಯುಚ್ಛಾಂತ, ಅಲಾತ,
ಭುಜಂಗ ತ್ರಾಸಿಕ, ಹರಿಣಪ್ಪುತ ದಂಡಪಾದ ಮತ್ತು ಭ್ರಮರಿ,
 
ಆಗಮಪ್ರಿಯ ಈ ರಾಗವು ೪೫ನೆಯ ಮೇಳಕರ್ತ ಶುಭ ಪಂತುವರಾಳಿಯ
 
ಒಂದು ಜನ್ಯರಾಗ.
 
ಸ ರಿ ಗ ಮ ಮ ಮ ದ ನಿ ಸ
 
ಸ ನಿ ಪ ದ ನಿ ಪ ಮ ಗ ರಿ ಗ ಸ
 
6
 
ಆಘಾತ-ನೃತ್ಯದಲ್ಲಿ ನುಡಿಸಲಾಗುವ ಒಂದು ಲಾಸ್ಯ
ಆಘಾತಿ-ಋಗ್ವದ ಮತ್ತು ಅಥರ್ವವೇದಗಳಲ್ಲಿ ಉಕ್ತವಾಗಿರುವ ಒಂದು
 
ತಾಳವಾದ್ಯ.
 
ಆರ್ಚಿಕ-ಒಂದು ಸ್ವರದಲ್ಲಿ ಹಾಡುವುದು. ಅರ್ಚಿನೋಗಾಯಂತಿ ಎಂದರೆ
ಋಗೈದದ ಒಂದು ಭಾಗವನ್ನು ಒಂದು ಸ್ವರದಲ್ಲಿ ಹಾಡುವ ವಿಧಾನ.
 
೫೯
 
ಆಚಾರ್ಯಮುದ್ರೆ-ಇದು ಸಂಗೀತ ರಚನೆಗಳಲ್ಲಿ ಕಂಡು ಬರುವ
ದ್ವಾದಶ ಮುದ್ರೆಗಳಲ್ಲಿ ಒಂದು ಬಗೆಯ ಮುದ್ರೆ, ವಾಗ್ಗೇಯಕಾರನು ತನ್ನ ಕೃತಿಯ
ಸಾಹಿತ್ಯದಲ್ಲಿ ತನ್ನ ಆಚಾರ್ಯನ ಹೆಸರನ್ನು ಅಂಕಿತವಾಗಿಟ್ಟಿರುತ್ತಾನೆ. ನಾಟರಾಗದ
ಗಾನವಿದ್ಯಾಧುರಂಧರ ' ಎಂಬ ಗೀತವು ಇದಕ್ಕೆ ನಿದರ್ಶನ.
 
ಆದವಾನಿಯರಮಸುಂದರದಾಸರು-ಇವರು
ಜಗನ್ನಾಥದಾಸರ
ಸಮ್ಮುಖದಲ್ಲಿ ಕೀರ್ತನಮಾಡಿ ಅವರಿಂದ ಸ್ವರೂಪ ಜ್ಞಾನ ಪಡೆದ ಮಹನೀಯರು,
ರಾಮಸುಂದರ ವಿಠಲ ಎಂಬ ಮುದ್ರಿಕೆಯಿಂದ ಭಾಗವತವನ್ನು ಕೀರ್ತನ ರೂಪದಲ್ಲಿ
ರಚಿಸಿ ಸುಂದರವಾದ ಕವಿತೆಗಳನ್ನು ಮಾಡಿದ್ದಾರೆ. ವೋಗಿ ಬರುವೆ
ನಾಗವೇಣಿಯರೆ ಎಂಬ ಇವರ ದೇವರ ನಾಮವು ಕರ್ಣಾಟಕದಲ್ಲೆಲ್ಲಾ ಪ್ರಸಿದ್ಧವಾಗಿದೆ.
 
ಗೋಪ
 
ಸುಳಾದಿತಾಳಗಳಲ್ಲಿ ಚತುರಶ್ರಜಾತಿ ತ್ರಿಪುಟತಾಳದ
 
ಆದಿ-(೧) ೩೫
 
ಇದರ ಒಂದಾವರ್ತಕ್ಕೆ ಎಂಟು ಅಕ್ಷರಕಾಲ,
(೨) ಒಂದು ಲಘು ಇರುವ ತಾಳ,
 
ಹೆಸರು.
 
ಇದು ೧೦೮ ತಾಳಗಳ ಗುಂಪಿಗೆ ಸೇರಿದೆ.
 
ಇದರ ಕಾಲಾವಧಿಯು ನಾಲ್ಕು ಅಕ್ಷರಕಾಲ ಅಥವಾ ಒಂದು ಮಾತ್ರಾ ಕಾಲ.
 
(೩) ಮೇಳಾಧಿಕಾರ ಲಕ್ಷಣವೆಂಬ ಗ್ರಂಥದಲ್ಲಿ ಉಕ್ತವಾಗಿರುವ ೪೬೨೪
ಸಂಪೂರ್ಣ ಮೇಳಪದ್ಧತಿಯ ಮೊದಲನೆಯ ಮೇಳದ ಹೆಸರು. ಈ ಮೇಳವು ಷಡ್ಡ,
ಪಂಚಮ, ಪ್ರತಿಶುದ್ಧ ರಿಷಭ, ಪ್ರತಿಶುದ್ಧ ಗಾಂಧಾರ, ಶುದ್ಧ ಮಧ್ಯಮ, ಪ್ರತಿಶುದ್ಧ ದೈವತ,
ಮತ್ತು ಪ್ರತಿಶುದ್ಧ ನಿಷಾದವನ್ನು ಹೊಂದಿದೆ. ಷಷ್ಟವು ಇದರ ಗ್ರಹ, ಅಂಶ ಮತ್ತು
ನ್ಯಾಸಸ್ವರ.
 
ಅಪ್ಪಯ್ಯ-ಪಚ್ಚಿಮಿರಿಯಂ ಆದಿ ಅಪ್ಪಯ್ಯನವರು ಮಾಧ್ಯ
ಬ್ರಾಹ್ಮಣರು, ತಂಜಾವೂರಿನ ಪ್ರತಾಪಸಿಂಹ ಮಹಾರಾಜ (೧೭೪೧-೧೭೬೪) ಮತ್ತು