This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಒಳಗಡೆ ಇರುವ ತಂತಿಯನ್ನು ಈ ಉಂಗುರಕ್ಕೆ ಕಟ್ಟಿದೆ. ಈ ತಂತಿಯು ವಾದ್ಯದ

ಮೇಲ್ಬಾಗದಲ್ಲಿ ಮೂರು ಚೌಕನಾದ ಮರದ ತುಂಡಿನ ಮೂಲಕ ಹಾದು ಹೋಗಿದೆ.

ಅವುಗಳ ತುದಿಯಲ್ಲಿ ಒಂದು ಹಿಡಿ ಇದೆ.

ಇದನ್ನು ಮತ್ತೊಂದು ಮರದ ತುಂಡಿಗೆ

ಅಳವಡಿಸಿದೆ. ಇದನ್ನು ತಿರುಗಿಸಿದರೆ ತಂತಿಯ ಶ್ರುತಿಯನ್ನು ಬದಲಾಯಿಸಬಹುದು.

ಮಡಕೆಯ ಒಳಗಿನ ತಂತಿಗೆ ಸಣ್ಣ ಉಂಗುರಗಳಿವೆ. ವಾದ್ಯವನ್ನು ನುಡಿಸಿದಾಗ ಈ

ಉಂಗುರಗಳು ತಂತಿಯ ಸಹಿತ ಕಂಪನಗೊಂಡು ಹಿತಕರವಾದ ನಾದ ಉಂಟಾಗುತ್ತದೆ.

ಇದನ್ನು ಸ್ವಲ್ಪ ಓರೆಯಾಗಿ

ದೂರದಲ್ಲಿರುವವರಿಗೆ

ಸಂದೇಶವನ್ನು ಕಳುಹಿಸಲು ಇದನ್ನು ಬಳಸುವರು. ಇದು ಶ್ರುತಿವಾದ್ಯ ಮತ್ತು

ತಾಳವಾದ್ಯ.
 
ಹಿಡಿದು
 
ನುಡಿಸುವರು.
 
೫೮೮
 

 
ನರಭೈರವಿ-
ಗೋವಿಂದಾಚಾರ್ಯ ವಿರಚಿತ ಸಂಗ್ರಹ ಚೂಡಾಮಣಿ' ಎಂಬ

ಗ್ರಂಥದಲ್ಲಿ ಉಕ್ತವಾಗಿರುವ ೨೦ನೆ ಮೇಳಕರ್ತ ರಾಗದ ಹೆಸರು. ನರ ಎಂಬ

ಪದವು ಕಟಪಯಾದಿ ಸಂಖ್ಯಾ ಪದ್ಧತಿಯ ಪ್ರಕಾರ ೨೦ನ್ನು ಸೂಚಿಸುತ್ತದೆ. ಆದರೆ

೨೦ನೆ ಮೇಳಕರ್ತಕ್ಕೆ ನಠಭೈರವಿ ಎಂಬ ಹೆಸರನ್ನು ಅಂಗೀಕರಿಸಲಾಗಿದೆ.
 
ಇವರು
 

 
ನರಹರಿತೀರ್ಥ-
ನರಹರಿತೀರ್ಥರ ಪೂರ್ವಾಶ್ರಮದ ಹೆಸರು ಸ್ವಾಮಿಶಾಸ್ತ್ರಿ.

ನ್ಯಾಯಾದಿ ಶಾಸ್ತ್ರಗಳಲ್ಲಿ ಪಂಡಿತವರೇಣ್ಯರು,

ವಾದಾಗ್ರಣಿಗಳೆಂದು

ಪ್ರಸಿದ್ಧರಾಗಿ ಒರಿಸ್ಸದ ಗಜಪತಿರಾಜರ ವಿದ್ಯಾಗುರುಗಳಾಗಿದ್ದುದಲ್ಲದೆ ಬೊಕ್ಕಸದ

ಮುಖ್ಯಾಧಿಕಾರಿಗಳಾಗಿದ್ದರು ಶ್ರೀಮಧ್ವಾಚಾರರು ಒರಿಸ್ಸಕ್ಕೆ ಬಂದಾಗ ಅವರೊಡನೆ

ವಾದ ಮಾಡಿ, ಅವರ ನೈಜ ಪ್ರತಿಭೆ, ದೈವೀವರ್ಚಸ್ಸು ಮತ್ತು ಪಾಂಡಿತ್ಯಕ್ಕೆ

ಮನಸೋತು ಅವರ ಪ್ರಮುಖ ನಾಲ್ವರು ಶಿಷ್ಯರಲಿ ಎರಡನೆಯವರಾಗಿ ಅವರಿಂದ

ಸನ್ಯಾಸಗ್ರಹಣ ಮಾಡಿದರು. ಇವರ ಆಶ್ರಮನಾಮ ನರಹರಿತೀರ್ಥರೆಂದಾಯಿತು.

ರಾಜಕುಮಾರನು ಪ್ರಾಪ್ತ ವಯಸ್ತನಾಗುವವರೆಗೆ ಕಳಿಂಗ ದೇಶಾಧಿಪತ್ಯವನ್ನು ನಡೆಸಿ

ಆಚಾರರ ಆಜ್ಞೆಯಂತೆ ರಾಜನಿಂದ ಮೂಲ ರಾಮಸೀತಾ ವಿಗ್ರಹಗಳನ್ನು

ಪಾರಿತೋಷಕವಾಗಿ ಪಡೆದು ಉಡುಪಿಗೆ ಬಂದು ಪದ್ಮನಾಭತೀರ್ಥರ ನಂತರ

ಪೀಠವನ್ನೇರಿದರು (೧೨೦೫-೧೨೧೪). ಆ ಕಾಲದಲ್ಲಿ ಭಾಗವತ ಧರ್ಮ ಪ್ರಚಾರಕ್ಕಾಗಿ

ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದರು. ಆ ಪೈಕಿ ನಮಗೆ ದೊರಕಿರುವುದು

ಮೂರೇ ಹಾಡು, ಎಂತು ಮರುಳಾದೆ, ನಾನೆಂತು ಮರುಳಾದೆ (ಆನಂದಭೈರವಿ-ದಿ),

ಹರಿಯೇ, ಇದು ಸರಿಯೇ (ಶ್ರೀರಾಗ) ಮುಂತಾದ ಹಾಡಿನ ರಾಗವೂ ನಡೆಯ

ಗಾನದೃಷ್ಟಿಯಿಂದ ಕಳೆಕಟ್ಟಿ ಬಂದಿದೆ. ನರಹರಿತೀರ್ಥರು ಹರಿದಾಸ ಕೂಟಕ್ಕೆ
ಆದ್ಯ ಆಚಾರ್ಯರು.
 

 
ನರಸಿಂಹಭಾಗವತರು-
ಇವರು ತ್ಯಾಗರಾಜರ ಶಿಷ್ಯರಾದ ತಿಸ್ಥಾನಂ

ರಾಮ ಅಯ್ಯಂಗಾರರಲ್ಲಿ ಸಂಗೀತವನ್ನು ಕಲಿತು ಕಥಾಕಾಲಕ್ಷೇಪಗಳನ್ನು
 
ಮಾಡುತ್ತಿದ್ದರು. ೧೯೦೮ರಲ್ಲಿ ತ್ಯಾಗರಾಜರ ೫೦೦ ಕೃತಿಗಳನ್ನು ತೆಲುಗಿನಲ್ಲಿ