This page has not been fully proofread.

ii
 

 
ಕೊಡಲಾಗಿದೆ. ಸಂಗೀತ ವಿದ್ವಾಂಸರ ಹೆಸರುಗಳಲ್ಲಿ ಕೆಲವು ಬಿಟ್ಟು ಹೋಗಿರ
ಬಹುದು. ಅದಕ್ಕೆ ಕಾರಣ ಅವರಿಂದ ಮಾಹಿತಿ ದೊರೆಯದಿರುವುದು. ಯಾರನ್ನೂ
ಉದ್ದೇಶಪೂರ್ವಕವಾಗಿ ಬಿಟ್ಟಿಲ್ಲ ಎಂಬುದನ್ನು ತಿಳಿಸಬಯಸುತ್ತೇನೆ. ಒಟ್ಟು
ಸುಮಾರು ೭೦೦೦ಕ್ಕೂ ಹೆಚ್ಚು ಪದಗಳೂ ವಿಷಯಗಳೂ ಈ ಸಂಗೀತ ಕೋಶದಲ್ಲಿವೆ.
 
ಚರ್ಚಿಸಿ
 
ನನ್ನ ಈ ಶ್ರಮಸಾಹಸದಲ್ಲಿ ನೆರವು ನೀಡಿದ ಮಹನೀಯರೂ, ಹಿರಿಯರೂ,
ಮಿತ್ರರೂ ಅನೇಕರು,
ನಾನು ಬರೆದುದನ್ನೆಲ್ಲಾ ವಿಮರ್ಶಾತ್ಮಕ ದೃಷ್ಟಿಯಿಂದ
ಮೇಲಾಗಿ ಭಾಷಾದೃಷ್ಟಿಯಿಂದ ಓದಿ ಸೂಕ್ತ ಸಲಹೆಗಳನ್ನಿತ್ತವರು ಮೈಸೂರಿನ ನಿವೃತ್ತ
ಜಿಲ್ಲಾ ವಿದ್ಯಾಧಿಕಾರಿ ಹಾಗೂ ಹಿರಿಯ ಗಮಕಿಗಳಾದ ಶ್ರೀ ಕೆ. ಟ ರಾಮಸ್ವಾಮಿ
ಅಯ್ಯಂಗಾರರು. ಸಂಗೀತಶಾಸ್ತ್ರ ಭಾಗಗಳನ್ನು ಓದಿ ಸಲಹೆ ನೀಡಿದವರು ನನ್ನ
ಹಿರಿಯ ಮಿತ್ರ ಸಂಗೀತ ವಿದ್ವಾನ್ ಶ್ರೀ ಎ. ಆರ್ ಕೃಷ್ಣಮೂರ್ತಿಯವರು. ಎಲ್ಲಕ್ಕೂ
ಮಿಗಿಲಾಗಿ ಮೊದಲಿಂದ ಕೊನೆಯವರೆಗೆ ಕೂಲಂಕಷವಾಗಿ ಓದಿ, ತಿದ್ದಿ
ಸಲಹೆಗಳನ್ನಿತ್ತು ನನ್ನ ಈ ಕಾರ್ಯಕ್ಕೆ ಮೆರುಗನ್ನಿತ್ತಿರುವವರು ವೈಣಿಕ ವಿದ್ವಾನ್
ಎಂ ಚೆಲುವರಾಯಸ್ವಾಮಿಯವರು. ಸಂಗೀತದ ವಿಷಯಗಳ ಬಗ್ಗೆ ನನಗೆ
ಸಂದೇಹ ತೋರಿದಾಗಲೆಲ್ಲಾ ಪ್ರಯೋಗ ಮತ್ತು ಅನುಭವದಿಂದ, ಚರ್ಚೆಯ
ಮೂಲಕ ಎಲ್ಲವನ್ನೂ ಪರಿಹರಿಸಿ, ಅಧ್ಯಯನ ಮತ್ತು ಲೇಖನ ವ್ಯವಸಾಯಕ್ಕೆ
ಉತ್ತೇಜನಕರವಾದ ವಾತಾವರಣವನ್ನುಂಟು ಮಾಡಿ ಸಹಕರಿಸಿರುವ ನನ್ನ ಧರ್ಮಪತ್ನಿ
ಸಂಗೀತ ವಿದುಷಿ ಟಿ. ಎಸ್. ಲೀಲ ಮತ್ತು ಹಸ್ತ ಪ್ರತಿಯನ್ನು ಸುಂದರವಾಗಿ ನಕಲು
ಮಾಡಿಕೊಟ್ಟ ನನ್ನ ಸುಪುತ್ರ ಚಿ॥ ವಿ. ಎಸ್. ಮೋಹನರಾಮ್ ಇವರೆಲ್ಲರಿಗೂ
 
ನಾನು ಚಿರಋಣಿ.
 
ಮೆಲಾಗಿ ಈ ಗ್ರಂಥವನ್ನು ಪರಿಶೀಲಿಸಿ ಪ್ರಕಟಿಸಲು ಅಂಗೀಕರಿಸಿ
ಮಹದುಪಕಾರ ಮಾಡಿ ಪ್ರೋತ್ಸಾಹಿಸಿರುವ ಮೈಸೂರು ವಿಶ್ವವಿದ್ಯಾನಿಲಯದ
ಪ್ರಸಾರಾಂಗದ ನಿರ್ದೇಶಕರಾಗಿದ್ದ ಡಾ. ಪ್ರಭುಶಂಕರ ಮತ್ತು ಈಗಿನ ನಿರ್ದೇಶಕರಾದ
ಶ್ರೀ ಕೆ. ಟಿ. ವೀರಪ್ಪನವರಿಗೂ ಹಾಗೂ ಉಪನಿರ್ದೇಶಕರಾದ ಶ್ರೀ. ಆರ್. ಎಲ್.
ಅನಂತರಾಮಯ್ಯನವರಿಗೂ ನಾನು ಅತ್ಯಂತ ಆಭಾರಿಯಾಗಿದ್ದೇನೆ.
ಈ ಗ್ರಂಥವು
ಸಂಗೀತ ಕಲಾಭಿಮಾನಿಗಳಿಗೂ
ಉಪಯುಕ್ತವಾಗುವಂತಾದರೆ ನನ್ನ ಶ್ರಮವು ಸಾರ್ಧಕವಾದೀತು.
 
ಸಂಗೀತಾಭ್ಯಾಸಿಗಳಿಗೂ
 
ವಿ. ಎಸ್. ಸಂಪತ್ತು ಮಾರಾಚಾರ್ಯ