This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅಂಚಿತವೆಂದರೆ ಅಹಿತ, ನಡೆ, ನೋಡುವುದು ಮೊದಲಾದುವನ್ನು ಸೂಚಿಸಲು,

ತಲೆಯೊಂದಿಗೆ ಹಿಂದಕ್ಕೆ ಕತ್ತನ್ನು ತಿರುಗಿಸಿ ಮುಖ ತೋರದಿರುವ ಕ್ರಿಯೆ.
 

 
ಅಂಜಲಿಹಸ್ತ-
ಭರತ ಮುನಿಯು ಹೇಳಿರುವ ಒಂದು ಬಗೆಯ ಸಂಯುತ

ಹಸ್ತಮದ್ರೆ. ಎರಡು ಪತಾಕಹಸ್ತಗಳು ಅಭಿಮುಖವಾಗಿ ಕೂಡುವುದರಿಂದ

ಉಂಟಾಗುವ ಹಸ್ತ ಮುದ್ರೆ, ದೇವತೆಗಳಿಗೆ ಗುರುಗಳಿಗೆ, ಮಿತ್ರರಿಗೆ ಮಾಡುವ

ಅಭಿವಾದನದಲ್ಲಿ

ದೇವತಾವಂದನೆಯಲ್ಲಿ
 

ಉಪಯೋಗಿಸಲಾಗುತ್ತದೆ.
 

ತಲೆಯ
 

ಮೇಲ್ಬಾಗದಲ್ಲ, ಗುರುವಂದನೆಯಲ್ಲಿ ಮುಖದ ಎದುರಿನಲ್ಲ, ಮಿತ್ರವಂದನೆಯಲ್ಲಿ

ಎದೆಯ ಮುಂಭಾಗದಲ್ಲಿ ಈ ಹಸ್ತಮುದ್ರೆಯನ್ನು ಉಪಯೋಗಿಸಬೇಕು.
 
೫೨
 

 
ಅಜಂತ ಗುಹೆಗಳು -
ಆಂಧ್ರ ಪ್ರದೇಶದ ವಾಯವ್ಯದ ಗಡಿಯಲ್ಲಿ ಔರಂಗಾ

ಬಾದಿನ ಸಮಾಜದಲ್ಲಿ ಅಜಂತ ಗುಡ್ಡಗಳಿವೆ. ಇಲ್ಲಿ ವಾಘೋರ ಎಂಬ ಸಣ್ಣ ನದಿ

ಹರಿಯುತ್ತದೆ.

ಈ ಗುಡ್ಡಗಳಿಗೆ ಈಶಾನ್ಯದಲ್ಲಿ ಸುಮಾರು ಒಂದೂವರೆ ಸಾವಿರ

ವರ್ಷಗಳ ಹಿಂದೆ ವಿದರ್ಭ ರಾಜ್ಯಕ್ಕೆ ಸೇರಿದ ಇಂದು ಕಾಂತವೆಂಬ ಪಟ್ಟಣವೊಂದು

ತೆಂದು ಚರಿತ್ರಕಾರರು ಹೇಳುತ್ತಾರೆ. ಇಲ್ಲಿಗೆ ಬರುತ್ತಿದ್ದ ಬೌದ್ಧ ಸಂನ್ಯಾಸಿಗಳು

ಮನಶ್ಯಾಂತಿಗೂ ತಪಸ್ಸಿಗೂ ಅನುಕೂಲಿಸುವಂತೆ ನಿರ್ಜನವಾದ, ಸುಂದರವಾದ

ಶಾಂತವಾದ ಕೆಲವು ಗುಹೆಗಳಲ್ಲಿ ವಾಸಿಸುತ್ತಿದ್ದರು. ಸಂನ್ಯಾಸಿಗಳ ಸಂಖ್ಯೆ

ಹೆಚ್ಚಿದಂತೆಲ್ಲಾ ಗವಿಗಳನ್ನು ಕೊರೆಯುತ್ತಿದ್ದರು. ಹೀಗೆ ಅಜಂತದಲ್ಲಿ ೨೯ ಗವಿಗಳು

ಕೊರೆಯಲ್ಪಟ್ಟಿವೆ. ಇವು ಪ್ರಾಚೀನ ಭಾರತದ ಕಲಾ ಕೇಂದ್ರವಾದುವು.

