This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅರಣ್ಯದಲ್ಲಿರುವ ಋಷಿಗಳಿಗೆ ತಮ್ಮ ಜ್ಞಾನ, ಭಕ್ತಿಗಳ ಬಗ್ಗೆ ಮಹಾಗರ್ವ ಬಂದಿತು.
ಆಗ ಶಿವನು ಯೋಗಿಯ ವೇಷ ಧರಿಸಿ ಒಂದು ವಾದ ವಿವಾದದಿಂದ ಋಷಿಗಳನ್ನು
ಸೋಲಿಸುತ್ತಾನೆ
ಅವರಿಗೆ ತುಂಬಾ ಸಿಟ್ಟು
ಬಂದು, ಹೋಮಾಗ್ನಿಯಲ್ಲಿ
 
ತಮ್ಮ ಮಂತ್ರ ಶಕ್ತಿಯಿಂದ ಹುಲಿಯೊಂದನ್ನು ಸೃಷ್ಟಿಸಿ ಶಿವನ ಮೇಲೆ ಬಿಡುತ್ತಾರೆ.
ಶಿವನು ತನ್ನ ಕಿರು ಬೆರಳಿನ ಉಗುರಿನಿಂದ ಅದನ್ನು ಸೀಳಿ, ಚರ್ಮವನ್ನು ಸೊಂಟದಲ್ಲಿ
ಸುತ್ತಿಕೊಳ್ಳುತ್ತಾನೆ. ನಂತರ ಋಷಿಗಳು ಉಗ್ರಸರ್ಪವೊಂದನ್ನು ಬಿಡುತ್ತಾರೆ.
ಅದನ್ನು ಶಿವನು ತನ್ನ ಕೊರಳ ಆಭರಣವನ್ನಾಗಿ ಮಾಡಿಕೊಳ್ಳುತ್ತಾನೆ. ಇದರಿಂದ
ಋಷಿಗಳ ಸಿಟ್ಟು ಮತ್ತಷ್ಟು ಹೆಚ್ಚಿ ಒಬ್ಬ ಕುರೂಪಿ ಕುಳ್ಳ ಪಿಶಾಚಿಯನ್ನು ಸೃಷ್ಟಿಸಿ
 
ಅವನನ್ನು ನುಂಗಲು ಬಿಡುತ್ತಾರೆ.
 
ಶಿವನು ಉಗ್ರನಾಗಿ ಪಿಶಾಚಿಯನ್ನು ಪಾದದಿಂದ
ಮೆಟ್ಟಿ, ಅದರ ತಲೆಯ ಮೇಲೆ ನರ್ತಿಸ ತೊಡಗುತ್ತಾನೆ ಋಷಿಗಳು ಶರಣಾಗತ
ರಾಗುತ್ತಾರೆ. ಹೀಗೆ ತಾಂಡವ ನೃತ್ಯಕ್ಕೆ ಸಂಬಂಧಿಸಿದ ಕತೆಗಳು ಅನೇಕವಾಗಿವೆ.
ಶೈವ ಪಂಥದ ಕಾರಣಾಗಮದಲ್ಲಿ
ಉಮಾತಾಂಡವ,
 
ಆನಂದತಾಂಡವ, ಸಂಧ್ಯಾತಾಂಡವ,
ಗೌರೀತಾಂಡವ, ಕಾಳಿಕಾತಾಂಡವ,
 
ತ್ರಿಪುರತಾಂಡವ,
 
ಸ್ವರೂಪಗಳ ವಿವರವಿದೆ.
 
ಜಗತ್ತಿನ
 
ಆನಂದತಾಂಡವ.
 
