This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನವರಸ ಬಂಗಾಳ-
ಈ ರಾಗವು ೪೭ನೆ ಮೇಳಕರ್ತ ಸುವರ್ಣಾಂಗಿಯ
 

ಒಂದು ಜನ್ಯರಾಗ
 
ಜನ್ಯರಾಗ,
 

ಸ ರಿ ಗ ಮ ದ ಪ ದ ನಿ ಸ

ಸ ನಿ ದ ಮ ಗ ಸ
 

 
ನವರಸಗಳು-
ಸಾಹಿತ್ಯ, ನಾಟಕ, ನಾಟ್ಯ ಮತ್ತು ಸಂಗೀತದಲ್ಲಿ ಒಂಬತ್ತು

ಬಗೆಯ ರಸಗಳನ್ನು ಶಾಸ್ತ್ರಜ್ಞರು ಹೇಳಿದ್ದಾರೆ. ಅವು : ಶೃಂಗಾರ, ಹಾಸ್ಯ, ಕರುಣ,

ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ ಭಕ್ತಿಯನ್ನು ಹತ್ತನೆಯ

ದೆಂದೂ, ಹನ್ನೊಂದನೆಯದೆಂದೂ, ದೇಶಪ್ರೇಮವನ್ನು ವಾತ್ಸಲ್ಯವನ್ನು ಹನ್ನೆರಡ

ನೆಯದೆಂದೂ, ಕೆಲವರು ಪರಿಗಣಿಸುತ್ತಾರೆ ಶೃಂಗಾರ ರಸಕ್ಕೆ ರಸರಾಜವೆಂದು ಹೆಸರು.

 
ನವರಸಂ
ಕೇರಳದ ಕಥಕಳಿ ಸಂಗೀತದಲ್ಲಿ ಬರುವ ಒಂದು ರಾಗ,

 
ನವರೋಜ್ -
ಈ ರಾಗ ೨೯ನೆ ಮೇಳಕರ್ತ ಧೀರ ಶಂಕರಾಭರಣದ ಒಂದು
 
೫೯೭
 

 

ನ ದ ನಿ ಸ ರಿ ಗ ಮ ಪ

ಮ ಗ ರಿ ಸ ನಿ ದ ಪ
 

ರಿಷಭ,
 
ಮಧ್ಯ ಸ್ಥಾಯಿರಾಗ, ಪ್ರಸಿದ್ಧವಾದ ಪಂಚಮಾಂತ್ಯರಾಗ,

ಧೈವತ ಗಾಂಧಾರಗಳು ವಾದಿಸಂವಾದಿಗಳು,

ನ್ಯಾಸ ಮತ್ತು ಜೀವಸ್ವರಗಳು. ದೀನರಸ ಪ್ರಧಾನವಾದರಾಗ,

ಮತ್ತು ಪರ್ಷಿಯಾ ದೇಶಗಳಲ್ಲಿ ಪ್ರಾಚೀನರಾಗವಾಗಿದ್ದು

ಶತಮಾನದಲ್ಲಿ ಬಂದಿತು.

ಇದೆ.
 
ಗಮಕ ವರಿಕ ರಕ್ತಿರಾಗ

ಗಾಂಧಾರ, ಧೈವತಗಳು

ಇದು ಅರೇಬಿಯಾ

ಭಾರತಕ್ಕೆ ೧೬ನೆ

ಕರ್ಣಾಟಕ ಸಂಗೀತದಲ್ಲಿ ಸುಮಾರು ೧೫೦ ವರ್ಷಗಳಿಂದ

ಇದು ಜನಪದ ಸಂಗೀತದಲ್ಲೂ ವಿವಾಹದ ಹಾಡುಗಳಲ್ಲಿ ಕಂಡು ಬರುತ್ತದೆ.

ವೆಂಕಟಮಖಿಯ ಕಲುವುಣ ರಣ ಎಂಬ ಧ್ರುವತಾಳದ ಗೀತೆ, ಮುತ್ತು ಸ್ವಾಮಿ

ದೀಕ್ಷಿತರ ಹಸ್ತಿ ವದನಾಯ ನಮಸ್ತುಭ್ಯಂ (ಮಿಶ್ರ ಏಕ) ಎಂಬ ಕೃತಿ, ಸುಬ್ಬರಾಮ

ದೀಕ್ಷಿತರ ಸಂಚಾರಿಗಳು, ಸ್ವಾತಿತಿರುನಾಳ್ ಮಹಾರಾಜರ ಸೇವೇನನು (ಛಾಪು)

ಎಂಬ ಕೃತಿ, ಕ್ಷೇತ್ರಜ್ಞನ ಏಲವಚ್ಚಿತಿವೇ ಎಂಬ ಪದ ಈ ರಾಗದಲ್ಲಿವೆ.
 

 
ನವರತ್ನಗಳು-
ಅಕ್ಟರ್ ಚಕ್ರವರ್ತಿಯ ಆಸ್ಥಾನದಲ್ಲಿ ಒಂಬತ್ತು ಶ್ರೇಷ್ಠ

ವಿದ್ವಾಂಸರಿದ್ದರು. ತಾನಸೇನನು ಅವರಲ್ಲಿ ಅತ್ಯಂತ

ಅತ್ಯಂತ ಶ್ರೇಷ್ಠನಾಗಿದ್ದನು.

ಅಬುಲ್ ಫಜಲ್ ಮತ್ತು ರಾಜಾ ಬೀರಬಲ್ಲನು ನವಮಣಿಗಳೆಂಬ ವಿದ್ವಾಂಸರ

ಕೂಟಕ್ಕೆ ಸೇರಿದವರಾಗಿದ್ದರು.
 

 
ನವರತ್ನಮಾಲಾ-
ತಿರುವಾಂಕೂರಿನ ಸ್ವಾತಿತಿರುನಾಳ್ ಮಹಾರಾಜರು

ರಚಿಸಿರುವ ಒಂಬತ್ತು ಕೃತಿಗಳ ಮಾಲಿಕೆ, ಶ್ರವಣ, ಕೀರ್ತನ, ಸ್ಮರಣೆ, ಪಾದಸೇವನ,

ಅರ್ಚನ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ ಎಂಬ ನವವಿಧ ಭಕ್ತಿಯನ್ನು

ಕುರಿತು ಈ ಕೃತಿಗಳನ್ನು ರಚಿಸಲಾಗಿದೆ.