2023-06-25 23:30:59 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಶ
ನಾಲ್ಕು ವೇದಗಳನ್ನು ನೆನೆದು, ಋಗೈದದಿಂದ ಶಬ್ದ ಗಳನ್ನೂ, ಯಜುರ್ವೇದದಿಂದ
ಅಭಿನಯವನ್ನೂ, ಸಾಮವೇದದಿಂದ ಸಂಗೀತವನ್ನೂ, ಅಥರ್ವವೇದದಿಂದ ರಸವನ್ನೂ
ಸಂಗ್ರಹಿಸಿ ನಾಟ್ಯವೇದವನ್ನು ರಚಿಸಿ ಭರತಮುನಿಗೆ ಉಪದೇಶಿಸುತ್ತಾನೆ. ಭರತನು
ಇದನ್ನು ತನ್ನ ನೂರು ಮಕ್ಕಳಿಗೆ ಉಪದೇಶಿಸುತ್ತಾನೆ.
ಅವರು ಶೃಂಗಾರರಸ
ಪ್ರಧಾನವಾದ ಕೈಶಿಕೀ ವೃತ್ತಿಯನ್ನು ಬಿಟ್ಟು ಉಳಿದೆಲ್ಲದರಲ್ಲೂ ಪಾಂಡಿತ್ಯವನ್ನು
ಪಡೆಯುತ್ತಾರೆ. ಇದನ್ನರಿತ ಬ್ರಹ್ಮನು ಈ ವೃತ್ತಿಗಾಗಿ ಅಪ್ಪರಸ್ತ್ರೀಯರನ್ನು ಸೃಷ್ಟಿಸಿ,
ನಂತರ ತಾನು ಹಿಂದೆ ಕಂಡಿದ್ದ ಪಾರ್ವತೀ-ಶಿವನ ನೃತ್ಯವನ್ನು ಅದರಲ್ಲಿಯ ಕೈಶಿಕೀ
ವೃತ್ತಿಯನ್ನು ಭರತನಿಗೆ ತಿಳಿಸಲು, ಭರತನು ತನ್ನ ಮಕ್ಕಳಿಗೆ ಅದನ್ನು ತಿಳಿಸುತ್ತಾನೆ.
ಅನಂತರ ಬ್ರಹ್ಮನು ತಾನು ಕಂಡಿದ್ದ ವೃತ್ತಿಗಳಲ್ಲಿ ( ಅಮೃತ ಮಂಥನ' ಎಂಬ ರೂಪಕ
ಭೇದವನ್ನೂ ತ್ರಿಪುರದಾಹ' ವೆಂಬ ಡಿಮವನ್ನೂ ಶಿವನ ಎದುರಿಗೆ ಪ್ರದರ್ಶಿಸುವಂತೆ
ಭರತನಿಗೆ ಆಜ್ಞಾಪಿಸಲು ಆತನು ತನ್ನ ಮಕ್ಕಳೆ
ಳೊಂದಿಗೆ ತಮ್ಮ ಅಪಾರ ಪಾಂಡಿತ್ಯ
ವನ್ನು ಶಿವನ ಸಮ್ಮುಖದಲ್ಲಿ ಪ್ರದರ್ಶಿಸುತ್ತಾನೆ. ಇದರಲ್ಲಿ ಮತ್ತಾವುದೋ
ಲೋಪ ಇರುವುದನ್ನು ಕಂಡ ಶಿವನು, ತನ್ನ ಸಂಧ್ಯಾಕಾಲದ ನರ್ತನದ ಕರಣ,
ಅಂಗಹಾರಾದಿಗಳನ್ನು ನವ್ಯ ಪ್ರಯೋಗ ಮಾಡಲು ತಂಡುವಿಗೆ ತಿಳಿಸಲು, ತಂಡುವು
ಈ ಪ್ರಯೋಗದಲ್ಲಿ ಯಶಸ್ವಿಯಾಗಿ ಅದನ್ನು ಭರತನಿಗೆ ಕಲಿಸುತ್ತಾನೆ (ಈ
ಪ್ರಯೋಗವನ್ನು ಪಾರ್ವತಿಯು ಭರತಮುನಿಗೆ ಹೇಳಿ ಕೊಟ್ಟಳೆಂದು ಕೆಲವು
ಗ್ರಂಥಗಳಲ್ಲಿದೆ) ಈ ಕತೆಯಂತೆ ಭರತಮುನಿಯು ನಾಟ್ಯವನ್ನು ಶಿವ ಮತ್ತು
ಬ್ರಹ್ಮನಿಂದ ಕಲಿತನೆಂದು ತಿಳಿದುಬರುತ್ತದೆ.