ಇವುಗಳ ಕಾಲ ಸುಮಾರು ಕ್ರಿ.ಪೂ. ೨೦೦ ರಿಂದ ಕ್ರಿ.ಶ. ೮೦೦ರವರೆಗೆ, ಇಲ್ಲಿ

ಈಗ ಆರು ಗವಿಗಳಲ್ಲಿ ಮಾತ್ರ ಚಿತ್ರಗಳು ಉಳಿದು ಕೊಂಡಿವೆ. ಇವೆಲ್ಲಾ ಬೇರೆ ಬೇರೆ

ಕಾಲದವು. ಅಜಂತ ಚಿತ್ರ ಕಲೆಯು ಭಾರತೀಯ ಹೃದಯದಿಂದ ಜನಿಸಿದುದು.

ಭಾರತೀಯರ ಅತಿಶ್ಚಾತ್ಯರಾದ ಮನೋಭಾವವನ್ನು ನಿರೂಪಿಸುತ್ತದೆ. ಇವುಗಳ

ಪ್ರಧಾನ ಭಾವವು ವೈರಾಗ್ಯ, ಮನುಷ್ಯರ ಕಲೆಗಳ ಇತಿಹಾಸದಲ್ಲಿ ಇವಕ್ಕೆ ಉನ್ನತ

ಸ್ಥಾನವು ಸಹಜವಾಗಿ ದೊರೆತಿದೆ

ಮೊದಲನೆಯ ಗುಹೆಯ ಚಿತ್ರ ಒಂದರಲ್ಲಿ ಒಬ್ಬ

ದೇವಲೋಕದ ಸಂಗೀತಗಾರನು ಮ್ಯಾಂಡೊಲಿನ್ ವಾದ್ಯವನ್ನು ಹೋಲುವ ಒಂದು

ತಂತಿ ವಾದ್ಯವನ್ನು ನುಡಿಸುತ್ತಿದ್ದಾನೆ. ಬುದ್ಧನ ತ್ಯಾಗದ ದೃಶ್ಯವಿರುವ ಚಿತ್ರ

ಒಂದರಲ್ಲಿ ಕೊಳಲುಗಳನ್ನು ನುಡಿಸುತ್ತಿರುವ ಕೂಟಚಿತ್ರವಿದೆ. ಈ ಕೊಳಲುಗಳನ್ನು

ವಾದಕನ ಬಲಗಡೆಗೆ ಹಿಡಿದಿರುವುದು ಕಂಡು ಬರುತ್ತದೆ. ಈ ಗುಹೆಯ ಹೊರ

ಭಾಗದಲ್ಲಿ ಪುರಾತನ ವಾದ್ಯವಾದ ಯಾನ ಒಂದು ಚಿತ್ರವಿದೆ.
 

ಎರಡನೆಯ ಗುಹೆಯಲ್ಲಿ ಪ್ರಸಿದ್ಧ ನೃತ್ಯ ಒಂದರ ದೃಶ್ಯವಿದೆ. ನಾಟ್ಯಗಾರರ

ತೆಳುವಾದ ಉಡುಪು ಗಮನಾರ್ಹ ಪಕ್ಕವಾದ್ಯಗಾರರಾದ ಸ್ತ್ರೀಯರು ತಬಲ,

ಬಾಯಾ, ಮೃದಂಗ, ಶಂಖ ಮತ್ತು ಕೊಳಲನ್ನು ನುಡಿಸುತ್ತಿದ್ದಾರೆ. ಯುದ್ಧದ

ನಗಾರಿಯ ಚಿತ್ರವೂ ಈ ಗುಹೆಯಲ್ಲಿದೆ. ೧೭ನೆಯ ಗವಿಯಲ್ಲಿ ಅರಮನೆಯ