This page has not been fully proofread.

೫೯೬
 

 
ನವರಸ ಕನ್ನಡ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
 
ಸ ರಿ ಗ ಮ ನಿ ದ ನಿ ಸ
ಸ ನಿ ಪ ಮ ರಿ ಸ
 
:
 

 
ಸ ಗ ಮ ಪ ಸ
 
ಸ ನಿ ದ ಮ ಗ ರಿ ಸ
 
ಉಪಾಂಗರಾಗ
 
ಸ್ವರಾಂತರ ಷಾಡವ ರಾಗಕ್ಕೆ ಒಂದು ಅಪರೂಪವಾದ ನಿದರ್ಶನ.
ಗ, ಮ, ರಿ ಗಳು ರಾಗ ಛಾಯಾಸ್ವರಗಳು, ಭಕ್ತಿರಸ ಪ್ರಧಾನವಾದ ರಮಣೀಯವಾದ
ರಾಗ, ತ್ಯಾಗರಾಜರು ನಿನ್ನು ವಿನಾನಾಮದೇಂದು' ಮತ್ತು ಪಲುಕ ಕಂಡ ಚರನು
ಎಂಬ ಎರಡು ಕೃತಿಗಳನ್ನು ರಚಿಸಿ ಈ ರಾಗವನ್ನು ಅಮರಗೊಳಿಸಿದ್ದಾರೆ. ಈ ರಾಗವು
ತ್ಯಾಗರಾಜರ ಕೊಡುಗೆ
ಸಾರ್ವಕಾಲಿಕರಾಗ ನೀಪಾದ ಮುಲೇಗ ತಿಯಲ್ಲಿ ಎಂಬ
ಕೃತಿಯನ್ನು ರಾಮನಾಡ್ ಶ್ರೀನಿವಾಸಯ್ಯಂಗಾರರು ಈ ರಾಗದಲ್ಲಿ ರಚಿಸಿದ್ದಾರೆ.
 
ನವರಸ ಕುಂತಳಿ ಈ ರಾಗವು ೪೦ನೆ ಮೇಳಕರ್ತ ನವನೀತದ ಒಂದು
 
ಜನ್ಯರಾಗ
 
ಸಂಗೀತ ಪಾರಿಭಾಷಿಕ ಕೋಶ
 
ಸ ಮ ಪ ದ ನಿ ಸ
 

 
ದ ಪ ದ ಮ ಗ ರಿ ಸ
 
ನವರಸ ಕಲಾನಿಧಿ-ಈ ರಾಗವು ೨೮ನೆ ಹರಿಕಾಂಭೋಜಿ ಮೇಳದ ಒಂದು
ಜನ್ಯರಾಗ,
 
ಸ ರಿ ಮ ಪ ಸ ನಿ ಸ
 
ಸ ನಿ ದ ಪ ಮ ಗ ರಿ ಸ
 
ನವರಸ ಗಾಂಧಾರಿ-ಈ ರಾಗವು ೫೦ನೆ ನಾಮನಾರಾಯಣಿ ಮೇಳದ
ಒಂದು ಜನ್ಯರಾಗ.
 
ಸ ರಿ ಗ ಮ ಪ ಮ ದ ನಿ ಸ
 
ಸ ನಿ ದ ಮ ಗ ರಿ ಸ
 

 
ನವರಸ ಚಂದ್ರಿಕ-(೧) ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ
ಒಂದು ಜನ್ಯರಾಗ
 
ಸ ರಿ ಗ ಪ ಮ ಪ ಸ
 
ಸ ದ ಪ ಮ ಗ ರಿ ಸ
 
(೨) ಇದೇ ಹೆಸರಿನ ಮತ್ತೊಂದು ರಾಗವು ೪ನೆ ಮೇಳಕರ್ತ ಧವಳಾಂಬರಿಯ
 
ಜನ್ಯವಾಗಿದೆ.
 
ಸ ರಿ ಗ ಮ ದ ನಿ ಸ
 
ಸ ದ ಪ ಗ ರಿ ಸ