This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸ್ಪರ್ಧಿಸಿ ಆಡಿದ್ದು ಊರ್ಧ್ವತಾಂಡವ, ಪಾಂಡ್ಯರಾಜನ ಪ್ರಾರ್ಥನೆಯಂತೆ ಎಡಗಾಲನ್ನು

ಶಿಖರದ ಕಡೆಗೆ ಮಾಡಿ ನರ್ತಿಸುವುದು ಸವತಾಂಡವ.

ಭಕ್ತರ ಮುಕ್ತಿ ಸಿದ್ಧಿಗಾಗಿ ಆಡಿದ ಆನಂದತಾಂಡವವೇ

ಕಾಲದಲ್ಲಿ

ಬ್ರಹ್ಮಾಂಡಕಾಂಡವಿಸ್ಫೋಟ
 
ಮಹಾತಾಂಡವ

ಮತ್ತು ಮಹಾಪ್ರಳಯ
 
ಆಡಿದುದು
 
ತಾಂಡವಗಳು.
 

ತ್ರಿಪುರದಹನ ಕಾಲದಲ್ಲಿ ನರ್ತಿಸುವುದು ಮಹೋಗ್ರತಾಂಡವ.
 

ಸಂಧ್ಯಾಕಾಲದ್ದು ಪರಿಭ್ರಮಣತಾಂಡವ,
 

ಶ್ರೀ
 
೫೮೨
 
ಚಿದಂಬರ ಕ್ಷೇತ್ರದಲ್ಲಿ
 
ಸಂಹಾರ
 

ಶಂಕರಾಚಾರ್ಯರ ಮಹಿಷಮರ್ದಿನಿ ಸ್ತೋತ್ರದಂತೆ ಶಿವ, ಪಾರ್ವತಿ,
 
ಗಣಪತಿ, ನಂದಿ, ಶೃಂಗಿ, ಕೃಷ್ಣ, ಸರಸ್ವತಿ ದೇವತೆಗಳು ಸೃಷ್ಟಿ, ಸ್ಥಿತಿ, ಸಂಹಾರ

ರೂಪವಾದ ನಾಟ್ಯವನ್ನು ಮಾಡುತ್ತಾರೆ. ಶಿವನ ತ್ರಿಪುರ ತಾಂಡವದಲ್ಲಿ ಮೂರ್ತಿಯು

ಹದಿನಾರು ಕೈಗಳನ್ನೂ, ಎಡಬಲದಲ್ಲಿ ಗೌರಿ ಹಾಗೂ ಸ್ಕಂದರನ್ನೂ ಹೊಂದಿರುತ್ತಾನೆ

ಊರ್ಧ್ವತಾಂಡವ ಮತ್ತು ಆನಂದತಾಂಡವಗಳಲ್ಲಿ ಪಂಚಕ್ರಿಯೆಗಳಿಗೆ ಸಂಬಂಧಿಸಿದಂತೆ

ಪಂಚದೇವತೆಗಳಾದ ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ ಮತ್ತು ಸದಾಶಿವರ

ಸಮ್ಮೇಳನಗಳ ಆನಂದತಾಂಡವವು ಕಾಣಬರುತ್ತದೆ.
 

ದಕ್ಷಿಣ ಭಾರತದ ಚಿದಂಬರವಂತೂ ನಟರಾಜನ ಮೂಲಸ್ಥಾನ. ಶಿವನ

ನಾದಾಂತ ನೃತ್ಯವು ವಿಶ್ವಮಧ್ಯದಲ್ಲಿ ಸ್ಥಾಪಿತವಾಗಿರುವ ಚಿದಂಬರನ ಚಿನ್ನದ

ಅರಮನೆಯಲ್ಲಿ ದೇವತೆಗಳಿಗೂ, ಋಷಿಗಳಿಗೂ ತೋರಿಸಲ್ಪಟ್ಟಿದೆಯೆಂದು ಹೇಳಲಾಗಿದೆ.

ಚಿದಂಬರಂ ದೇವಾಲಯದ ಗೋಪುರದಲ್ಲಿ ೧೦೮ ಭಂಗಿಯ ತಾಂಡವಗಳಿದ್ದು,

ನಟರಾಜನ ಬ್ರಹ್ಮಾಂಡದ ರೂಪವನ್ನು ತೋರಿಸುವಂತಹುದಾಗಿದೆ. ದಕ್ಷಿಣ

ಭಾರತದ ದೇವಾಲಯಗಳಲ್ಲಿ ನಟರಾಜನ ಮೂರ್ತಿಗಳು ಎಲ್ಲೆಲ್ಲೂ ಕಾಣಸಿಕ್ಕುತ್ತವೆ.

ನಾಲ್ಕು ಕೈಗಳಿಂದ ಸುಂದರಾಕಾರವಾಗಿ ನರ್ತಿಸುತ್ತಿರುವ ಅರ್ಧನಾರಿ ನಟೇಶ್ವರನಂತೂ

ತುಂಬ ಅರ್ಧಗರ್ಭಿತವಾದುದು.

ಬಾದಾಮಿ, ಬೇಲೂರು, ಹಳೇಬೀಡು, ಬಳ್ಳಿಗಾವೆ,

ಗದಗ್, ಲಕ್ಕುಂಡಿ ಮುಂತಾದೆಡೆಯಿರುವ ದೇವಾಲಯಗಳಲ್ಲಿ ವಿವಿಧ ಭಂಗಿಗಳಲ್ಲಿ

ನರ್ತಿಸುತ್ತಿರುವ ನಟರಾಜಮೂರ್ತಿಗಳಿವೆ. ನಟರಾಜನನ್ನು ಕುರಿತು ವಾಗ್ಗೇಯ

ಕಾರರು ಅನೇಕ ಕೃತಿಗಳನ್ನು ರಚಿಸಿ ಸ್ತುತಿಸಿದ್ದಾರೆ.
 

 
ನಟರಾಜನ್ ಎ.ಕೆ.ಸಿ.-
ಕ್ಲಾಂನೆಟ್ ವಾದ್ಯದಲ್ಲಿ ಅದ್ವಿತೀಯರೆನಿಸಿದ

ನಟರಾಜನ್ ಅವರ ತಂದೆ ಚಿನ್ನ ಕೃಷ್ಣನಾಯುಡುರವರ ಪ್ರೋತ್ಸಾಹದಿಂದ ಒಬ್ಬ

ಅದ್ಭುತ ಕಲಾವಿದರಾದರು. ಇವರು ತಮಿಳುನಾಡಿನ ತಿರುಚಿರಪಳ್ಳಿಯಲ್ಲಿ

ವಾಸವಾಗಿದ್ದಾರೆ. ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಚಿರಪರಿಚಿತರು. ಇವರ

ವಾದನದಲ್ಲಿ ಬಿಸ್ಮಿಲ್ಲಾಖಾನರ ಶಹನಾವಾದನದ ಲಯ ಮತ್ತು ಮಾಧುರ್ಯ

ತುಂಬಿದೆ. ನಾಗಸ್ವರದಂತೆಯೇ ನುಡಿಸುತ್ತಾರೆ. ಇದು ಪಂಡಿತ ಪಾಮರ
 
ರಂಜಕವಾಗಿದೆ.
 

 
ನಟರಾಜನ್ ಎಸ್. ಪಿ. (೧೯೩೩) -
ತಮಿಳುನಾಡಿನ ತಂಜಾವೂರು
 
-