This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಹಿಂದಿನ
 
ಸಂದರ್ಭದಲ್ಲಿ ರಥ ಹೊರಡುವ ವೇಳೆಗೆ ಮತ್ತು ರಥವು ಸ್ವಸ್ಥಾನಕ್ಕೆ ಬರುವವರೆಗೂ

ನಗಾರಿಯನ್ನು ೨ ಕಡ್ಡಿಗಳಿಂದ ಬಾರಿಸಿ ನಾದವನ್ನುಂಟು ಮಾಡುತ್ತಾರೆ

ಕಾಲದಲ್ಲಿ ರಣರಂಗಗಳಲ್ಲಿ ನಗಾರಿ ಅಥವಾ ಭೇರಿ ಮತ್ತು ದುಂದುಭಿಗಳನ್ನು

ಬಾರಿಸಿ ಸೈನಿಕರನ್ನು ಹುರಿದುಂಬಿಸುತ್ತಿದ್ದರು. ಶತ್ರು ಸೈನ್ಯದಿಂದ ನಗಾರಿಯನ್ನು

ವಶಪಡಿಸಿಕೊಳ್ಳುವುದು ಗೆಲುವಿನ ಕುರುಹು. ಅಂತಹ ಗೌರವವು ನಗಾರಿಗೆ

ಸಲ್ಲುತ್ತಿತ್ತು.
 
೫೭೮
 

 
ನಗಾರಿ ಮಂಟಪ
ತಮಿಳುನಾಡಿನ ಮಧುರೆಯ ತಿರುಮಲ ನಾಯಕನು

(೧೭ನೆ ಶ.) ಶ್ರೀ ವಿಲ್ಲಿಪುತ್ತೂರಿನ ಆಂಡಾಳ್ ದೇವಿಯ ಪೂಜಾ ನಂತರ ಮಧ್ಯಾಹ್ನ

ಊಟ ಮಾಡುವ ಪದ್ಧತಿಯನ್ನು ಅನುಸರಿಸುತ್ತಿದ್ದನು. ಆಗಿನ ಕಾಲದಲ್ಲಿ ದೂರವಾಣಿ

ಅಥವಾ ತಂತೀ ಸಮಾಚಾರ ಪಡೆಯುವ ಅನುಕೂಲವಿರಲಿಲ್ಲ

ಆದ್ದರಿಂದ
 
ಮಧುರೈ ಮತ್ತು ಶ್ರೀ ವಿಲ್ಲಿಪುತ್ತೂರಿನ ದಾರಿಯ ಉದ್ದಕ್ಕೂ ಎಂದರೆ ಸುಮಾರು

೪೬ ಮೈಲಿದೂರ ಅಲ್ಲಲ್ಲಿ ನಗಾರಿ ಮಂಟಪವನ್ನು ನಿರ್ಮಿಸಿದನು. ಶ್ರೀ ವಿಲ್ಲಿಸುತ್ತೂರಿನ

ದೇವಾಲಯದಲ್ಲಿ ಪೂಜೆ ಆದಕೂಡಲೇ ಅಲ್ಲಿಯ ನಗಾರಿಯನ್ನು ಬಾರಿಸುತ್ತಿದ್ದರು.

ಇದನ್ನು ಮುಂದಿನ ನಗಾರಿ ಮಂಟಪದವನು ಕೇಳಿದ ಕೂಡಲೇ ತನ್ನ ನಗಾರಿಯನ್ನು

ಹೊಡೆಯುತ್ತಿದ್ದನು. ಆಗಿನ ಕೆಲವು ನಗಾರಿ ಮಂಟಪಗಳು ಇನ್ನೂ ಇವೆ.

ರಸ್ತೆಯ ಬದಿಯಲ್ಲಿ ಇವುಗಳನ್ನು ನಿರ್ಮಿಸಿದ್ದರು. ಇವುಗಳ ಮೂಲಕ ತಿರುಮಲ

ನಾಯಕನಿಗೆ ದೇವಾಲಯದಲ್ಲಿ ಪೂಜೆ ಆಗಿರುವುದು ಸುಮಾರು ಐದು ನಿಮಿಷಗಳಲ್ಲಿ

ತಿಳಿಯುತ್ತಿತ್ತು.
 

 
ನಚರ-
ಈ ರಾಗವು ೨೩ನೆ ಮೇಳಕರ್ತ
 
ಗೌರೀಮನೋಹರಿಯ ಒಂದು
 

ಜನ್ಯರಾಗ,
 
ಸ ಗ ರಿ ಗ ಮ ನಿ ದ ನಿ ಸ
ಸ ನಿ ದ ಮ ಪ ಮ ರಿ ಗ ಸ
 

ಸ ಗ ರಿ ಗ ಮ ನಿ ದ ನಿ ಸ
ಸ ನಿ ದ ಮ ಪ ಮ ರಿ ಗ ಸ
 
ನಭಾವಮಧ್ಯ-
ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ ಒಂದು
 

ಜನ್ಯರಾಗ,
 
ಸ ರಿ ಮ ಪ ನಿ ಸ
 

 
ಸ ನಿ ದ ಪ ಮ ಗ ರಿ ಸ
 

ಸ ರಿ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
 
ನಟನ ದೀಪಕ-
ಈ ರಾಗವು ೪೧ನೆ ಮೇಳಕರ್ತ ಪಾವನಿಯ ಒಂದು
 

ಜನ್ಯರಾಗ,
 
ಸ ರಿ ಗ ಮ ದ ನಿ ಸ
ನಿ
 
ಸ ನಿ ಮ ಗ ರಿ ಗ ಸ
 

ಸ ರಿ ಗ ಮ ದ ನಿ ಸ
ಸ ನಿ ಮ ಗ ರಿ ಗ ಸ
 
ನಟನಪ್ರಿಯ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 

ಜನ್ಯರಾಗ,