ಭಾವದ
ವಿಷ್ಣು ಧರ್ಮೋತ್ತರ ಪುರಾಣದಂತೆ ರಾಕ್ಷಸರು ತಮ್ಮ ತಮಸ್ಸು ಮತ್ತು
ರಜಸ್ಸೆಂಬ ಪ್ರಧಾನ ಗುಣಗಳಿಂದ ಪೀಡಿತರಾಗಿ, ನಾಲ್ಕು ವೇದಗಳನ್ನು ಅಪಹರಿಸಿ
ಪಾತಾಳಕ್ಕೆ ಹೋಗುತ್ತಾರೆ. ಇದನ್ನು ಬ್ರಹ್ಮನಿಂದ ಅರಿತ ನಾರಾಯಣನು ಕೂಡಲೇ
ಮೇಲೆದ್ದು ಜಲರಾಶಿಯ ಮೇಲೆ ಅಂಗಹಾರ ಮತ್ತು ಪಾದ ವಿನ್ಯಾಸಗಳಿಂದ
ನರ್ತಿಸುತ್ತಾನೆ. ಲಕ್ಷ್ಮಿಯು ಕುತೂಹಲದಿಂದ ಇದನ್ನು ನೋಡುತ್ತಿದ್ದಂತೆಯೇ
ನಾರಾಯಣನು ಹಯಗ್ರೀವನಾಗಿ ಪಾತಾಳಕ್ಕೆ ಹೋಗಿ ರಾಕ್ಷಸರನ್ನು ಕೊಂದು
ವೇದಗಳನ್ನು ತಂದು ಬ್ರಹ್ಮನಿಗೆ ನೀಡಿ ಜಗತ್ತನ್ನು ಸೃಷ್ಟಿಸುವಂತೆ ಹೇಳಿ ಆದಿಶೇಷನ
ಮೇಲೆ ಪವಡಿಸುತ್ತಾನೆ. ಲಕ್ಷ್ಮಿಯು ನಾರಾಯಣನ ನರ್ತನದ ವಿವರಗಳನ್ನು
ಹೇಳುವಂತೆ ಬೇಡುತ್ತಾಳೆ. ಆಗ ನಾರಾಯಣನು ಮೂರು ಲೋಕದ ಅನುಕರಣವೂ
ಈ ವೃತ್ತದಲ್ಲಿದೆ ಎಂದು ತಿಳಿಸಿ ಅದನ್ನು ಬ್ರಹ್ಮನಿಗೆ ಉಪದೇಶಿಸುತ್ತಾನೆ. ಅನಂತರ
ಬ್ರಹ್ಮನು ಅದನ್ನು ರುದ್ರನಿಗೆ ಬೋಧಿಸುತ್ತಾನೆ. ರುದ್ರನು ಇದನ್ನು ನಾರಾಯಣನ
ಸಂತೋಷಾರ್ಥವಾಗಿ ನರ್ತಿಸಿ ನಾಟ್ಯಾಚಾರ್ಯ ಎನ್ನಿಸಿಕೊಳ್ಳುತ್ತಾನೆ. ಮೋಹಿನಿ-
ಭಸ್ಮಾಸುರನ ಕಥೆಯೂ ನಾರಾಯಣನ ನಾಟ್ಯದ ಪ್ರಭಾವವನ್ನು ಸೂಚಿಸುತ್ತದೆ.
ಶಿವನರ್ತನವನ್ನು ಕುರಿತು ಮತ್ತೊಂದು ಸುಂದರವಾದ ಕಥೆ ಪ್ರಚಲಿತವಾಗಿದೆ.
8:050