This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಡೆಸುತ್ತಿದ್ದ ಕಚೇರಿಗಳು ಆಕರ್ಷಕವಾಗಿದ್ದು ವು. ಮದ್ರಾಸಿನಲ್ಲಿ ತಿರುವೋಟ್ರಿಯೂರ್

ತ್ಯಾಗಯ್ಯರ್ ನಡೆಸುತ್ತಿದ್ದ ಸಂಗೀತೋತ್ಸವದಲ್ಲಿ ಇವರು ತಪ್ಪದೆ ಭಾಗವಹಿಸುತ್ತಿದ್ದರು.

ಇವರು ತೆಲುಗಿನಲ್ಲಿ ಸಂಗೀತಾನಂದ ರತ್ನಾಕರವೆಂಬ ಸಂಗೀತ ವಿಷಯಿಕವಾದ ಒಂದು

ಚಿಕ್ಕ ಪುಸ್ತಕವನ್ನು ಬರೆದು ಪ್ರಕಟಿಸಿದರು.
 
೫೯೦
 
ಇವರ
 

ಮೂರ್ತಿಯವರಿಗೆ ಅವ
 

 
ನರಸಿಂಹಮೂರ್ತಿ ಹೆಚ್. ಕ. (೧೯೪೬)-ನರಸಿಂಹಮೂರ್ತಿಯವರು

ಕರ್ಣಾಟಕದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜನಿಸಿದರು.

ತಂದೆ ಮೈಸೂರಿನ ವೆಂಕಟೇಶದೇವರ ಶಿಷ್ಯರಾಗಿದ್ದರು.

ದೊಡ್ಡಪ್ಪ ಹೆಚ್. ಎಸ್. ರಾಮಚಂದ್ರರಾವ್ ಪ್ರಥಮ ಗುರು. ನಂತರ

ಹೆಚ್. ಟಿ. ಪುಟ್ಟಸ್ವಾಮಯ್ಯ ಮತ್ತು ಹೆಚ್. ವಿ. ಮೂರ್ತಿಯವರಲ್ಲಿ

ಪಿಟೀಲು ವಾದನವನ್ನು ಕಲಿತು ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ಅಲ್ಲಿ

ಒಂದು ವರ್ಷ ಮುತ್ತಣ್ಣನವರಲ್ಲ, ಟ ಪುಟ್ಟಸ್ವಾಮಯ್ಯನವರಲ್ಲಿ ಶಿಕ್ಷಣ ಪಡೆದು

ನಂತರ ಮದ್ರಾಸಿಗೆ ಹೋಗಿ ಪರೂರು ಗೋಪಾಲಕೃಷ್ಣನ್‌ರವರಲ್ಲಿ ನಾಲ್ಕು ವರ್ಷಗಳ

ಕಾಲ ಶಿಕ್ಷಣ ಪಡೆದರು. ೧೯೬೯ರಲ್ಲಿ ಮದ್ರಾಸಿನ ಕೇಂದ್ರ ಸಂಗೀತದ ಕಾಲೇಜಿನಲ್ಲಿ

ವಿದ್ವಾನ್ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದುದಲ್ಲದೆ
 
೧೯೬೬ರಲ್ಲಿ
 

ಬಿಎಸ್.ಸಿ. ಪದವೀಧರರಾದರು. ೧೯೬೯ರಲ್ಲಿ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ

ಪ್ರಥಮ ಬಹುಮಾನವನ್ನು ಪಡೆದರು. ಕರ್ಣಾಟಕದ ಮತ್ತು ಹೊರಗಡೆ
 
ಪ್ರಾಂತ್ಯಗಳ ಹಿರಿಯ ವಿದ್ವಾಂಸರಿಗೆ ಪಕ್ಕವಾದ್ಯವನ್ನು ನುಡಿಸಿದ್ದಾರೆ. ಈಗ

ಮೈಸೂರು ಆಕಾಶವಾಣಿ ನಿಲಯದ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
 

 
ನಲ್ಲತರಂಗ-
ಇದು ೧೯ ಕೊಳವೆಗಳಿರುವ ಒಂದು ಸುಷಿರವಾದ್ಯ. ಇದನ್ನು

ಆರ್ಗನ್ ವಾದ್ಯದ ತತ್ವದ ಆಧಾರದ ಮೇಲೆ ರಚಿಸಲಾಗಿದೆ. ಪ್ರತಿಕೊಳವೆಯನ್ನು

ಒಂದು ಗುಂಡಿಯನ್ನು ಒತ್ತಿ ತೆರೆಯಲಾಗುತ್ತದೆ. ಇದನ್ನು ತಿದಿಯನ್ನು ಒತ್ತಿ

ನುಡಿಸಲಾಗುವುದು.
 

 
ನಳಂಗು-
ಇದೊಂದು ಮದುವೆಯ ಹಾಡು.
 

 
ನಳಿನಕಾಂತಿ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 

ಜನ್ಯರಾಗ,
 

ಸ ಗ ರಿ ಮ ಪ ನಿ ಸ
 

ಸ ನಿ ಪ ಮ ಗ ರಿ ಸ
 

ಉಪಾಂಗರಾಗ ಗಾಂಧಾರ ನಿಷಾದಗಳು ವಾದಿ ಸಂವಾದಿಗಳು. ಮಿಕ್ಕ ಸ್ವರಗಳು

ರಾಗಛಾಯಾಸ್ವರಗಳು,

ಭಕ್ತಿರಸ ಪ್ರಧಾನವಾದ ಸಾರ್ವಕಾಲಿಕರಾಗ

ತ್ಯಾಗರಾಜರ " ಮನಾಲಗಿಂಚರಾ' ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.

 
ನಳಿನಕುಸುಮಾವಳಿ
ಈ ರಾಗವು ೬೯ನೆ ಮೇಳಕರ್ತ ಧಾತುವರ್ಧನಿಯ

ಒಂದು ಜನ್ಯರಾಗ,