This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೃಶ್ಯವಿದೆ. ಒಂದು ದೊಡ್ಡ ಮದ್ದಲೆ, ಕಮಾನಿನಿಂದ ತಂತೀವಾದ್ಯ ಒಂದನ್ನು
ನುಡಿಸುತ್ತಿರುವ ಸ್ತ್ರೀ, ಬಲಗೈಯಿಂದ ಕೊಳಲು ನುಡಿಸುತ್ತಿರುವ ಒಬ್ಬ ಸ್ತ್ರೀಯ
ಚಿತ್ರವಿದೆ. ೧೬ನೆ ಗುಹೆಯಲ್ಲಿ ಹಲವು ಚರ್ಮವಾದ್ಯಗಳ ಚಿತ್ರವಿದೆ ಇಲ್ಲಿಯ
ಚಿತ್ರಗಳಲ್ಲಿ ಒಂದೊಂದು ವ್ಯಕ್ತಿಯ ಸ್ವಭಾವ ಸುಂದರವಾಗಿ ಕಾಣುವುದಲ್ಲದೆ,
ಲಾಲಿತ್ಯ ಸೌಂದರ್ಯಭಾವಗಳಿಂದ ತುಂಬಿ, ಒಟ್ಟು ಚಿತ್ರದ ರಸಭಾವಗಳೂ
ಸ್ಪಷ್ಟವಾಗಿ ಪ್ರಕಟವಾಗಿವೆ.
 
ಅಂದು
 
4
 
ಅಂಗಾರಕ- (೧) ನವಗ್ರಹಗಳಲ್ಲಿ ಮೂರನೆಯ ಗ್ರಹ. ಕರ್ಣಾಟಕ
ನಂಗೀತದ ತ್ರಿರತ್ನರಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಸುರಟರಾಗದಲ್ಲಿ
ಅಂಗಾರಕ ಗ್ರಹವನ್ನು ಕುರಿತು ಅಂಗಾರಕಮಾಶ್ರಯಾಮ್ಯಹಂ ಎಂಬ ಕೃತಿಯನ್ನು
ರಚಿಸಿದ್ದಾರೆ. ಮಂಗಳವಾರವೆಂಬ ಹೆಸರಿದ್ದರೂ ಅದು ಅಮಂಗಳವಾರ,
ಯಾವ ಶುಭಕಾರ್ಯವನ್ನೂ ಮಾಡುವುದಿಲ್ಲ ಮಂಗಳ ಗ್ರಹವನ್ನು ಕುರಿತು
ಸುರಟರಾಗದಲ್ಲಿ ಕೃತಿ ರಚನೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಮಂಗಳವನ್ನು
ಸುರಟರಾಗದಲ್ಲಿ ಹಾಡುವುದು ರೂಢಿಯಲ್ಲಿದ್ದರೂ ಒಂದು ದೃಷ್ಟಿಯಲ್ಲಿ ಇದು ಅಮಂಗಳ,
ಏಕೆಂದರೆ ಗುರುವು ತನ್ನ ಶಿಷ್ಯನಿಗೆ ಈ ರಾಗವನ್ನು ಹೇಳಿ ಕೊಡುವುದಿಲ್ಲ
ಇದೊಂದು ಸಂಪ್ರದಾಯವು ಹಿಂದಿನಿಂದ ಬಂದಿದೆ. ಮಂಗಳವೂ ಅಮಂಗಳವೂ
ಆದ ರಾಗವನ್ನು ಮಂಗಳವೆಂಬ ಹೆಸರಿದ್ದರೂ ಅಮಂಗಳಕರವಾದ ಗ್ರಹವನ್ನು ಕುರಿತು
ಕೃತಿ ರಚನೆ ಮಾಡಲು ಬಳಸಿರುವುದು ದೀಕ್ಷಿತರ ಸಂಗೀತ ಪ್ರತಿಭೆಯ ಪ್ರತೀಕ.
ಮೂರನೆಯ ಗ್ರಹವನ್ನು ಕುರಿತ ಕೃತಿಗೆ ೩ನೆಯ ತಾಳವಾದ ರೂಪಕ ತಾಳವನ್ನು
ಬಳಸಿರುವುದು ಗಮನಾರ್ಹ, ಅಭಂಗಿ, ತ್ರಿಭಂಗಿ, ಅತಿಭಂಗಿ ಎಂಬ ನಾಲ್ಕು ವಿಧಗಳೂ,
ಇವುಗಳಲ್ಲಿ ನೃತ್ತಾಂಗ, ದೇವತಾ, ಮಾನವಿಕ ಮತ್ತು ಪ್ರಾಕೃತಿಕ ಎಂಬ ನಾಲ್ಕು
ವಿಭೇದಗಳಿವೆ.
 
ಅಂಗರಚನೆ-ಭರತನಾಟ್ಯದಲ್ಲಿ ಅಂಗರಚನೆಯೆಂದರೆ ಬಣ್ಣ ಬಣ್ಣದ ಕೆಲಸ.
ಇದರಲ್ಲಿ ಬಿಳಿ, ನೀಲಿ, ಹಳದಿ, ಕೆಂಪು ಬಣ್ಣಗಳು ಸ್ವಭಾವಜ ಅಧವಾ ಸಹಜ
ಸ್ವಭಾವದವು. ವಿವಿಧ ಬಣ್ಣಗಳ ಸಂಯೋಗದಿಂದುಂಟಾಗುವ ಮಿಶ್ರ ಬಣ್ಣಗಳಾದ
ಹಸಿರು, ನಸುಗೆಂಪು, ಕಾಷಾಯ ವರ್ಣ ಮುಂತಾದುವುಗಳು ಸಂಯೋಗಜವು.
ಮೂರುನಾಲ್ಕು ರೀತಿಯ ಬಣ್ಣಗಳಿಂದ ವಿವಿಧ ರೀತಿಯಲ್ಲಿ ವಿವಿಧಾಂಶಗಳಿಂದ ಅಂಗ
ವರ್ತನವನ್ನಾಗಿಸುವುದು ಉಪವರ್ಣ, ಸಹಜವಾದ ರೂಪವನ್ನು ವ್ಯತ್ಯಾಸಗೊಳಿಸಿ,
ತಮಗೆ ಬೇಕಾದಂತೆ ವ್ಯಕ್ತಿಗತವಾದ ಆಕಾರವನ್ನು ಪರಿವರ್ತಿಸುವ ಅದ್ಭುತ ಕಲೆಯು
ಅಂಗರಚನೆ.
 
ಅಂಬಾಮನೋಹರಿ ಈ ರಾಗವು ೨೩ನೆಯ ಮೇಳಕರ್ತ ಗೌರೀ
ಮನೋಹರಿಯ ಒಂದು ಜನ್ಯರಾಗ