2023-06-28 07:17:57 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ತಮಿಳುನಾಡಿನ ಚಿಂಗಟೆ ಜಿಲ್ಲೆಯ ಕಾಂಚೀಪುರ
ದಲ್ಲಿರುವ ವರದ ರಾಜಸ್ವಾಮಿ ದೇವಾಲಯದ ನೂರು ಕಂಬಗಳ ಮಂಟಪದಲ್ಲಿ ಅಷ್ಟ
ಭುಜಕೃಷ್ಣನು ಕೊಳಲು ನುಡಿಸುತ್ತಿರುವ ಶಿಲ್ಪವಿದೆ. ದಿಂಡಿಗಲ್ ಸಮೀಪದಲ್ಲಿರುವ
ತಾಡಿಕೊಂಬು ಎಂಬಲ್ಲಿರುವ ಸೌಂದರರಾಜವೆರುಮಾಳ್ ದೇವಾಲಯದ ಅಮ್ಮನವರ
ಸನ್ನಿಧಿಯ ಮುಂಭಾಗದ ಮಂಟಪದಲ್ಲಿ ಇಂತಹ ಕೃಷ್ಣನ ಒಂದು ಶಿಲ್ಪವಿದೆ.
ಅಷ್ಟಭುಜನಟರಾಜ
ಆಂಧ್ರದ ಎಲ್ಲೋರಗವಿಗಳಲ್ಲಿ ಅಷ್ಟ ಭುಜ ನಟರಾಜನ
ಮೂರ್ತಿ ಶಿಲ್ಪವಿದೆ.
ಒಂದು ಬಗೆಯ ಕೊಳಲು.
ಅಷ್ಟದಶಾಂಗುಲ
ಇದು * ಸಂಗೀತ ರತ್ನಾಕರ 'ದಲ್ಲಿ ಉಕ್ತವಾಗಿರುವ
ಬಾಯಿಂದ ಊದುವ ರಂಧ್ರಕ್ಕೂ ಬೆರಳಿನಿಂದ
ನುಡಿಸುವ ರಂಧ್ರಕ್ಕೂ ೧೮ ಅಂಗುಲ ದೂರವಿರುತ್ತದೆ.
ಇದರ ಒಂದು ಮತ್ತು
ಏಳನೆಯ ರಂಧ್ರಗಳನ್ನು ಮುಚ್ಚಿ ಊದಿದರೆ ಮಂದ್ರ ಷಡ್ಡವು ಕೇಳಿ ಬರುತ್ತದೆ.
ಅಷ್ಟ ಮಹಿಷಿ ಕಲ್ಯಾಣ
ಸುಮಾರು ೧೫೪೫ರಲ್ಲಿ ಚಿನ್ನಯ್ಯ ಅಧವಾ
ತಿರುವಂಗಡನಾಥ ಎಂಬುವರು ರಚಿಸಿದ ಒಂದು ತೆಲುಗು ಗ್ರಂಥ. ಇದು ದ್ವಿಪದಿ
ಛಂದಸ್ಸಿನಲ್ಲಿರುವ ಐದು ಅಂಕಗಳ ಗ್ರಂಥ ಶ್ರೀಕೃಷ್ಣ ಮತ್ತು ಅವನ ಅಷ್ಟ ಮಹಿಷಿ
ಯರ ವಿವಾಹವು ಈ ಗ್ರಂಥದ ಮುಖ್ಯ ವಿಷಯ.
ಅಷ್ಟೋತ್ತರ ಶತರಾಗತಾಳ
ಇದು ೧೦೮ ತಾಳಗಳು ರಾಗ
ಗಳಲ್ಲಿರುವ ರಾಗಮಾಲಿಕೆ. ಇಂತಹ ಅದ್ವಿತೀಯವಾದ ರಚನಾವಿಶೇಷವನ್ನು ರಾಮ
ಸ್ವಾಮಿ ದೀಕ್ಷಿತರು (೧೭೩೫-೧೮೧೭) ರಚಿಸಿದರು. ಭಾರತೀಯ ಸಂಗೀತದ ರಚನೆ
ಗಳಲ್ಲಿ ಇದು ಅತ್ಯಂತ ದೀರ್ಘವಾದುದು. ಇದನ್ನು ಪೂರ್ತಿಯಾಗಿ ಹಾಡಲು ೩ ಗಂಟೆ
ಈ ರಚನೆಯ ಪ್ರತಿ ವಿಭಾಗದಲ್ಲಿ ಅದರ ತಾಳ ಮತ್ತು ರಾಗ
ಮುದ್ರೆಗಳಿವೆ. ಶ್ರೀಮರ್ತಿ ಮುಂತಾದ ಅಪರೂಪ ರಾಗಗಳು ಈ ತಾಳಮಾಲಿಕೆ
ಯಲ್ಲಿವೆ.
ಗಳ ಕಾಲಬೇಕು.
ಅಷ್ಟೋತ್ತರ ಶತತಾಳಗಳು
೧೦೮ ತಾಳಗಳು ಈ ඵළී ಇವೆ :
ಚಚ್ಚತುಟ, ಚಾಚುಟ, ಷಟ್ಟತಾ ಪುತ್ರಿಕ, ಸಂಪದ್ವೇಷಕ, ಉದ್ಭಟ್ಟ, ಆದಿ,
ದರ್ಪಣ, ಚರ್ಚರಿ, ಸಿಂಹಲೀಲಾ, ಕಂದರ್ಪ, ಸಿಂಹ ವಿಕ್ರಮ, ಶ್ರೀರಂಗ, ರತಿಲೀಲ,
ರಂಗತಾಳ, ಪರಿಕ್ರಮ, ಪ್ರತ್ಯಂಗ, ಗಜಲೀಲ, ತೃಭಿನ್ನ, ವೀರವಿಕ್ರಮ, ಹಂಸಲೀಲ,
ವರ್ಣಭಿನ್ನ, ರಂಗದ್ಯೋತನ, ರಾಜ ಚೂಡಾಮಣಿ, ರಾಜತಾಳ, ಸಿಂಹವಿಕ್ರೀಡಿತ,
ವನಮಾಲಿ, ಚತುರಸ್ರವರ್ಣ, ತ್ರಯಸ್ರವರ್ಣ, ಮಿಶ್ರವರ್ಣ, ರಂಗಪ್ರದೀಶ, ಹಂಸ
ನಾದ, ಸಿಂಹನಾದ, ಮಲ್ಲಿಕಾಮೋದ, ಶರಭಲೀಲ, ರಂಗಾಭರಣ, ತುರಂಗಲೀಲ,
ಸಿಂಹನಂದನ, ಜಯಶ್ರೀ, ವಿಜಯಾನಂದ, ಪ್ರತಿತಾಳ, ದ್ವಿತೀಯ, ಮಕರಂದ, ಕೀರ್ತಿ,
ವಿಜಯ, ಜಯಮಂಗಳ, ರಾಜವಿದ್ಯಾಧರ, ಮಠ, ಜಯ, ಕುಡುಕ್ಕ, ನಿಸ್ಸಾರುಕ,
ಕ್ರೀಡ, ತ್ರಿಭಂಗಿ, ಕೋಕಿಲ ಪ್ರಿಯ, ಶ್ರೀಕೀರ್ತಿ, ಬಿಂದುಮಾಲಿ, ಸಮತಾಳ, ನಂದನ,