This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಧೇನುಕ-ಈ ರಾಗವು ನೇತ್ರ ಚಕ್ರದ ೩ನೆಯ ರಾಗ, ೯ನೆ ಮೇಳಕರ್ತರಾಗ,

ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ
 
೫೭೫
 

ಶುದ್ಧರಿಷಭ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು

ಕಾಕಲಿನಿಷಾದಗಳು ಈ ರಾಗದ ಸ್ವರಸ್ಥಾನಗಳು, ರಿಷಭ, ನಿಷಾದಗಳು ರಾಗ ಛಾಯಾ

ಸ್ವರಗಳು. ಗಾಂಧಾರ, ನಿಷಾದಗಳು ಜೀವಸ್ವರಗಳು. ಗಾಂಧಾರ, ಧೈವತಗಳು
 
ವಾದಿ ಸಂವಾದಿಗಳು.
 

ಈ ರಾಗವು ತ್ಯಾಗರಾಜರ - ತೆಲಿಯಲೇರು ರಾಮ' ಎಂಬ
 

ಕೃತಿಯಿಂದ ಬೆಳಕಿಗೆ ಬಂದಿತು.
 
ಧೈವತ-

 
ಧೈವತ
ಇದು ಸಂಗೀತದ ಸಪ್ತ ಸ್ವರಗಳಲ್ಲಿ ಆರನೆಯ ಸ್ವರ. ಧ್ವನಿದಾರ್ಡ್ಯತೆ

ಯನ್ನು ಹೊಂದಿ ವೀರರಸ ಪ್ರಚೋದಕವಾಗಿದೆ.
 

 
ಧೈವತಿ-
ಇದು ಷಡ್ ಗ್ರಾಮದ ಸಪ್ತ ಶುದ್ಧ ಜಾತಿಗಳಲ್ಲಿ ಒಂದು ಶುದ್ಧ ಜಾತಿ,

ಇದು ಶಂಕರಾಭರಣ ರಾಗದ ನಿಷಾದ ಮೂರ್ಛನವಾಗುತ್ತದೆ ಮತ್ತು ಇದೊಂದು

ವಿಕೃತ ಪಂಚಮಮೇಳ,
 
ಧೈವತ

 
ಧೈವತದ್ವ
ಯ ಭಾಷಾಂಗರಾಗ
ಕೋಮಲ ಮತ್ತು ತೀವ್ರ ಧೈವತ

ವಿರುವ ಭಾಷಾಂಗರಾಗ, ಒಂದು ಧೈವತವು ಸ್ವಕೀಯ ಸ್ವರವಾಗಿಯೂ ಮತ್ತೊಂದು

ಅನ್ಯಸ್ವರವಾಗಿಯೂ ಇರುತ್ತದೆ. ಭೈರವಿ ರಾಗವು ಇದಕ್ಕೆ ನಿದರ್ಶನ ಇದರಲ್ಲಿ

ಶುದ್ಧವತವು ಸ್ವಕೀಯ ಸ್ವರವಾಗಿಯೂ, ಚತುಶ್ರುತಿ ಧೈವತವು ಅನ್ಯಸ್ವರ
 
ವಾಗಿಯೂ ಇವೆ.
 

 
ಧೈರ್ಯಂಕರಿ-
ಕೀ ಟು ಹಿಂದೂ ಮ್ಯೂಸಿಕ್' (Key to Hindu

Music) ಎಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಜನ್ಯರಾಗ,
 

 
ಧೈರ್ಯಮುಖಿ.
ಈ ರಾಗವು ೯ನೆ ಮೇಳಕರ್ತ ಧೇನುಕದ ಒಂದು
 

ಜನ್ಯರಾಗ,
 
ಆ :
 
ಅ .
 

ಸ ರಿ ಗ ಮ ಪ ದ ಸ
 

ಸ ನಿ ಪ ಮ ಸ ರಿ ಗ
 

 
ಧೈರ್ಯೋದಾರಿ-
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ

ಒಂದು ಜನ್ಯರಾಗ.
 

ಸ ಗ ಮ ಪ ನಿ ಸ
 

ಸ ದ ಪ ಮ ರಿ ಗ ರಿ ಸ
 

 
ಧೈವತಭೂಷಿತ
ಸಂಗೀತಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
 

ಒಂದು ರಾಗ.
 
ಭೈರುಂ

 
ಧ್ವೌಝಂ
ಕಾರ-
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ

ಒಂದು ಜನ್ಯರಾಗ,