ಲಾಸ
 
ಸಂಹಾರತಾಂಡವ ಎಂಬ ಏಳು ತಾಂಡವ
ಜೀವರುಗಳಿಗೆ ಸುಖ ಸಂತೋಷವನ್ನು ಉಂಟುಮಾಡುವುದು
ಸಂಜೆಯ ರೂಪದಲ್ಲಿ ನರ್ತಿಸುವುದು ಸಂಧ್ಯಾತಾಂಡವ ಶಿವ ಪ್ರದೋಷ ಸ್ತೋತ್ರ
ದಲ್ಲಿರುವ ಸಂಧ್ಯಾತಾಂಡವದ ವರ್ಣನೆಯಂತೆ ಶೂಲಪಾಣಿಯಾದ ಶಿವನು ತ್ರಿಲೋಕ
ಮಾತೆಯಾದ ಪಾರ್ವತಿಯನ್ನು ರತ್ನ ಖಚಿತ ಸಿಂಹಾಸನದ ಮೇಲೆ ಕೂರಿಸಿ, ಕೈಲ
ಶಿಖರದ ಮೇಲೆ ನರ್ತಿಸುತ್ತಾನೆ. ಶಾರದೆಯು ವೀಣೆ ನುಡಿಸುತ್ತಾಳೆ. ಲಕ್ಷ್ಮಿಯು
ಇಂಪಾದ ಗಾನದಿಂದ ಹಾಡುತ್ತಾಳೆ ಇಂದ್ರ, ಬ್ರಹ್ಮ, ವಿಷ್ಣು ಮುಂತಾದವರೆಲ್ಲ
ತಾಳ, ಮದ್ದಲೆ, ಕೊಳಲುಗಳನ್ನು ನುಡಿಸುತ್ತಾರೆ. ಗಂಧರ್ವ, ಯಕ್ಷ, ಕಿನ್ನರ
ಕಿಂಪುರುಷ, ವಿದ್ಯಾಧರ, ಉರಗ, ಸಿದ್ಧ, ಅಪ್ಸರೆಯರೆಲ್ಲ ಶಿವನ ನರ್ತನವನ್ನು
ನೋಡುತ್ತಲೇ ಮೈ ಮರೆಯುತ್ತಾರೆ. ಆಗ ಸಂಧ್ಯಾ ಸಮಯ, ಶಿವನು ಶಾಂತಮೂರ್ತಿ
ರಾಕ್ಷಸರನ್ನೂ, ದುಷ್ಟರನ್ನೂ ನಾಶಮಾಡುವುದು ಕಾಳಿತಾಂಡವ.
ಲಯವೆಂದರೆ ನಾಶವನ್ನು ತೋರಿಸುವುದು ಸಂಹಾರತಾಂಡವ, ಗೌರಿಯೊಡನೆ
ನರ್ತಿಸುವುದು ಗೌರೀತಾಂಡವ ಉಮೆಯೊಡನೆ ನರ್ತಿಸುವುದು ಉಮಾತಾಂಡವ.
ನಟರಾಜ ಸಹಸ್ರನಾಮದಲ್ಲಿ ಉದ್ದಂಡತಾಂಡವ, ಚಂಡತಾಂಡವ, ಊರ್ಧ್ವ
ತಾಂಡವ, ಪಂಡಿತಸವ್ಯತಾಂಡವ, ಸಂಪನ್ನ
ಮಹಾತಾಂಡವ, ವೈಭವಬ್ರಹ್ಮಾಂಡ
ಕಾಂಡವಿಸ್ಫೋಟ, ಮಹಾಪ್ರಳಯತಾಂಡವ, ಮಹೋಗ್ರತಾಂಡವಾಭಿಜ್ಞ ಪರಿಭ್ರಮಣ
ತಾಂಡವ ಎಂಬ ಒಂಭತ್ತು ಬಗೆಯ ತಾಂಡವಗಳ ಅಂಕಿತ ನಾಮಗಳಿವೆ. ಇವುಗಳಲ್ಲಿ
ಶಿವನ ಗಂಭೀರ ತಾಂಡವವೇ ಉದ್ದಂಡತಾಂಡವ ದುಷ್ಟರ ಮೇಲಿನ ಕೋಪದಿಂದ
ನರ್ತಿಸಿದ್ದು ಚಂಡತಾಂಡವ. ಚಿದಂಬರನಾಟ್ಯ ಸಭೆಯಲ್ಲಿ ಕಾಳಿಯೊಡನೆ
 
ಯಾಗಿರುತ್ತಾನೆ
 
జలం