This page has not been fully proofread.

ಸಂಗೀತ ಪಾರಿಭಾಷಿಕ ಶ
 
ಇವರ ವಾದನದಲ್ಲಿ
 
ಕಚೇರಿಗಳಲ್ಲಿ ನುಡಿಸಿ ಖ್ಯಾತರಾಗಿದ್ದಾರೆ, ೧೯೪೭ರಲ್ಲಿ ಮೈಸೂರಿನ ಆಸ್ಥಾನ
ವಿದ್ವಾಂಸರಾದರು. ೧೯೫೧ ರಿಂದ ೧೯೬೩ರ ವರೆಗೆ ಮೈಸೂರಿನ ಮಹಾರಾಣಿ
ಕಾಲೇಜಿನಲ್ಲೂ, ನಂತರ ಮೈಸೂರಿನ ಲಲಿತಕಲಾ ಕಾಲೇಜಿನಲ್ಲಿ ವೀಣೆ ಪ್ರಾಧ್ಯಾಪಕ
ರಾಗಿದ್ದು ಅನೇಕ ಶಿಷ್ಯರನ್ನು ತಯಾರಿಸಿ ನಿವೃತ್ತರಾಗಿದ್ದಾರೆ.
ಹಿತವಾದ ಮಾಟು, ರಾಗವಿಸ್ತಾರ, ಉತ್ತಮವಾದ ಸ್ವರಕಲ್ಪನೆ, ಆಹ್ಲಾದಕರ
ಶೈಲಿಗಳು ಪ್ರಮುಖವಾಗಿವೆ.
ಇವರು ವಾಗ್ಗೇಯಕಾರರಾಗಿ ಹಲವು ಬಗೆಯ
ಸಂಗೀತ ರಚನೆಗಳನ್ನು ಮಾಡಿದ್ದಾರೆ. ಇವರ ಬಿರುದುಗಳಲ್ಲಿ 'ವೈಣಿಕ ವಿದ್ಯಾವಾರಿಧಿ'
 
ಒಂದು
 
೫೬೦
 
ದ್ವಂದತಾಳ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ೧೨೦
ದೇಶೀತಾಳಗಳಲ್ಲಿ ಒಂದು ತಾಳ
ಎರಡು ಲಘು, ಮೂರು ಗರು, ಒಂದು ಲಘು,
ಒಂದು ಪ್ಲುತ ಇದರ ಅಂಗಗಳು.
 
ದ್ವಂದ್ವತ್ಪಲ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಒಂದು ಜನ್ಯರಾಗ,
 
ಸ ಗ ಮ ಪ ಸ ಸ
 
ಸ ನಿ ಪ ದ ಪ ಮ ಗ ರಿ ಸ
 
ಧ್ವಜೋನ್ನತ ಈ ರಾಗವು ೨೯ನ ಮೇಳಕರ್ತ ಧೀರಶಂಕರಾಭರಣದ
 
ಒಂದು ಜನ್ಯರಾಗ.
 
ಸ ರಿ ಗ ಮ ದ ನಿ ಸ
ಸ ಪ ಮ ಗ ರಿ ಸ
 
ದ್ವಯಾನುಗ-ಗಾಯನ ಮತ್ತು ನೃತ್ಯಗಳೆರಡಕ್ಕೂ ಪಕ್ಕವಾದ್ಯವಾಗಿ
ಉಪಯೋಗಿಸುವ ಸಂಗೀತ ವಾದ್ಯಕ್ಕೆ ದ್ವಯಾನುಗ ಎಂದು ಹೆಸರು. ಇದಕ್ಕೆ
ಉಭಯಾನುಗ ಎಂದು ಶಿಲಪ್ಪದಿಕಾರಂ ಎಂಬ ತವಿಳು ಗ್ರಂಥದ ವ್ಯಾಖ್ಯಾನ
ಕೃತವಾದ ಅಡಿಯಾನಾರ್ ಹೆಸರಿಸಿದ್ದಾನೆ. ಶಾರ್ಙ್ಗದೇವನು ಸಂಗೀತ
ರತ್ನಾಕರವೆಂಬ ಗ್ರಂಥದಲ್ಲಿ ಸಂಗೀತವಾದ್ಯಗಳನ್ನು ಅವುಗಳ ಬಳಕೆಯನ್ನು ಅನುಸರಿಸಿ
ಈ ರೀತಿ ವರ್ಗಿಕರಿಸಿದ್ದಾನೆ
 
(೧) ಸುಖ-ತನಿಯಾಗಿ ನುಡಿಸುವ ವಾದ್ಯ. ಉದಾ : ವೀಣೆ
 
(೨) ಗೀಕಾನುಗಂ-ಗಾಯನಕ್ಕೆ ಪಕ್ಕವಾದ್ಯವಾಗಿ ನುಡಿಸಲ್ಪಡುವ ವಾದ್ಯ.
ಉದಾ : ಪಿಟೀಲು,
 
(೩) ನೃತಾಸುಗಂ-ನೃತ್ಯದಲ್ಲಿ ಪಕ್ಕವಾದ್ಯವಾಗಿ ನುಡಿಸಲ್ಪಡುವ ವಾದ್ಯ
 
ಉದಾ :
 
ಕೊಳಲು.
 
(೪) ದ್ವಯಾನುಗಂ-ಗಾಯನ ಮತ್ತು ನೃತ್ಯಗಳೆರಡರಲ್ಲೂ ಪಕ್ಕವಾದ್ದ
ವಾಗಿ ನುಡಿಸಲ ಡುವ ವಾದ್ಯ, ಉದಾ : ಮೃದಂಗ, ತಬಲ,