This page has not been fully proofread.

ಡಾ. ವಿ. ಎಸ್. ಸಂಪತ್ತು ಮಾರಾಚಾರ್ಯರು 1925ರಲ್ಲಿ
ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ವೆಂಕಟಯ್ಯನ
ಛತ್ರ ಎಂಬ ಗ್ರಾಮದಲ್ಲಿ ಹುಟ್ಟಿದರು. ಮೈಸೂರು ಮಹಾರಾಜ
ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1947ರಲ್ಲಿ ಬಿ.ಎ. ಆನರ್ ಪದವಿ
ಯನ್ನೂ, 1961ರಲ್ಲಿ ಕಾಶಿ ವಿಶ್ವವಿದ್ಯಾನಿಲಯದ ಎಂ.ಎ. ಪದವಿ
ಯನ್ನೂ, 1962ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ, ಎಚ್.
ಪದವಿಯನ್ನೂ ಪಡೆದರು. ಹೊಯ್ಸಳರ ಯುಗದ ಜನಜೀವನ "
(ಕ್ರಿ.ಶ. 1000-1300) ಎಂಬ ಪ್ರೌಢ ಪ್ರಬಂಧವನ್ನು ರಚಿಸಿ
ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು
ಪಡೆದರು. 1947ರಲ್ಲಿ ತಮಿಳುನಾಡಿನ ಪ್ರೌಢಶಾಲೆಯೊಂದರಲ್ಲಿ ತಮ್ಮ
ವೃತ್ತಿ ಜೀವನವನ್ನು ಆರಂಭಿಸಿದ ಆಚಾರ್ಯರು ಅನಂತರ ಕರ್ನಾಟಕ
ಪ್ರೌಢಶಾಲೆಗಳಲ್ಲಿ ಮತ್ತು ಕಿರಿಯ ಕಾಲೇಜುಗಳಲ್ಲಿ ತಮ್ಮ ಸೇವೆ
ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಸಂಗೀತದ ಬಗ್ಗೆ ವಿಶೇಷ ಆಸಕ್ತಿ
ಯನ್ನು ಬೆಳೆಸಿಕೊಂಡಿರುವ ಶ್ರೀ ಆಚಾರರು ಸಂಗೀತಶಾಸ್ತ್ರ ಮತ್ತು
ಸಂಗೀತ ವಿದ್ವಾಂಸರನ್ನು ಕುರಿತು ಕೆಲವು ವಿಮರ್ಶಾತ್ಮಕ ಲೇಖನ
ಗಳನ್ನು ಬರೆದಿದ್ದಾರೆ. ಪ್ರೊ. ವಿ. ರಾಮರತ್ನ೦ ಅವರೊಂದಿಗೆ
ಕರ್ಣಾಟಕ ಸಂಗೀತ ಸುಧಾ " ಕೃತಿಯನ್ನು ರಚಿಸಿದ್ದಾರೆ.
 
H
 
ಪ ಸಾರಾಂಗ : ಮೆಸೂರು ವಿಶವಿದಾ ನೀ