This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಉದೀಕ್ಷಣ, ಮಟ್ಟಕ, ಧೇಂಕಿತ, ವರ್ಣಮಟ್ಟಕ, ಅಭಿನಂದನ, ಅಂತರಕ್ರೀಡ, ಮಲ್ಲ

ತಾಳ, ದೀವಕ, ಅನಂಗ, ವಿಷಮ, ನಂದಿ, ಮುಕುಂದ, ಕಂಡುಕ, ಏಕತಾಳ, ಅಟ

ತಾಳ, ಪೂರ್ಣಕಂಕಾಳ, ಖಂಡಕಂಕಾಲ, ಸಮಕಂಕಾಳ, ವಿಷಮಕಂಕಾಳ, ಚತಸ್ತಾಳ,

ಡೋಂಬುಲೀ, ಅಭಂಗ, ಜಗದ್ಗುಂಪ, ಚತುರ್ಮುಖ, - ರಂಪ, ಪ್ರತಿಮಠ,

ಗಾರುಗಿ, ವಸಂತ, ಲಲಿತ, ರತಿತಾಳ, ಕರಣಯತಿ, ಯತಿ, ಷಟಾಳ, ವರ್ಧನ,

ವರ್ಣಯುತಿ, ರಾಜನಾರಾಯಣ, ಮದನ, ಕಾರಿಕ, ವಾರ್ವತಿಲೋಚನ, ಶ್ರೀನಂದನ,

ಲೀಲ, ವಿಲೋಕಿತ, ಲಲಿತಪ್ರಿಯ, ಝುಲ್ಲಕ, ಜನಕ, ಲಕ್ಷ್ಮೀಶ, ರಾಗವರ್ಧನ ಮತ್ತು

ಉತ್ಸವ.
 

ಜಿಲ
 

 
ಅಷ್ಟಿ-
ಈ ರಾಗವು ೨೪ನೆಯ ಮೇಳಕರ್ತ ವರುಣಪ್ರಿಯದ ಒಂದು
 

ಜನ್ಯರಾಗ,
 

ಆ :
 
ಸ ಗ ಮ ದ ನಿ ಸ

ಅ :
ಸ ನಿ ದ ಮ ಗ ಸ
 

 
ಅಷ್ಟಾದಶವಾದ-ದ್ಯ
ದಕ್ಷಿಣ ಭಾರತದ ದೇವಾಲಯಗಳಲ್ಲಿ ಉತ್ಸವ ಕಾಲದಲ್ಲಿ

ನುಡಿಸುವ ೧೮ ಬಗೆಯ ಸಂಗೀತವಾದ್ಯಗಳು.
 

 
ಅಷ್ಟಪದಿ-
ಜಯದೇವ ಕವಿಯ ಗೀತಗೋವಿಂದವೆಂಬ ಕಾವ್ಯವನ್ನು ಅಷ್ಟ

ಪದಿ ಎನ್ನುವುದು ರೂಢಿ. ಇದರಲ್ಲಿ ೨೪ ' ಗೀತಗಳಿವೆ. ಪ್ರತಿಗೀತದಲ್ಲಿ ಎಂಟು

ಪಾದಗಳು ಅಥವಾ ಚರಣಗಳಿವೆ. ಆದ್ದರಿಂದ ಇವುಗಳಿಗೆ ಅಷ್ಟಪದಿಗಳೆಂಬ ಹೆಸರು

ರೂಢಿಗೆ ಬಂದಿದೆ.

ಇವು ದ್ವಿಧಾತು ಪ್ರಬಂಧಗಳು. ಇದರಲ್ಲಿ ಉತ್ಸಾಹ ಮತ್ತು

ಧ್ರುವ ಎಂಬ ಎರಡು ಭಾಗಗಳಿವೆ. ಇವೇ ಮುಂದೆ ಪಲ್ಲವಿ ಮತ್ತು ಚರಣ ಎಂದಾ

ದುವು. ಈ ಕಾವ್ಯದಲ್ಲಿ ದ್ವಿತೀಯಾಕ್ಷರಪ್ರಾಸವಿಲ್ಲ. ಅಂತ್ಯ ಪ್ರಾಸಗಳಿವೆ.

 

ದ್ವಿತೀಯ ಸ್ವರವರ್ಣ, ಪಿತಾಮಹ, ವಿನಾಯಕ, ವಿಜಯಾನಂತ,

ಕ್ಷೀರೋದಧಿ, ನಾರಾಯಣ, ರುದ್ರ ಎಂಬ ಅರ್ಧಗಳಿವೆ
 

 
ಆಕಾಶಗ-
ಭರತನಾಟ್ಯದಲ್ಲಿ ಮಂಡಲಗಳು ಇಪ್ಪತ್ತು ಬಗೆಗಳಿವೆ. ಇವು

ಗಳಲ್ಲಿ ಆಕಾಶಗ ಮತ್ತು ಭೂಮಿಗ ಎಂದು ಎರಡು ವಿಧ. ಆಕಾಶಗಗಳಲ್ಲಿ ಅತಿಕ್ರಾಂತ,

ವಿಚಿತ್ರ, ಲಲಿತ ಸಂಚರ, ಸೂಚಿವದ್ಧ, ದಂಡಪಾದ, ವಿಕೃತ, ಅಲಾತಕ, ವಾಮವಿದ್ದ,

ಲಲಿತ ಮತ್ತು ಕ್ರಾಂತ ಎಂದು ಹತ್ತು ವಿಧ. ಇವೆಲ್ಲವೂ ಪಾದಕ್ರಿಯಾ ಸಂಚಲನೆಗಳು,

 
ಆಕಾಶವೀಣಾ-
ಪಾಲ್ಕುರಿಕೆ ಸೋಮನಾಥ ವಿರಚಿತ • ಪಂಡಿತಾರಾಧ್ಯ

ಚರಿತ್ರವು ' ಎಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಬಗೆಯ ವೀಣೆ,
 

 
ಆಕು-
ನಾಗಸ್ವರದ ಪೀಪಿಯನ್ನಾಗಿ ಬಳಸಲಾಗುವ ಒಂದು ಬಗೆಯ ಎಲೆ.

ಇದನ್ನು ಪರಿಷ್ಕರಿಸಿ ನಂತರ ಉಪಯೋಗಿಸುತ್ತಾರೆ
 

 
ಆಕಾಶಚಾರಿಗಳು-
ಭರತ ನಾಟ್ಯದಲ್ಲಿ ಪ್ರಯೋಗಿಸುವ ಪಾದಕ್ರಿಯಾ

ಸಂಚಲನೆಯಲ್ಲಿ ಒಂದು ಬಗೆ. ಆಕಾಶಚಾರಿಗಳು ಹದಿಮೂರು ವಿಧ
 
ಅವು